ಬದುಕಲು ಯೋಗ್ಯ ನಗರ: ಬೆಂಗಳೂರಿಗೆ 3ನೇ ಸ್ಥಾನ

ನವದೆಹಲಿ: ಭಾರತದಲ್ಲಿ ಬದುಕಲು ಯೋಗ್ಯವಾದ ನಗರಗಳ ಪೈಕಿ ಬೆಂಗಳೂರಿಗೆ 3ನೇ ಸ್ಥಾನ. ರಾಷ್ಟ್ರ ರಾಜಧಾನಿ ದೆಹಲಿಗೆ ಕೊನೇ ಸ್ಥಾನ.
ಇದು ಇಸಿಎ ಇಂಟರ್‌ನ್ಯಾಷನಲ್ ಸಂಸ್ಥೆಯು ನಡೆಸಿದ ಲೊಕೇಷನ್ ರೇಟಿಂಗ್ಸ್ ವರದಿ. ವಿಶ್ವದಲ್ಲೇ ಬದುಕಲು ಯೋಗ್ಯವಾದ ನಗರಗಳ ಪೈಕಿ ಬೆಂಗಳೂರು 171ನೇ ಸ್ಥಾನ ಪಡೆದರೆ, ಭಾರತದಲ್ಲಿ 3ನೇ ಸ್ಥಾನ ಪಡೆದಿದೆ. ಮೊದಲ ಮತ್ತು ದ್ವಿತೀಯ ಸ್ಥಾನ ಕ್ರಮವಾಗಿ ಮುಂಬೈ ಮತ್ತು ಚೆನ್ನೈ ಪಾಲಾಗಿದೆ.
ಜಗತ್ತಿನ ಉತ್ತಮ ನಗರಗಳ ಪಟ್ಟಿಯಲ್ಲಿ ಬೀಜಿಂಗ್ ಮತ್ತು ದೆಹಲಿ ಕೊನೆಯ ಸ್ಥಾನ ಪಡೆದಿವೆ. ಏಷ್ಯಾದಲ್ಲಿ ಮತ್ತು ಜಗತ್ತಿನಲ್ಲಿ ಬದುಕಲು ಅತ್ಯಂತ ಯೋಗ್ಯವಾದ ನಗರವೆಂದರೆ ಸಿಂಗಾಪುರ. ಇದರ ನಂತರದ ಸ್ಥಾನ ಸಿಡ್ನಿ ಮತ್ತು ಅಡಿಲೈಡ್‌ನದ್ದು ಎಂದು ವರದಿ ತಿಳಿಸಿದೆ.
ಗಾಳಿಯ ಗುಣಮಟ್ಟ, ಉತ್ತಮ ಮೂಲಸೌಕರ್ಯ, ಶಿಸ್ತುಬದ್ಧ ವೈದ್ಯಕೀಯ ಸೌಲಭ್ಯ, ಕಡಿಮೆ ಅಪರಾಧ ಪ್ರಕರಣಗಳು ಸಿಂಗಾಪುರವನ್ನು ಅಗ್ರ ಸ್ಥಾನಕ್ಕೇರಿಸಿದೆ. ಈ ವರದಿ ಸಿದ್ಧಪಡಿಸಲು ವಿಶ್ವದ ಒಟ್ಟು 450 ನಗರಗಳನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


