ಕೊಲೆ ಪ್ರಕರಣ: ನಾಲ್ವರು ಆರೋಪಿಗಳ ಬಂಧನ
ಮಹಾಲಕ್ಷ್ಮಿಬಡಾವಣೆ ಕಮಲಮ್ಮನ ಗುಂಡಿ ಆಟದ ಮೈದಾನದಲ್ಲಿ ಹೇಮಂತ ಎಂಬಾತನ ಕೊಲೆ ಪ್ರಕರಣ ಸಂಬಂಧ ನಾಲ್ವರು...

ಬೆಂಗಳೂರು: ಮಹಾಲಕ್ಷ್ಮಿಬಡಾವಣೆ ಕಮಲಮ್ಮನ ಗುಂಡಿ ಆಟದ ಮೈದಾನದಲ್ಲಿ ಹೇಮಂತ ಎಂಬಾತನ ಕೊಲೆ ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ಮಹಾಲಕ್ಷ್ಮಿಬಡಾವಣೆ ಪೊಲೀಸರು ಬಂಧಿಸಿದ್ದಾರೆ.
ಕೊಟ್ಟಿಗೆ ಪಾಳ್ಯ ನಿವಾಸಿ ಕಾರು ಚಾಲಕ ಕೃಷ್ಣಮೂರ್ತಿ(35), ಪೀಣ್ಯ ಚೌಡೇಶ್ವರಿ ನಗರದ ಮಹೇಶ್(23), ತುಮಕೂರಿನ ಗುಬ್ಬಿಯ ರುದ್ರೇಶ್(42) ಹಾಗೂ ಕಾಮಾ ಕ್ಷಿಪಾಳ್ಯದ ನಾಗರಾಜು(40) ಬಂಧಿತರು. ಬಂಧಿತ ಆರೋಪಿ ಕೃಷ್ಣಮೂರ್ತಿಯ ಪತ್ನಿಯೊಂದಿಗೆ ಕೊಲೆಯಾದ ಹೇಮಂತ್ ಅಕ್ರಮ ಸಂಬಂಧ ಇರಿಸಿಕೊಂಡಿದ್ದ. ಅಲ್ಲದೇ, ಹೇಮಂತ್ ಕಾರು ಕೊಳ್ಳಲು ಕೃಷ್ಣಮೂರ್ತಿ ಪತ್ನಿ ರು.1 ಲಕ್ಷ ಸಾಲಕ್ಕೆ ಭದ್ರತಾ ಸಹಿ ಮಾಡಿದ್ದಳು.
ಈ ವಿಷಯ ತಿಳಿದು ಕೋಪಗೊಂಡಿದ್ದ ಕೃಷ್ಣಮೂರ್ತಿ, ಪರಿಚಿತರಾದ ಮೂವರನ್ನು ಸೇರಿಸಿಕೊಂಡು ಕೊಲೆಗೆ ಸಂಚು ರೂಪಿಸಿದ್ದ. ಫೆ..22ರಂದು ಮಲ್ಲತ್ತಹಳ್ಳಿಯ ಆತನ
ಮನೆಯಿಂದ ಕೆಲಸವಿದೆ ಎಂದು ಟಿಟಿ ವಾಹನದಲ್ಲಿ ಕರೆದುಕೊಂಡು ಹೋಗಿ ಕಬ್ಬಿಣದ ರಾಡ್‍ನಿಂದ ಹೊಡೆದು ಕೊಲೆ ಮಾಡಿ ಶವವನ್ನು ಕಮಲಮ್ಮನ ಗುಂಡಿ ಆಟದ ಮೈದಾನದ ಪಕ್ಕದ ಕಸದ ರಾಶಿಯ ಬಳಿ ಬಿಸಾಡಿ ನಂತರ ಮುಖದ ಗುರುತು ಸಿಗದಂತೆ ಮೇಲೆ ಬಟ್ಟೆ ಹಾಕಿ, ಕಲ್ಲು ಎತ್ತಿ ಹಾಕಿ ಪರಾರಿಯಾಗಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


