ಜಿಲ್ಲಾ ಸುದ್ದಿ

ರೌಡಿ ಸಾದಿಕ್ ಕೊಲೆ ಆರೋಪಿಗಳ ಸೆರೆ

ಕಳೆದ ಐದು ದಿನಗಳ ಹಿಂದೆ ನಡೆದಿದ್ದ ರೌಡಿ ಜಾಫರ್ ಸಾದಿಕ್ ಕೊಲೆ ಪ್ರಕರಣ ಪತ್ತೆ ಹಚ್ಚಿರುವ ಪೊಲೀಸರು ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ...

ರೌಡಿ ಸಾದಿಕ್ ಕೊಲೆ ಆರೋಪಿಗಳ ಸೆರೆ
(ಸಾಂದರ್ಭಿಕ ಚಿತ್ರ)
Published On :

ಬೆಂಗಳೂರು: ಕಳೆದ ಐದು ದಿನಗಳ ಹಿಂದೆ ನಡೆದಿದ್ದ ರೌಡಿ ಜಾಫರ್ ಸಾದಿಕ್ ಕೊಲೆ ಪ್ರಕರಣ ಪತ್ತೆ ಹಚ್ಚಿರುವ ಪೊಲೀಸರು ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಅನೈತಿಕ ಸಂಬಂಧದ ದ್ವೇಷ ಪ್ರತಿಕಾರವೇ ಕೊಲೆಗೆ ಕಾರಣ ಎಂಬುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಜಯನಗರದ ದಯಾನಂದ ನಗರದ ತಬರೇಜ್ ಪಾಷ (33), ಮೊಹಮ್ಮದ್ ಸುಲ್ತಾನ್ (23), ಸೈಯದ್ ಮೊಹಮ್ಮದ್ (24), ವಾಸಿಂ (23), ರಜಿಯಾ ಸುಲ್ತಾನಾ (36) ಮತ್ತು ಅತ್ತಿಬೆಲೆಯ ಮೊಹಮ್ಮದ್ ಜಹೀರ್ (27) ಬಂಧಿತರು. ಈ ಆರೋಪಿಗಳು ಸಿದ್ದಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ದಯಾನಂದ ನಗರದಲ್ಲಿ ಡಿ.23ರಂದು ರೌಡಿಶೀಟರ್ ಜಾಫರ್ ಸಾದಿಕ್ ನನ್ನು ಹತ್ಯೆ ಮಾಡಿ ಪರಾರಿಯಾಗಿದ್ದರು. ಈ ಕೊಲೆ ಪ್ರಕರಣದ ಹಿಂದೆ ಅನೈತಿಕ ಸಂಬಂಧದ ಕಥೆಯೊಂದು ಅಡಗಿದೆ ಎಂದು ಡಿಸಿಪಿ ಲೋಕೇಶ್ ಕುಮಾರ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಆರೋಪಿ ರಜಿಯಾ ಸುಲ್ತಾನ್ ಸಹೋದರ ಮೊಹಮ್ಮದ್ ಕಮಲ್ ಅಲಿಯಾಸ್ ಚೂನ್ಯ ಮುತ್ತು ಎಂಬುವನು ಸಾದಿಕ್‍ನ ಅತ್ತಿಗೆ ಜತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದನು. ಈ ವಿಚಾರವಾಗಿ ಜಾಫರ್ ಸಾದಿಕ್ ಮತ್ತು ಮಹಮ್ಮದ್ ನಡುವೆ ಆಗಾಗ ಗಲಾಟೆ ಕೂಡ ನಡೆಯುತ್ತಿತ್ತು. ತನ್ನ ಅತ್ತಿಗೆ ಜತೆಗಿನ ಅನೈತಿಕ ಸಂಬಂಧ ಕಡಿದುಕೊಳ್ಳುವಂತೆ ಹಲವು ಬಾರಿ ಸಾದಿಕ್‍ಗೆ ಎಚ್ಚರಿಸಿದ್ದ. ಆದರೂ ಇಬ್ಬರ ಅನೈತಿಕ ಸಂಬಂಧ ಮಾತ್ರ ನಿಲ್ಲಲಿಲ್ಲ. ಎಷ್ಟೇ ಹೇಳಿದರೂ ಮೊಹಮ್ಮದ್ ತನ್ನ ಚಾಳಿ ಮುಂದುವರಿಸಿದ್ದರಿಂದ ಕೆಂಡಾಮಂಡಲ ನಾದ ಸಾದಿಕ್ ಕೊನೆಗೆ ಕೊಲೆ ಮಾಡುವ ನಿರ್ಧಾರಕ್ಕೆ ಬಂದ. ಕೊನೆಗೊಂದು ದಿನ ತನ್ನ ಸಹಚರ ಶಾರೂಖ್ ಜೊತೆಗೂಡಿ ಮೊಹಮ್ಮದ್‍ನ ಕೊಲೆ ಮಾಡಿ ತನ್ನ ಕೋಪವನ್ನು ತಣಿಸಿಕೊಂಡ.

