ಜಿಲ್ಲಾ ಸುದ್ದಿ

ಪುಸ್ತಕ, ಸಂಸ್ಕೃತಿ ಭಾಗ್ಯವೂ ಘೊಷಣೆಯಾಗಲಿ

ಸಾಂಸ್ಕೃತಿಕ ಪ್ರಜ್ಞೆ ಮತ್ತು ಸಾಮಾಜಿಕ ಪ್ರಜ್ಞೆ ಇದ್ದಲ್ಲಿ ಜವಾಬ್ದಾರಿ ಸರ್ಕಾರವಿರಲು ಸಾಧ್ಯ, ಕರ್ನಾಟಕ ಸರ್ಕಾರ ಎಲ್ಲಾ ಭಾಗ್ಯವನ್ನು ತಂದಿದೆ ಹಾಗೆಯೇ ಪುಸ್ತಕ ಮತ್ತು ಸಂಸ್ಕೃತಿ ಭಾಗ್ಯವನ್ನು ತರಬೇಕು ಎಂದು ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ಉಪಾಧ್ಯಕ್ಷ ಡಾ. ಸಿ.ಸೋಮಶೇಖರ್...

ಪುಸ್ತಕ, ಸಂಸ್ಕೃತಿ ಭಾಗ್ಯವೂ ಘೊಷಣೆಯಾಗಲಿ
(ಸಾಂದರ್ಭಿಕ ಚಿತ್ರ)
Published On :

ಬೆಂಗಳೂರು: ಸಾಂಸ್ಕೃತಿಕ ಪ್ರಜ್ಞೆ ಮತ್ತು ಸಾಮಾಜಿಕ ಪ್ರಜ್ಞೆ ಇದ್ದಲ್ಲಿ ಜವಾಬ್ದಾರಿ ಸರ್ಕಾರವಿರಲು ಸಾಧ್ಯ, ಕರ್ನಾಟಕ ಸರ್ಕಾರ ಎಲ್ಲಾ ಭಾಗ್ಯವನ್ನು ತಂದಿದೆ ಹಾಗೆಯೇ ಪುಸ್ತಕ ಮತ್ತು ಸಂಸ್ಕೃತಿ ಭಾಗ್ಯವನ್ನು ತರಬೇಕು ಎಂದು ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ಉಪಾಧ್ಯಕ್ಷ ಡಾ. ಸಿ.ಸೋಮಶೇಖರ್ ಅಭಿಪ್ರಾಯಿಸಿದರು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಬುಧವಾರ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ಮತ್ತು ಕನ್ನಡ ರತ್ನಗಳಿಗೆ ಪ್ರಶಸ್ತಿ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು. ಕೇಂದ್ರ ಸರ್ಕಾರ ಹಾಗೂ ರಾಜ್ಯಸರ್ಕಾರದ ನೌಕರರಿಗೆ ಸಂಸ್ಕೃತಿ ಬಗ್ಗೆ ಕಮ್ಮಟ ಏರ್ಪಡಿಸುವ ಅಗತ್ಯವಿದೆ ಎಂದರು. ಸರ್ಕಾರದ ಕಾರ್ಯ ನಿರ್ವಹಣೆ ಮತ್ತು ಸಂಸ್ಕೃತಿ ಪ್ರಗತಿ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಸಂಸ್ಕೃತಿ ಇದ್ದಲ್ಲಿ ಮನುಷ್ಯತ್ವ ಇರುತ್ತೆ, ಸರ್ಕಾರ ನಿತ್ಯ ಕಾರ್ಯದೊಳಗೆ ಕಲೆ, ಸಾಹಿತ್ಯ ಸಂಸ್ಕೃತಿಯನ್ನು ಅಳವಡಿಸಿಕೊಳ್ಳಬೇಕು. ಕನ್ನಡ ಸಾಹಿತ್ಯ ಪೊಳ್ಳು ಸಾಹಿತ್ಯವಲ್ಲ. ಕನ್ನಡ ಸಾಹಿತ್ಯಕ್ಕೆ 2000 ವರ್ಷ, ಲಿಪಿ ಸಾಹಿತ್ಯಕ್ಕೆ 2500 ವರ್ಷಗಳ ಇತಿಹಾಸವಿರುವ ಕನ್ನಡ ಸಾಹಿತ್ಯದಲ್ಲಿ ಸಹಿಷ್ಣುತೆ ಇದೆ. ಹೀಗಾಗಿ ಸಂದಿಗ್ದ ಸಂದರ್ಭದಲ್ಲಿ ಸರ್ಕಾರ ಪುಸ್ತಕ ಭಾಗ್ಯ ಮತ್ತು ಸಂಸ್ಕೃತಿ ಭಾಗ್ಯವನ್ನು ಜಾರಿಗೊಳಿಸಬೇಕು ಎಂದರು.

ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು ಸನ್ಮಾನ ಸ್ವೀಕರಿಸಿ, ಕಳಸಾ ಬಂಡೂರಿ ವಿಚಾರದಲ್ಲಿ ಉತ್ತರ ಕರ್ನಾಟಕದ ಜನತೆಯಲ್ಲಿ ಪ್ರತ್ಯೇಕತೆಯ ಕೂಗು ಕೇಳಿಬರುತ್ತಿದೆ. ರಾಜ್ಯವನ್ನು ಪ್ರತ್ಯೇಕತೆ ಬಗ್ಗೆ ಮಾತನಾಡುವುದು ಅಖಂಡ ಕರ್ನಾಟಕಕ್ಕೆ ಮಾಡಿದ ಅಪಮಾನ ಮತ್ತು ಅನ್ಯಾಯ. ಯಾವುದೇ ಕಾರಣಕ್ಕೂ ಡಾ. ರಾಜ್‍ಕುಮಾರ್ ಅಭಿಮಾನಿಗಳ ಸಂಘ ಪ್ರತ್ಯೇಕ ರಾಜ್ಯಕ್ಕೆ ಅವಕಾಶ ಕೊಡುವುದಿಲ್ಲ ಎಂದು ಎಚ್ಚರಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.