ತುಂಗಾ ನಾಲೆ ಆಧುನೀಕರಣ ಕಾಮಗಾರಿ ವಿರುದ್ಧ ಲೋಕಕ್ಕೆ ದೂರು ಕೊಟ್ಟ ಬಿಜೆಪಿ ನಿಯೋಗ
ಶಿವಮೊಗ್ಗದಲ್ಲಿ ನಡೆಯುತ್ತಿರುವ ತುಂಗಾ ಎಡ ಹಾಗೂ ಬಲದಂಡೆ ಆಧುನೀಕರಣ ಕಾಮಗಾರಿಯಲ್ಲಿ ನಡೆದ ಅಕ್ರಮ ಕುರಿತ ದೂರು ನೀಡಲು ಬಿಜೆಪಿ ನಿಯೋಗ...

ಬೆಂಗಳೂರು: ಶಿವಮೊಗ್ಗದಲ್ಲಿ ನಡೆಯುತ್ತಿರುವ ತುಂಗಾ ಎಡ ಹಾಗೂ ಬಲದಂಡೆ ಆಧುನೀಕರಣ ಕಾಮಗಾರಿಯಲ್ಲಿ ನಡೆದ ಅಕ್ರಮ ಕುರಿತ ದೂರು ನೀಡಲು ಬಿಜೆಪಿ ನಿಯೋಗ ಸತತ ಮೂರುವರೆ ತಾಸು ಲೋಕಾಯುಕ್ತ ಕಚೇರಿಯಲ್ಲೇ ಕಾದ ಪ್ರಸಂಗ ಸೋಮವಾರ ನಡೆಯಿತು.
ಸೋಮವಾರ ಬೆಳಗ್ಗೆ 12 ಗಂಟೆಗೆ ಲೋಕಾಯುಕ್ತ ಕಚೇರಿಗೆ ಆಗಮಿಸಿದ ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್, ಶಾಸಕ ಸುರೇಶ್ ಕುಮಾರ್ ಹಾಗೂ ಮೇಲ್ಮನೆ ವಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ನಿಯೋಗ ದೂರು ನೀಡಲು ನೇರವಾಗಿ ರಿಜಿಸ್ಟ್ರಾರ್ ಕೊಠಡಿಗೆ ತೆರಳಿತು.
ಆದರೆ, ಲೋಕಾಯುಕ್ತ ಕಾಯ್ದೆ ಪ್ರಕಾರ ಲೋಕಾಯುಕ್ತ ರಿಜಿಸ್ಟ್ರಾರ್ ನೇರವಾಗಿ ದೂರು ಸ್ವೀಕರಿಸುವಂತಿಲ್ಲ. ಜೊತೆಗೆ ಈಶ್ವರಪ್ಪ ಅವರ ಬಳಿ ಸೂಕ್ತ ದಾಖಲೆಗಳು ಇರಲಿಲ್ಲ. ಹಾಗಾಗಿ ಲೋಕಾಯುಕ್ತ ರಿಜಿಸ್ಟ್ರಾರ್ ಬಾಲಕೃಷ್ಣ ಅವರು ದೂರು ಸ್ವೀಕರಿಸಲು ಮೀನಾಮೇಷ ಎಣಿಸಿದರು. ನಂತರ ರಿಜಿಸ್ಟ್ರಾರ್ ಬಾಲಕೃಷ್ಣ ಅವರು, ಕಾನೂನು ತಜ್ಞರ ಜೊತೆ ಚರ್ಚೆ ಕೂಡ ನಡೆಸಿದರು.
ಕೊನೆಗೆ ನಿಯೋಗ ಮಧ್ಯಾಹ್ನ 3.30ಕ್ಕೆ ದೂರು ಸಲ್ಲಿಸಿತು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಈಶ್ವರಪ್ಪ, ಯೋಜನೆ ಕಾರ್ಯಪಾಲ ಅಭಿಯಂತರರ ವಿರುದ್ಧ ದೂರು ನೀಡಿದ್ದೇವೆ. ತುಂಗಾ ಎಡ ಮತ್ತು ಬಲ ದಂಡೆ ಆಧುನೀಕರಣ ಕಾಮಗಾರಿ ನಡೆಸಲು ರಾಮಲಿಂಗಂ ಕನ್‍ಸ್ಟ್ರಕ್ಷನ್ ಕಾರ್ಪೋರೇಷನ್ ಕಂಪನಿಗೆ ಟೆಂಡರ್ ನೀಡುವ ಉದ್ದೇಶದಿಂದ ಅಲ್ವಾವಧಿ ಟೆಂಡರ್ ಕರೆದಿದ್ದಾರೆ.
ಕರ್ನಾಟಕ ನೀರಾವರಿ ನಿಗಮದ ಬೋರ್ಡ್ ಮೀಟಿಂಗ್ ನಲ್ಲಿ ಒಪ್ಪಿಗೆ ನೀಡದೆ, ರಾಜ್ಯ ಸರ್ಕಾರದೊಂದಿಗೆ ಗುತ್ತಿಗೆ ಕರಾರು ಮಾಡಿಕೊಳ್ಳದೇ 127.30 ಕೋಟಿ ಟೆಂಡರ್ ವರ್ಕ್ ಆರ್ಡರ್ ಇಲ್ಲದೇ ಕಾಮಗಾರಿ ಆರಂಭಿಸಿದ್ದಾರೆ ಎಂದು ಆರೋಪಿ ಸಿದರು.
ಲೋಕಾಯುಕ್ತಕ್ಕೆ ಬೇಕಾದ ಪೂರಕ ದಾಖಲೆಗಳನ್ನು ಕೊಟ್ಟಿದ್ದೇವೆ. ಪತ್ರಿಕಾ ಹೇಳಿಕೆಗಳು, ಫೋಟೋಗಳು ಮತ್ತಿತರ ಮಾಹಿತಿಗಳು, ದಾಖಲೆಗಳನ್ನು ಕೂಡ ನೀಡಿದ್ದೇವೆ. ಲೋಕಾಯುಕ್ತ ಕಚೇರಿಯಿಂದ ನೇರವಾಗಿ ಸಿಎಂ ಭೇಟಿ ಮಾಡಿದ ಈಶ್ವರಪ್ಪ ಪ್ರಕರಣದ ತನಿಖೆಯನ್ನು ಮಾಡುವಂತೆ ಮನವಿ ಸಲ್ಲಿಸಿದರು.
ಈಶ್ವರಪ್ಪ ಆರೋಪ ಏನು?
- ಕೆಟಿಟಿಪಿ ಕಾಯ್ದೆ ಉಲ್ಲಂಘಿಸಿ127.30 ಕೋಟಿಯ ಕಾಮಗಾರಿಗೆ ಅಲ್ಪಾವಧಿ ಟೆಂಡರ್
- ಏಕೈಕ ಗುತ್ತಿಗೆದಾರ ರಾಮಲಿಂಗಂ ಕನ್ ಸ್ಟ್ರಕ್ಷನ್ ಕಂಪನಿ ಟೆಂಡರ್ ನೀಡಲಾಗಿದೆ
- ಕರ್ನಾಟಕ ನೀರಾವರಿ ನಿಗಮದ ಬೋರ್ಡ್ ಮೀಟಿಂಗ್‍ನಲ್ಲಿ ಕಾಮಗಾರಿಗೆ ಒಪ್ಪಿಗೆ ನೀಡಿಲ್ಲ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


