ಜಿಲ್ಲಾ ಸುದ್ದಿ

ಸಭಾತ್ಯಾಗ ಮಾಡುವ ಸಂಸದರಿಗೇಕೆ ಹೆಚ್ಚಿಸಬೇಕು ಸಂಬಳ?: ನ್ಯಾ.ಹೆಗ್ಡೆ

ಜನರಿಂದ ಆಯ್ಕೆಯಾಗಿ ಹೋಗಿರುವ ಸಂಸದರು ಜನರ ಕೆಲಸ ಮಾಡುವ ಬದಲು ಕಲಾಪದ ವೇಳೆ ಕೂಗಾಡಿ, ಸಭಾತ್ಯಾಗ ಮಾಡುವುದರಲ್ಲೇ ಕಾಲ ಕಳೆಯುತ್ತಿದ್ದಾರೆ. ಇಂತಹ ವರ್ತನೆ ತೋರುವ ಸಂಸದರ ಸಂಬಳ ಹೆಚ್ಚು ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ...

ಸಭಾತ್ಯಾಗ ಮಾಡುವ ಸಂಸದರಿಗೇಕೆ ಹೆಚ್ಚಿಸಬೇಕು ಸಂಬಳ?: ನ್ಯಾ.ಹೆಗ್ಡೆ
ಭಾರತೀಯ ಸಾಂಸ್ಕೃತಿಕ ಅಕಾಡೆಮಿಯು ನಯನ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಶಿಕ್ಷಣ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಡಾ.ಶಾಂತವೀರ ಸ್ವಾಮೀಜಿ, ಮಾಜಿ ಸಚಿವ ಡಾ.ಎಂ.ವಿ. ರಾಜಶೇ
Published On :

ಬೆಂಗಳೂರು: ಜನರಿಂದ ಆಯ್ಕೆಯಾಗಿ ಹೋಗಿರುವ ಸಂಸದರು ಜನರ ಕೆಲಸ ಮಾಡುವ ಬದಲು ಕಲಾಪದ ವೇಳೆ ಕೂಗಾಡಿ, ಸಭಾತ್ಯಾಗ ಮಾಡುವುದರಲ್ಲೇ ಕಾಲ ಕಳೆಯುತ್ತಿದ್ದಾರೆ. ಇಂತಹ ವರ್ತನೆ ತೋರುವ ಸಂಸದರ ಸಂಬಳ ಹೆಚ್ಚು ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ ಎನ್ನುವ ಮೂಲಕ ನಿವೃತ್ತ ಲೋಕಾಯುಕ್ತ ನ್ಯಾ.ಸಂತೋಷ ಹೆಗ್ಡೆ ಅವರು ಸಂಸದರ ಸಂಬಳ ಹೆಚ್ಚಳಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

ತುಳುವೆರೆಂಕುಲು ಬೆಂಗಳೂರು ಸಂಸ್ಥೆಯು ಕಸಾಪ ಶ್ರೀಕೃಷ್ಣರಾಜ ಪರಿಷನ್ಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ 2015ರ ಬಲಿಯೇಂದ್ರ ಪುರಸ್ಕಾರ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಾವ ಪುರುಷಾರ್ಥಕ್ಕಾಗಿ ಸಂಬಳ ಹೆಚ್ಚು ಮಾಡಬೇಕು? ಸಂಸದರು ಎಂದು ಜನರ ಸಮಸ್ಯೆಗೆ ಸ್ಪಂದಿಸದೆ ಕಾಲಹರಣ ಮಾಡುತ್ತಿರುತ್ತಾರೋ ಅಲ್ಲಿಯವರೆಗೆ ಅವರ ಸಂಬಳ ಹೆಚ್ಚು ಮಾಡಬಾರದು ಎಂದು ಅಭಿಪ್ರಾಯಪಟ್ಟರು.

ಜನರ ಹಣದಿಂದಲೇ ನಡೆಯುವ ಸಂಸತ್ತಿನ ಅವಧಿ ಶ್ರೇಷ್ಠವಾದದು. ಅಲ್ಲಿ ಜನರ ಸಮಸ್ಯೆಯನ್ನು ಪ್ರಸ್ತಾಪಿಸಿ ಪರಿಹರಿಸಲು ಪ್ರಯತ್ನಿಸಬೇಕಾದ ಸಂಸದರು ವೃತ ಕಾಲವ್ಯಯ ಮಾಡುತ್ತಿದ್ದಾರೆ. ಕಾರಣಗಳಿಲ್ಲದೆ ಕೂಗಾಡಿ, ಸಭಾತ್ಯಾಗ ಮಾಡುತ್ತಾರೆ. ಅವರು ಭಾಗವಹಿಸಿದ್ದಕ್ಕಾಗಿ ಸಿಟ್ಟಿಂಗ್ ಜಾರ್ಜ್ ಪಡೆದುಕೊಳ್ಳುವ ಅವರು ಸಾರ್ವಜನಿಕರ ಶ್ರಮದ ಹಣವನ್ನು ವ್ಯರ್ಥ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಮತ್ತಷ್ಟು ಸಂಬಳ ಹೆಚ್ಚು ಮಾಡುವಂತೆ ಕೇಳುತ್ತಿರುವುದು ತರವಲ್ಲ. ಹಿಂದಿನ ಸಂಸದರ ಬದ್ಧತೆಗೂ, ಈಗಿನ ಸಂಸದರ ಬದ್ಧತೆಗೂ ಸಾಕಷ್ಟು ವ್ಯತ್ಯಾಸಗಳಿವೆ ಎಂದು ವಿಶ್ಲೇಷಿಸಿದರು.

ಇದೇ ವೇಳೆ ಸಾಹಿತಿ ಉದಯ ಧರ್ಮಸ್ಥಳ, ಸುವರ್ಣನ್ಯೂಸ್ ಕವರ್ ಸ್ಟೋರಿ ಖ್ಯಾತಿಯ ವಿಜಯಲಕ್ಷಿ ್ಮೀ ಶಿಬರೂರು, ಕಲಾವಿದ ವಿಲಾಸ್ ನಾಯಕ್ ಅವರಿಗೆ 2015ನೇ ಸಾಲಿನ ಬಲಿಯೇಂದ್ರ ಪುರಸ್ಕಾರ ನೀಡಿ ಗೌರವಿಸಲಾಯಿತು. ಶಿಕ್ಷಣ ತಜ್ಞ ಡಾ.ಕೆ.ಇ. ರಾಧಾಕೃಷ್ಣ, ಪತ್ರಕರ್ತ ಜೋಗಿ, ಕೆ.ಎನ್. ಅಡಿಗ ಅಡೂರು ಇತರರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.