ಭ್ರಷ್ಟರ ಮೇಲೆ ಲೋಕಾ ದಾಳಿ
ಅಬಕಾರಿ ಜಾಗೃತ ದಳದ ಉಪ ಆಯುಕ್ತ ಭರತೇಶ್ ಮತ್ತು ಜಯನಗರ ಸಾರಿಗೆ ಇಲಾಖೆ ಹಿರಿಯ ವಾಹನ ನಿರೀಕ್ಷಕ ಎಂ. ಜಯರಾಮ್ ಮನೆ ಮತ್ತು ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಬೆಂಗಳೂರು: ಅಬಕಾರಿ ಜಾಗೃತ ದಳದ ಉಪ ಆಯುಕ್ತ ಭರತೇಶ್ ಮತ್ತು ಜಯನಗರ ಸಾರಿಗೆ ಇಲಾಖೆ ಹಿರಿಯ ಮೋಟಾರ್ ವಾಹನ ನಿರೀಕ್ಷಕ ಎಂ. ಜಯರಾಮ್ ಮನೆ ಮತ್ತು ಕಚೇರಿ ಮೇಲೆ ಸೋಮವಾರ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಖಚಿತ ಮಾಹಿತಿ ಆಧಾರದ ಮೇಲೆ ಲೋಕಾಯುಕ್ತ ಎಸ್‍ಪಿ ಸೋನಿಯಾ ನಾರಂಗ್ ನೇತೃತ್ವದಲ್ಲಿ ದಾಳಿ ನಡೆಸಿದ ಅಧಿಕಾರಿಗಳು, ಶೇಷಾದ್ರಿಪುರಂನಲ್ಲಿರುವ ಅಬಕಾರಿ ಉಪ ಆಯುಕ್ತ ಭರತೇಶ್ ಮನೆ ಹಾಗೂ ಕಚೇರಿ ಮನೆ ಮೇಲೆ ದಾಳಿ ನಡೆಸಿ ಅಕ್ರಮವಾಗಿ ಸಂಪಾದಿಸಿದ್ದ 1.76 ಕೋಟಿ ರೂಪಾಯಿ ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
1995ರಲ್ಲಿ ಅಬಕಾರಿ ಇಲಾಖೆಗೆ ಸೇರಿದ ಭರತೇಶ್ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ದಾಳಿ ನಡೆಸಲಾಯಿತು. ಭರತೇಶ್ ಅಕ್ರಮವಾಗಿ ಸಂಪಾದಿಸಿದ ಸ್ಥಿರಾಸ್ತಿ 65 .99 ಲಕ್ಷ, ಚರಾಸ್ತಿ 60 .57 ಲಕ್ಷ ರೂಪಾಯಿ. ಇವರ ಆದಾಯಕ್ಕೂ ಆಸ್ತಿ ಸಂಪಾದನೆಗೂ ವ್ಯತ್ಯಾಸವಿದ್ದು, ಆದಾಯ ಮೀರಿ 1 .76 ಕೋಟಿ ಆಸ್ತಿ ಸಂಪಾದಿಸಿದ್ದಾರೆ. ಇವರ ಆದಾಯ, ಆಸ್ತಿಗೂ ಶೇ.102.76 ವ್ಯತ್ಯಾಸವಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