ಜಾಫರ್ ಜೈಲಿನಿಂದ ಬಿಡುಗಡೆಯಾಗಿದ್ದ ಮೊಹಮ್ಮದ್‍ನ ಕೊಲೆ ಪ್ರಕರಣ ಸಂಬಂಧ ಜೈಲು ಸೇರಿದ್ದ ಜಾಫರ್ ಸಾದಿಕ್, ಇತ್ತೀಚೆಗಷ್ಟೇ ಜೈಲಿನಿಂದ ಬಿಡುಗಡೆಗೊಂಡಿದ್ದ. ಈ ನಡುವೆ ರಜಿಯಾ ಸುಲ್ತಾನ್ ತನ್ನ ಸಹೋದರನ ಸಾವಿನಿಂದ ಕಂಗೆಟ್ಟಿ ದ್ದಳು. ತನ್ನ ಸಹೋದರನ ಸಾವಿಗೆ ಕಾರಣನಾದ ಜಾಫರ್ ಸಾದಿಕ್ ಮೇಲೆ ಪ್ರತಿಕಾರ ತೀರಿಸಿಕೊಳ್ಳಲು ಹವಣಿಸುತ್ತಿದ್ದಳು.

ಜೈಲಿನಿಂದ ಹೊರಬಂದ ಬಳಿಕ ಜಾಫರ್ ಸಾದಿಕ್ ಆಟೋ ಓಡಿಸುವ ಕಾಯಕ ಮಾಡುತ್ತಿದ್ದ. ಆದರೆ, ದ್ವೇಷ ಪ್ರತಿಕಾರದಿಂದ ಕುದಿಯುತ್ತಿದ್ದ ರಜಿಯಾ ಸುಲ್ತಾನಾ ತನ್ನ ಪತಿ ತಬ್ರೇಜ್ ಪಾಷ ಮತ್ತು ಇತರೆ ಆರೋಪಿಗಳೊಂದಿಗೆ ಸಂಚು ರೂಪಿಸಿ ಡಿ.23 ರಂದು ಕೊಲೆಗೈದು ಪರಾರಿಯಾಗಿದ್ದರು. ಈ ಸಂಬಂಧ ದಾಖಲಾಗಿದ್ದ ಪ್ರಕರಣದ ಮೇರೆಗೆ ಕಾರ್ಯಾಚರಣೆ ಕೈಗೊಂಡು ಆರು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಮತ್ತೋರ್ವ ಆರೋಪಿ ತಲೆ ಮರೆಸಿಕೊಂಡಿದ್ದು ಶೀಘ್ರದಲ್ಲೇ ಅವನನ್ನೂ ಬಂಧಿಸಲಾಗುವುದೆಂದು ಡಿಸಿಪಿ ವಿಶ್ವಾಸ ವ್ಯಕ್ತಪಡಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.