ಸಿಲಿಕಾನ್ ಸಿಟಿಯಲ್ಲಿ ಸುಖವಿಂದರ್ ಸಿಂಗ್ ಗಾಯನದ ಮಿಂಚು
ಇಂಪೀರಿಯಲ್ ಬ್ಲೂ ಸೂಪರ್‍ಹಿಟ್ ನೈಟ್ಸ್ ಇಂದು ರಾತ್ರಿ ಬೆಂಗಳೂರಿನಲ್ಲಿ ಸಂಚಲನ ಮೂಡಿಸಲಿದ್ದು, ಖ್ಯಾತ ಬಾಲಿವುಡ್...

ಬೆಂಗಳೂರು: ಇಂಪೀರಿಯಲ್ ಬ್ಲೂ ಸೂಪರ್‍ಹಿಟ್ ನೈಟ್ಸ್ ಇಂದು ರಾತ್ರಿ ಬೆಂಗಳೂರಿನಲ್ಲಿ ಸಂಚಲನ ಮೂಡಿಸಲಿದ್ದು, ಖ್ಯಾತ ಬಾಲಿವುಡ್ ಗಾಯಕ ಸುಖವಿಂದರ್ ಸಿಂಗ್ ತಮ್ಮ ಗಾಯನದ ಮೂಲಕ ಮಿಂಚು ಹರಿಸಲಿದ್ದಾರೆ. ಬಹುನಗರಿ ಸಂಗೀತ ಪಯಣ ಲೂಧಿಯಾನದಲ್ಲಿ ಆರಂಭವಾಗಿದ್ದು, ಗೋವಾ, ಫರೀದಾಬಾದ್, ಪುಣೆ, ಇಂದೋರ್, ನಾಗ್ಪುರ, ಕೋಲ್ಕೊತ್ತಾಗಳಲ್ಲಿ ಅದ್ಭುತ ಯಶಸ್ಸು ಸಾಧಿಸಿ ಇದೀಗ ಹೊಸ ಸಂಚಲನ ಮೂಡಿಸಲು ಬೆಂಗಳೂರಿಗೆ ಆಗಮಿಸಿದೆ. ಇಂಪೀರಿಯಲ್ ಬ್ಲೂ ಸೂಪರ್‍ಹಿಟ್ ನೈಟ್ಸ್ ಅನ್ನು ಜೀವನವನ್ನು ಪ್ರೀತಿಸುವ ಯುವಜನರಿಗೆ ಸಂಪೂರ್ಣ ಮನರಂಜನೆ ನೀಡಲೆಂದೇ ರೂಪಿಸಲಾಗಿದೆ.
ತಮ್ಮ ವಿಶಿಷ್ಟ ಧ್ವನಿ ಮೂಲಕವೇ ವೇದಿಕೆಯಲ್ಲೊಂದು ಅದ್ಭುತ ವಾತಾವರಣ ನಿರ್ಮಿಸುವ ಪ್ರತಿಷ್ಠಿತ ಪ್ರಶಸ್ತಿಗಳ ವಿಜೇತ ಸುಖವಿಂದರ್ ಸಿಂಗ್ ಅವರಿಗೆ ಪ್ರತಿಭಾವಂತ ಸಂಗೀತಗಾರರ ತಂಡ ಸಾಥ್ ನೀಡಲಿದೆ. `ಛಯ್ಯಾ ಛಯ್ಯಾ', `ದಬಾಂಗ್', `ಜೈ ಹೋ' ಸೇರಿದಂತೆ ತಮ್ಮ ಕೆಲವು ಅತ್ಯುತ್ತಮ ಹಾಡುಗಳನ್ನು ಸಿಂಗ್ ಅವರು ಪ್ರಸ್ತುತಪಡಿಸಲಿದ್ದಾರೆ. ಆ ಮೂಲಕ ಗ್ರಾಂಡ್ ಶೋ ಕೊನೆಯಲ್ಲಿ ಅಭಿಮಾನಿಗಳಿಗೆ ಸಂತಸದ ಅನುಭವ ಉಣಬಡಿಸಲಿದ್ದಾರೆ.
ಶ್ರೀ ರಾಜಾ ಬ್ಯಾನರ್ಜಿ, ಸಹಾಯಕ ಉಪ ಅಧ್ಯಕ್ಷ, ಮಾರುಕಟ್ಟೆ ವಿಭಾಗ, ಪೆರ್ನಾಡ್ ರೈಕಾರ್ಡ್ ಇಂಡಿಯಾ ಅವರು ಹೇಳುತ್ತಾರೆ, ` ಇಂಪೀರಿಯಲ್ ಬ್ಲೂ ಸೂಪರ್‍ಹಿಟ್ ನೈಟ್ಸ್ ಎರಡನೇ ಋತುವಿನ ಬಗ್ಗೆ ನಾವು ಬಹಳ ಥ್ರಿಲ್ ಆಗಿದ್ದೇವೆ. ಇದು ಈಗ ಮನರಂಜನಾ ಉದ್ಯಮದಲ್ಲಿನ ಅತ್ಯುತ್ತಮ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವ ವೇದಿಕೆಯೂ ಆಗಿದೆ'
ಕಾರ್ಯಕ್ರಮದ ಬಗ್ಗೆ ಅತ್ಯುತ್ಸಾಹ ತೋರಿಸಿರುವ ಶ್ರೀ ಸುಖವಿಂದರ್ ಸಿಂಗ್ ಅವರು, `ಬೆಂಗಳೂರಿನಲ್ಲಿ ಕಾರ್ಯಕ್ರಮ ನೀಡಲು ಉತ್ಸುಕನಾಗಿದ್ದೇನೆ. ಬೆಂಗಳೂರಿನಲ್ಲಿ ಭಾರಿ ಸಂಖ್ಯೆಯ ಸಂಗೀತಪ್ರೇಮಿಗಳು ಸೇರುತ್ತಾರೆ ಮತ್ತು ಇಂಪೀರಿಯಲ್ ಬ್ಲೂ ಸೂಪರ್‍ಹಿಟ್ ನೈಟ್ಸ್ ಇಲ್ಲಿರುವ ನನ್ನ ಅಭಿಮಾನಿಗಳನ್ನು ¨ರಂಜಿಸುವ ಮತ್ತೊಂದು ಅವಕಾಶ ನೀಡಿದೆ. ಇಂಪೀರಿಯಲ್ ಬ್ಲೂ ಸೂಪರ್‍ಹಿಟ್ ನೈಟ್ಸ್ ವೇದಿಕೆಯಲ್ಲಿ ಖುಷಿಯನ್ನು ಆಸ್ವಾದಿಸುತ್ತಾ ಹಾಡುತ್ತೇನೆ. ಈ ಸಂಗೀತ ಪಯಣ ಮುಂದುವರಿದಂತೆ ನನ್ನ ಅಭಿಮಾನಿಗಳಿಗೆ ಇನ್ನಷ್ಟು ಉತ್ಸಾಹ ಮತ್ತು ಮನರಂಜನೆ ನೀಡಲು ಬಯಸುತ್ತೇನೆ'.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


