ಜಿಲ್ಲಾ ಸುದ್ದಿ

ಚಲನಚಿತ್ರಗಳಿಗೆ ಸಹಾಯಧನ ಬಿಡುಗಡೆಗೆ ತಡೆ

ಕಳೆದ 2013ನೇ ಸಾಲಿನಲ್ಲಿ 79 ಕನ್ನಡ ಚಲನಚಿತ್ರಗಳಿಗೆ ಸಹಾಯಧನ ಬಿಡುಗಡೆಗೆ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ...

ಚಲನಚಿತ್ರಗಳಿಗೆ ಸಹಾಯಧನ ಬಿಡುಗಡೆಗೆ ತಡೆ
ಹೈಕೋರ್ಟ್
Published On :

ಬೆಂಗಳೂರು: ಕಳೆದ 2013ನೇ ಸಾಲಿನಲ್ಲಿ 79 ಕನ್ನಡ ಚಲನಚಿತ್ರಗಳಿಗೆ ಸಹಾಯಧನ ಬಿಡುಗಡೆಗೆ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. ಸಹಾಯಧನ ಬಿಡುಗಡೆಗೆ ಡಿ.7ರಂದು ರಾಜ್ಯ ವಾರ್ತಾ ಇಲಾಖೆ ಹೊರಡಿಸಿದ್ದ ಆದೇಶ ಪ್ರಶ್ನಿಸಿ `ಮದರಂಗಿ' ಕನ್ನಡ ಚಲನಚಿತ್ರದ ನಿರ್ಮಾಪಕರಾದ ಕೃಷ್ಣಾ ಟಾಕೀಸ್ ಸಂಸ್ಥೆ ಮುಖ್ಯಸ್ಥ ಎ.ನಾಗಪ್ಪ ಎಂಬುವರು ತಕರಾರು ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆನಂದ ಬೈರಾರೆಡ್ಡಿ ಅವರಿದ್ದ ರಜಾಕಾಲದ ಏಕಸದಸ್ಯ ಪೀಠ ಈ ಆದೇಶ ಮಾಡಿದೆ.

ಅಲ್ಲದೆ, ಕನ್ನಡ ಸಂಸ್ಕೃತಿ ಹಾಗೂ ಮಾಹಿತಿ ಇಲಾಖೆ (ವಾರ್ತಾ ಇಲಾಖೆ)ಪ್ರಧಾನ ಕಾರ್ಯದರ್ಶಿ, ಅಧೀನ ಕಾರ್ಯದರ್ಶಿಗೆ ನೋಟಿಸ್ ಜಾರಿ ಮಾಡಿ ನ್ಯಾಯಪೀಠ ಅರ್ಜಿ ಸಂಬಂಧ ಆಕ್ಷೇಪಣೆ ಸಲ್ಲಿಸಲು ಸೂಚಿಸಿ ವಿಚಾರಣೆ ಮುಂದೂಡಿತು. ನಿರ್ದೇಶಕ ಹುಲಿ ಚಂದ್ರಶೇಖರ್ ನೇತೃತ್ವದ ಸಮಿತಿ, 2013ನೇ ಸಾಲಿನಲ್ಲಿ ಬಿಡುಗಡೆಯಾಗಿದ್ದ ಕನ್ನಡ ಚಲಚಿತ್ರಗಳ ಪೈಕಿ `ಮಕ್ಕಳ ಚಿತ್ರ, ಸಾಹಿತ್ಯಾಧಾರಿತ ಚಿತ್ರ ಮತ್ತು ಪ್ರಶಸ್ತಿ ವಿಜೇತ' ಎಂಬ ಮೂರು ವರ್ಗದಡಿ 79 ಚಿತ್ರಗಳನ್ನು ಸರ್ಕಾರದ ಸಹಾಯಧನಕ್ಕೆ ಆಯ್ಕೆ ಮಾಡಿತ್ತು.

ಕರ್ನಾಟಕ ಚಲನಚಿತ್ರ ನೀತಿ ಪ್ರಕಾರ ರಾಜ್ಯ ಸರ್ಕಾರ ಪ್ರದಾನ ಮಾಡುವ `ಚಲನಚಿತ್ರ ಪ್ರಶಸ್ತಿ' ಗೆ ಆಯ್ಕೆಯಾದ ಕನ್ನಡ ಸಿನಿಮಾಗೆ ಸಹಾಯ ಧನ ನೀಡಬೇಕು ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ. ಅದರಂತೆ 2013ನೇ ಸಾಲಿನಲ್ಲಿ ಮದರಂಗಿ ಸಿನಿಮಾದ `ಮಳೆ ಹನಿಯೇ ಕಣ್ಣೀರು ಹಾಕಿದಂತೆ' ಎಂಬ ಗೀತೆಗೆ ರಾಜ್ಯ ಚಲನಚಿತ್ರ ಅತ್ಯುತ್ತಮ ಗೀತೆ ಪ್ರಶಸ್ತಿ ಸಂದಿದೆ. ಇದರ ಹೊರತಾಗಿಯೂ ಮದರಂಗಿ ಚಿತ್ರವನ್ನು ಆಯ್ಕೆ ಮಾಡಿಲ್ಲ ಎಂದು ಆರೋಪಿಸಿ ಅರ್ಜಿ ಸಲ್ಲಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.