ಮತ್ತೆ ಬಂತು ಸಾಕು ಪ್ರಾಣಿ-ಪಕ್ಷಿಗಳ ಪ್ರದರ್ಶನ
ಪ್ರಧಾನಿ ನರೇಂದ್ರ ಮೋದಿ ಅವರ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಛ ಭಾರತ ಅಭಿಯಾನದ ಸ್ಫೂರ್ತಿಯಿಂದ ಬೆಂಗಳೂರು ಮುದ್ದು ಪ್ರಾಣಿಗಳ ಪ್ರದರ್ಶನದ ಎರಡನೆ ಅವತರಿಣಿಕೆ ವಿಶೇಷ ವಿಷಯದೊಂದಿಗೆ ಶನಿವಾರ ಬೆಂಗಳೂರಿನಲ್ಲಿ ಚಾಲನೆ ಕಂಡಿತು - 'ಸ್ಕೂಪ್ ಯುವರ್ ಪೆಟ್ಸ್ ಪೂಪ್" (ನಿಮ್ಮ ಮುದ್ದು ಪ್ರಾಣಿಯ ಮಲವನ್ನು ನೀವೇ ಎತ್ತಿ ಹಾಕಿ).
"ಸಾರ್ವಜನಿಕ ಸ್ಥಳಗಳಲ್ಲಿ ತಮ್ಮ ಸಾಕುಪ್ರಾಣಿಗಳನ್ನು ಕಾಲ್ನೆಡಿಗೆಗೆ ಕರೆದುಕೊಂಡು ಹೋಗುವವರು, ಅವುಗಳ ಮಲ ಸಂಗ್ರಹ ವಸ್ತುವನ್ನು ಜೊತೆಗೆ ಕೊಂಡೊಯ್ಯಲು ನಾವು ಈ ಪ್ರಾಣಿಗಳ ಮಾಲೀಕರಿಗೆ ಅರಿವು ಮೂಡಿಸುತ್ತಿದ್ದೇವೆ. ಇದರಿಂದ ಕಾಲ್ನಡಿಗೆಯ ಜಾಗಗಳು ಸ್ವಚ್ಚವಾಗಿರುತ್ತವೆ" ಎನ್ನುತ್ತಾರೆ ಈ ಪ್ರದರ್ಶನದ ನಿರ್ದೇಶಕ ಸತ್ಯ ನಾರಾಯಣ್.
ಈ ಎರಡು ದಿನದ ಕಾರ್ಯಕ್ರಮದಲ್ಲಿ ಬಹು ವಿಧದ ನಾಯಿಗಳು, ಬೆಕ್ಕುಗಳು, ಪಕ್ಷಿಗಳು ಮತ್ತು ಮೀನುಗಳ ಪ್ರದರ್ಶನವನ್ನು ವೀಕ್ಷಿಸಬಹುದಾಗಿದೆ. ಕೆಲವು ಅಪರೂಪದ ಪಕ್ಷಗಳು, ೫೦ ಕ್ಕಿಂತಲೂ ಹೆಚ್ಚಿನ ನಾಯಿ ಮತ್ತು ಬೆಕ್ಕಿನ ತಳಿಗಳು ಅಲ್ಲದೆ ಸುಂದರವಾದ ಮೀನುಗಳು ಕೂಡ ಇಲ್ಲಿ ಪ್ರದರ್ಶನಗೊಳ್ಳುತ್ತಿವೆ ಎನ್ನುತ್ತಾರೆ ಸಂಘಟಕರು.
ಕಂಟೋನ್ ಮೆಂಟ್ ರೈಲ್ವೇ ನಿಲ್ದಾಣದ ಬಳಿ ಇರುವ ಜಯಮಹಲ್ ಪ್ಯಾಲೆಸ್ ಹೋಟೆಲ್ ನಲ್ಲಿ ಈ ಪ್ರದರ್ಶನ ಏರ್ಪಡಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


