ಕಲ್ಲಿನಿಂದ ಜಜ್ಜಿ ಬಾಲಕನ ಕೊಲೆ
ಡಿ.ಜೆ ಹಳ್ಳಿ ರೋಷನ್ ನಗರದಲ್ಲಿ ಬಾಲಕ ಗೌಸ್(16) ಎಂಬಾತನನ್ನು ದುಷ್ಕರ್ಮಿಗಳು ಕಲ್ಲಿನಿಂದ ಜಜ್ಜಿ...

ಬೆಂಗಳೂರು: ಡಿ.ಜೆ ಹಳ್ಳಿ ರೋಷನ್ ನಗರದಲ್ಲಿ ಬಾಲಕ ಗೌಸ್(16) ಎಂಬಾತನನ್ನು ದುಷ್ಕರ್ಮಿಗಳು ಕಲ್ಲಿನಿಂದ ಜಜ್ಜಿ ಭೀಕರವಾಗಿ ಕೊಲೆಗೈದಿದ್ದಾರೆ. ಬುಧವಾರ ಬೆಳಗ್ಗೆ ರೋಷನ್ ನಗರ ಸಮೀಪದಲ್ಲೇ ಕಸ ಹಾಗೂ ಇತರ ತ್ಯಾಜ್ಯ ಬಿಸಾಡುವ ಹಳ್ಳದಂಥ ಜಾಗದಲ್ಲಿ ಶವ ಬಿದ್ದಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಕಲ್ಲಿನಿಂದ ತಲೆ ಹಾಗೂ ಮುಖ ಕ್ಕೆ ಜಜ್ಜಿ ಕೊಲೆಗೈದಿದ್ದಾರೆ. ಶವ ಪತ್ತೆಯಾದ ಜಾಗದಲ್ಲೇ ಕೊಲೆ ನಡೆದಿರುವ ಸಾಧ್ಯತೆ ಯಿದ್ದು, ಜಗಳವಾಗಿರುವ ಸುಳಿವು ಕಂಡು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಡಿ.ಜೆ ಹಳ್ಳಿಯಲ್ಲಿರುವ ಸರ್ಕಾರಿ ಶಾಲೆಯಲ್ಲಿ ಗೌಸ್ 9ನೇ ತರಗತಿ ಓದುತ್ತಿದ್ದ. ಶಾಲೆಗೆ ಸರಿಯಾಗಿ ಹೋಗುತ್ತಿರಲಿಲ್ಲ. ಆದರೆ, ಆಗಾಗ ಅಡುಗೆ ಕೆಲಸಕ್ಕೆ ಹೋಗುತ್ತಿದ್ದ.
ಹೊರಗೆ ಹೋದರೆ ಒಂದು ದಿನ, ಎರಡು ದಿನ ಬಿಟ್ಟು ವಾಪಸ್ ಬರುತ್ತಿದ್ದ. ಮಂಗಳವಾರ ರಾತ್ರಿಯೂ ಅಡುಗೆ ಕೆಲಸ ಇದೆ ಎಂದು ಹೇಳಿ ಹೋಗಿದ್ದ ಎಂದು ಪಾಲಕರು ತಿಳಿಸಿದ್ದಾರೆ. ಆದರೆ, ಬೆಳಗ್ಗೆ ಸಾರ್ವಜನಿಕರು ಶವ ಗಮನಿಸಿದ ನಂತರವೇ ಕೊಲೆ ನಡೆದಿರುವುದು ಗೊತ್ತಾಗಿದೆ. ಕೊಲೆ ನಡೆದ ಜಾಗಕ್ಕೂ, ಮನೆಗೂ ಕೇವಲ 500 ಮೀಟರ್ ಅಂತರವಿದೆ. ಆದರೆ, ಘಟನೆ ನಡೆದ ಜಾಗದಲ್ಲಿ ಬೀದಿದೀಪ ಇಲ್ಲ. ಮೋರಿ ಹರಿಯುತ್ತಿರುವುದರಿಂದ ಸಾರ್ವಜನಿಕರ ಓಡಾಟವೂ ಇರುವುದಿಲ್ಲ. ಹೀಗಾಗಿ ರಾತ್ರಿ ಜಗಳವಾಗಿರುವುದು ಯಾರ ಗಮನಕ್ಕೂ ಬಂದಿಲ್ಲ. ಗೌಸ್‍ನ ಸ್ನೇಹಿತರು ಅಥವಾ ಪರಿಚಿತರು ಕೃತ್ಯ ಎಸಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


