ಜಿಲ್ಲಾ ಸುದ್ದಿ

ಹಲ್ಲು ಸೆಟ್ ನುಂಗಿದ ಅಜ್ಜ!

ರಾತ್ರಿ ಬಿಚ್ಚಿಡಬೇಕಾದ ಹಲ್ಲು ಸೆಟ್‍ನ್ನು ಹಾಗೆಯೇ ಬಾಯಲ್ಲಿ ಇಟ್ಟುಕೊಂಡು ಮಲಗಿದ್ದ ಅಜ್ಜ ಅದನ್ನೇ ನುಂಗಿ ಬಿಟ್ಟಿದ್ದರು.

ಹಲ್ಲು ಸೆಟ್ ನುಂಗಿದ ಅಜ್ಜ!
Published On :

ಕೊಪ್ಪಳ: ರಾತ್ರಿ ಬಿಚ್ಚಿಡಬೇಕಾದ ಹಲ್ಲು ಸೆಟ್‍ನ್ನು ಹಾಗೆಯೇ ಬಾಯಲ್ಲಿ ಇಟ್ಟುಕೊಂಡು ಮಲಗಿದ್ದ ಅಜ್ಜ ಅದನ್ನೇ ನುಂಗಿ ಬಿಟ್ಟಿದ್ದರು. ಗಂಟಲಲ್ಲಿ ಸಿಕ್ಕಿಹಾಕಿಕೊಂಡಿದ್ದ ಹಲ್ಲು ಸೆಟ್‍ನ್ನು ವೈದ್ಯರು ಚಾಣಾಕ್ಷತನದಿಂದ ತೆಗೆದಿದ್ದು, ಅಜ್ಜ ಆರೋಗ್ಯವಾಗಿದ್ದಾರೆ.
ನಗರದ ನಿವಾಸಿ ಎಸ್. ಶೇಖರಪ್ಪ ಸಜ್ಜನ (60) ಹಲ್ಲು ಸೆಟ್ ನುಂಗಿ ಅಪಾಯದಿಂದ ಪಾರಾಗಿದ್ದಾರೆ. ರಾತ್ರಿ ಊಟ ಮಾಡಿ ಮಲಗುವ ಮುನ್ನ ಎರಡು ಹಲ್ಲುಗಳ ಸೆಟ್ ಬಿಚ್ಚಿಡುತ್ತಿದ್ದರು. ಆದರೆ, ಮಂಗಳವಾರ ರಾತ್ರಿ ಮರೆತು ಹಾಗೆಯೇ ಮಲಗಿದ್ದರು.
ರಾತ್ರಿ 10.30ರ ವೇಳೆಗೆ ಉಸಿರಾಟದ ತೊಂದರೆ ಹಾಗೂ ಗಂಟಲು ನೋವು ಕಾಣಿಸಿಕೊಂಡು ಚಡಪಡಿಸಲು ಆರಂಭಿಸಿದ್ದಾರೆ. ಮನೆಯವರೆಲ್ಲ ಎದ್ದು ಕುಳಿತು ಗಾಬರಿಯಾಗಿದ್ದರು. ಅಜ್ಜನ ಹಲ್ಲಿನ ಸೆಟ್ ಇಲ್ಲದೇ ಇರುವುದನ್ನೆ ಕಂಡು ಬೆಚ್ಚಿ ಬಿದ್ದಿದ್ದಾರೆ. ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಡಾ. ಮಲ್ಲಿಕಾರ್ಜುನ ಅವರು ಎಕ್ಸರೇ ಮಾಡಿಸಿ ನೋಡಿದಾಗ ಹಲ್ಲು ಸೆಟ್ ನುಂಗಿರುವುದು ದೃಢಪಟ್ಟಿತು. ವೈದ್ಯರು ಶತಾಯ ಗತಾಯ ಪ್ರಯತ್ನ ಮಾಡಿ ಆಪರೇಶನ್ ಮಾಡದೇ ಹಲ್ಲಿನ ಸೆಟ್ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.