ಸೌಲಭ್ಯಕ್ಕೆ ಬೀದಿಗಿಳಿದ ಟೆಕಿಗಳು
ಕೃಷ್ಣರಾಜಪುರ, ಮಹದೇವಪುರ ಪ್ರದೇಶ ವ್ಯಾಪ್ತಿಯ ಟೆಕಿಗಳು ಮೂಲ ಸೌಲಭ್ಯಕ್ಕೆ ಆಗ್ರಹಿಸಿ ಶುಕ್ರವಾರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು...

ಕೆ.ಆರ್.ಪುರ: ಕೃಷ್ಣರಾಜಪುರ, ಮಹದೇವಪುರ ಪ್ರದೇಶ ವ್ಯಾಪ್ತಿಯ ಟೆಕಿಗಳು ಮೂಲ ಸೌಲಭ್ಯಕ್ಕೆ ಆಗ್ರಹಿಸಿ ಶುಕ್ರವಾರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.
ಸಂಚಾರ ದಟ್ಟಣೆ, ಕಸದ ಸಮಸ್ಯೆ, ಒಳಚರಂಡಿ ಅವ್ಯವಸ್ಥೆ, ಪಾದಚಾರಿ ರಸ್ತೆ ಒತ್ತುವರಿ ಸೇರಿದಂತೆ ಅನೇಕ ಸಮಸ್ಯೆಗಳಿಂದ ಬೇಸತ್ತಿರುವ ಈ ಭಾಗದ ಜನರು ಶುಕ್ರವಾರ ಬೀದಿಗಿಳಿದಿದ್ದರು. ಪ್ರತಿಭಟನೆಯನ್ನು ಆರ್ ಎಂಜೆಡ್, ಇಕೋಸ್ಪೇಸ್, ಪ್ರಿಸ್ಟೇಜ್ ಟಿ ಪಾರ್ಕ್, ಹಾಲನಾಯಕನಹಳ್ಳಿ ಗ್ರಾಮಸ್ಥರು, ಬೆಳ್ಳಂದೂರು ಭಾಗದ ಶ್ರೀಶಕ್ತಿ ಸಂಘಗಳು ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ನೂರಾರು ಮಂದಿ ಭಾಗವಹಿಸಿದ್ದರು.
ಕಸ ಮುಕ್ತ ಬೆಳ್ಳಂದೂರು ಸಂಘಟನೆ ಸದಸ್ಯೆ ಮೀತಾನಾಯರ್ ಮಾತನಾಡಿ, ಯಾವುದೇ ಮುಂದಾಲೋಚನೆ ಇಲ್ಲದೆ ಈ ಭಾಗದಲ್ಲಿ ಬಹು ಮಹಡಿ ಕಟ್ಟಡಗಳು, ದೊಡ್ಡ ದೊಡ್ಡ ಬಹುರಾಷ್ಟ್ರೀಯ ಕಂಪನಿಗಳು ಆರಂಭವಾಗಿವೆ. ಆದರೆ, ಮೂಲಸೌಲಭ್ಯ ಇಲ್ಲದೆ ಸಮಸ್ಯೆ ಹೆಚ್ಚಾಗಿದೆ. ರಸ್ತೆ, ಒಳಚರಂಡಿ, ಕಸ ಸೇರಿದಂತೆ ಅನೇಕ ಸಮಸ್ಯೆಗಳಿಂದ ಗಳಿಂದ ಬಳಲುತ್ತಿರುವ ಈ ಭಾಗದಲ್ಲಿ ಶಾಲಾ-ಕಾಲೇಜುಗಳಿವೆ. ಇದೇ ಭಾಗದಲ್ಲಿ ಕಸವನ್ನು ಸುಡುತ್ತಿರುವುದರಿಂದ ಉಂಟಾಗುವ ಹೊಗೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


