ಜಿಲ್ಲಾ ಸುದ್ದಿ

ಮೌಢ್ಯತೆ ಶುದ್ಧೀಕರಣದ ಸಾಧನ ಜ್ಯೋತಿಷ್ಯ ನಿಷೇಧ ಸರಿಯಲ್ಲ: ಬೇಲಿಮಠ ಸ್ವಾಮೀಜಿ

ನಂಬಿಕೆ ಮತ್ತು ಮೂಢನಂಬಿಕೆ ಎರಡೂ ವಿಭಿನ್ನ. ಸರ್ವರಿಗೂ ಹಿತ ಬಯಸುವುದು ನಂಬಿಕೆಯಾದರೆ...

ಮೌಢ್ಯತೆ ಶುದ್ಧೀಕರಣದ ಸಾಧನ ಜ್ಯೋತಿಷ್ಯ ನಿಷೇಧ ಸರಿಯಲ್ಲ: ಬೇಲಿಮಠ ಸ್ವಾಮೀಜಿ
ಬೇಲಿಮಠ ಶಿವರುದ್ರ ಸ್ವಾಮೀಜಿ
Published On :
ಬೆಂಗಳೂರು: `ನಂಬಿಕೆ ಮತ್ತು ಮೂಢನಂಬಿಕೆ ಎರಡೂ ವಿಭಿನ್ನ. ಸರ್ವರಿಗೂ ಹಿತ ಬಯಸುವುದು ನಂಬಿಕೆಯಾದರೆ, ಸರ್ವರ ಹಿತವನ್ನು ಸ್ವಾರ್ಥಕ್ಕಾಗಿ ಬಲಿ ಕೊಡುವುದು ಮೂಢನಂಬಿಕೆ. ಜ್ಯೋತಿಷ್ಯ ಶಾಸ್ತ್ರ ಮೂಢನಂಬಿಕೆಯಾಗುವುದಿಲ್ಲ' ಎಂದು ಬೇಲಿಮಠದ ಮಹಾಸಂಸ್ಥಾನದ ಶ್ರೀ ಶಿವರುದ್ರ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.
ಬುಧವಾರ ನಡೆದ `6ನೇ ಅಂತಾರಾಷ್ಟ್ರೀಯ ಜ್ಯೋತಿಷ್ಯವೈದ್ಯ' ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಜ್ಯೋತಿಷ್ಯ ಜ್ಯೋತಿರ್ವಿಜ್ಞಾನವಾಗಿದ್ದು, ದಾರ್ಶನಿಕರಿಂದ ಬೆಳೆದುಬಂದ ಶಾಸ್ತ್ರ. ಗಣಿತಶಾಸ್ತ್ರ ಅದರ ಮೂಲವಾಗಿದ್ದು, ಅತ್ಯಂತ ವಿಶಿಷ್ಟ ಹಾಗೂ ತರ್ಕಬದ್ಧ ಲೆಕ್ಕಚಾರ ಒಳಗೊಂಡಿದೆ ಎಂದು ಬೇಲಿಮಠದ ಮಹಾಸಂಸ್ಥಾನದ ಶಿವರುದ್ರ ಸ್ವಾಮೀಜಿ ಒತ್ತಾಯಿಸಿದರು. 
ಬೋಧನೆಗೆ ಅನುಮತಿ ನೀಡಿ: ಮೂಢನಂಬಿಕೆ ಹೆಸರಿನಲ್ಲಿ ಜ್ಯೋತಿಷ್ಯ-ಶಾಸ್ತ್ರವನ್ನು ಸರ್ಕಾರ ನಿಷೇಧಿಸುವುದು ಸರಿಯಲ್ಲ. ಅಸ್ತಿತ್ವ ಕಳೆದುಕೊಂಡಿದ್ದ ಆಯುರ್ವೇದ ಪದ್ಧತಿಯನ್ನು 20 ವರ್ಷಗಳ ಹಿಂದೆ ವೈಜ್ಞಾನಿಕ ನೆಲೆಯಲ್ಲಿ¸ ಸಂಶೋಧನೆಗೊಳಪಡಿಸಿ ಅಭಿವೃದ್ಧಿಪಡಿಸಿದ ಮಾದರಿಯಲ್ಲೇ ಜ್ಯೋತಿಷ್ಯ ಶಾಸ್ತ್ರವನ್ನೂ ಶುದ್ಧೀಕರಿಸಬೇಕು ಎಂದು ಸ್ವಾಮಿಜಿ ಹೇಳಿದರು. 
ಆನಂದ್ ಗುರೂಜಿ ಮಾತನಾಡಿ, ಜ್ಯೋತಿಷ್ಯಶಾಸ್ತ್ರ ನಿನ್ನೆ ಅಥವಾ ಮೊನ್ನೆ ಬಂದದ್ದು ಅಲ್ಲ. ಪುರಾತನವಾದ ಸನಾತನ ಧರ್ಮ ಹಾಗೂ ಹಿಂದೂ ಧರ್ಮದ ಭಾಗವಾಗಿದೆ. ಜ್ಯೋತಿಷ್ಯ ವನ್ನು ಮೂಢನಂಬಿಕೆಯಾಗಿ ಬಿಂಬಿಸಬಾರದು ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.