ಕಾರ್ಪೊರೇಟರ್ ವಿರುದ್ಧ ಚಾರ್ಜ್‍ಶೀಟ್
ಆರ್‍ಟಿಐ ಕಾರ್ಯಕರ್ತ ಲಿಂಗರಾಜು ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿದ್ದ ಬೆಂಗಳೂರಿನ ಆಜಾದ್ ನಗರದ ಕಾರ್ಪೊರೇಟರ್ ಗೌರಮ್ಮ ಮತ್ತು ಅವರ ಪತಿ ಗೋವಿಂದರಾಜ್ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ತನಿಖೆ ಪೂರ್ಣಗೊಳಿಸಿರುವ ಲೋಕಾಯುಕ್ತ ಪೊಲೀಸರು...

ಬೆಂಗಳೂರು: ಆರ್‍ಟಿಐ ಕಾರ್ಯಕರ್ತ ಲಿಂಗರಾಜು ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿದ್ದ ಬೆಂಗಳೂರಿನ ಆಜಾದ್ ನಗರದ ಕಾರ್ಪೊರೇಟರ್ ಗೌರಮ್ಮ ಮತ್ತು ಅವರ ಪತಿ ಗೋವಿಂದರಾಜ್ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ತನಿಖೆ ಪೂರ್ಣಗೊಳಿಸಿರುವ ಲೋಕಾಯುಕ್ತ ಪೊಲೀಸರು ಬುಧವಾರ ಲೋಕಾಯುಕ್ತ ನ್ಯಾಯಾಲಯಕ್ಕೆ ಚಾರ್ಜ್‍ಶೀಟ್ ಸಲ್ಲಿಸಿದ್ದಾರೆ.
ಈ ಪ್ರಕರಣದಲ್ಲಿ ಗೌರಮ್ಮ ಅವರನ್ನು ಮೊದಲ ಆರೋಪಿಯನ್ನಾಗಿ ಮಾಡಿದ್ದು, ಅವರ ಪತಿ ಗೋವಿಂದರಾಜು 2ನೇ ಆರೋಪಿ. ಭ್ರಷ್ಟಾಚಾರ ತಡೆ ಕಾಯ್ದೆಯ 13(1)(ಇ) ಮತ್ತು 13(2)
ಅನ್ವಯ ಮೊಕದ್ದಮೆ ದಾಖಲಿಸಲಾಗಿದೆ. ಈ ಬಗ್ಗೆ ಲೋಕಾಯುಕ್ತ ಪೊಲೀಸ್ ವಿಭಾಗದ ಉನ್ನತ ಮೂಲಗಳು ಖಚಿತಪಡಿಸಿವೆ. ಆದಾಯಕ್ಕಿಂತಲೂ ಹೆಚ್ಚಿನ ಆಸ್ತಿ ಗಳಿಸಿರುವುದು ತನಿಖೆ ವೇಳೆಯಲ್ಲಿ ಬಹಿರಂಗವಾಗಿದ್ದು, ಒಟ್ಟು ಆಸ್ತಿಯಲ್ಲಿ ಶೇ. 62ರಷ್ಟು ಆದಾಯ ಮೀರಿದ ಆಸ್ತಿ ಎಂದು ಪತ್ತೆ ಹಚ್ಚಲಾಗಿದೆ. ಬೆಂಗಳೂರು ನಗರ ಸೇರಿದಂತೆ ವಿವಿಧೆಡೆ ಒಟ್ಟು 12 ಸ್ಥಿರಾಸ್ತಿ ಹೊಂದಿz್ದÁರೆ ಎಂದು ಹೇಳಲಾಗಿದ್ದು, 8 ಬ್ಯಾಂಕ್ ಖಾತೆಗಳನ್ನು ಹೊಂದಿರುವುದನ್ನು ತನಿಖಾಧಿಕಾರಿಗಳು ಬೆಳಕಿಗೆ ತಂದಿದ್ದಾರೆ.
ದಾಳಿ ವೇಳೆಯಲ್ಲಿ 3 ಕೆ.ಜಿ. ಚಿನ್ನ, 21 ಕೆ.ಜಿ. ಬೆಳ್ಳಿ, 4 ಕಾರು, ರು.4 ಲಕ್ಷ ನಗದು ಪತ್ತೆಯಾಗಿತ್ತು. ಇವರ ಒಟ್ಟು ಆಸ್ತಿ ರು.5.11 ಕೋಟಿಯಾಗಿದ್ದು, ಖರ್ಚು ರು.3.80 ಕೋಟಿಯಾಗಿದೆ. ಒಟ್ಟು ರು.9 ಕೋಟಿಯಲ್ಲಿ ರು.3.46 ಕೋಟಿ ಆದಾಯ ಮೀರಿದ ಆಸ್ತಿ ಎಂದು ಚಾರ್ಜ್‍ಶೀಟ್‍ನಲ್ಲಿ ಉಲ್ಲೇಖಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಬೆಂಗಳೂರಿನ ಆಜಾದ್ ನಗರದ ಕಾರ್ಪೊರೇಟರ್ ಗೌರಮ್ಮ ಗೋವಿಂದರಾಜು ಅವರ ಚಾಮರಾಜ ಪೇಟೆ ನಿವಾಸ ಸೇರಿದಂತೆ ನಾಲ್ಕು ಕಡೆ ದಾಳಿ ನಡೆಸಲಾಗಿತ್ತು.
ಗೌರಮ್ಮ ಅವರ ಪತಿ ಗೋವಿಂದರಾಜು ಡಿ ಗ್ರೂಪ್ ನೌಕರರಾಗಿದ್ದು, ಅವರ ಹೆಸರಲ್ಲಿ ಅಪಾರ ಆಸ್ತಿ ಖರೀದಿಸಲಾಗಿದೆ ಎನ್ನಲಾಗಿತ್ತು. ಗೌರಮ್ಮ ಅವರ ಅಕ್ರಮ ಆಸ್ತಿ ಗಳಿಕೆಯನ್ನು ಲಿಂಗರಾಜು ಎಂಬ ಆರ್‍ಟಿಐ ಕಾರ್ಯಕರ್ತ ಮಾಹಿತಿ ಹಕ್ಕಿನ ಮೂಲಕ ಬಯಲಿಗೆಳೆದಿದ್ದ. ನಂತರ ಲಿಂಗರಾಜು ಆಜಾದ್ ನಗರದ ತಮ್ಮ ಮನೆಯ ಎದುರೇ ಭಿೀಕರವಾಗಿ ಹತ್ಯೆಗೊಳಗಾಗಿದ್ದ.
ಗೌರಮ್ಮ ಅವರ ಪತಿ ಗೋವಿಂದರಾಜು ಅವರು ಕೆಲ ರೌಡಿಗಳಿಗೆ ಸುಪಾರಿ ನೀಡಿ ಲಿಂಗರಾಜು ಅವರನ್ನು ಹತ್ಯೆ ಮಾಡಿಸಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪಾರಿ ಹಂತಕರನ್ನು ಬಂಧಿಸಿದ್ದ ಪೊಲೀಸರು, ಅವರು ನೀಡಿದ ಸಾಕ್ಷಿಯ ಮೇರೆಗೆ ಗೌರಮ್ಮ ಪತಿ ಗೋವಿಂದರಾಜು ಅವರನ್ನು ಬಂಧಿಸಿದ್ದರು. ಪ್ರಕರಣ ನಂತರ ತಲೆ ಮರೆಸಿಕೊಂಡಿದ್ದ ಗೌರಮ್ಮ ಅವರನ್ನು ಕರ್ನಾಟಕ ಪೊಲೀಸರು ತಮಿಳುನಾಡಿನಲ್ಲಿ ಬಂಧಿಸಿ ಬೆಂಗಳೂರಿಗೆ ಕರೆ ತಂದಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


