ಕಸ ವಿಂಗಡಿಸಿ, ಇಲ್ಲವೇ ದಂಡ ಕಟ್ಟಿ
ಐಟಿ-ಬಿಟಿ ಊರು, ಉದ್ಯಾನನಗರಿ ಎಂಬಿತ್ಯಾದಿ ಹೆಸರುಗಳಿಂದ ಪರಿಚಿತವಾಗಿದ್ದ ಬೆಂಗಳೂರು ನಗರ ವರ್ಷದಿಂದೀಚೆಗೆ ಕಸದಿಂದಲೇ ಹೆಸರುವಾಸಿಯಾಗುತ್ತಿದೆ. ಈ ಹಣೆಪಟ್ಟಿಯಿಂದ ಹೊರತರಲು ಪ್ರಯತ್ನಿಸುತ್ತಿರುವ ಬಿಬಿಎಂಪಿ, ನಾಗರಿಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು...
ಬೆಂಗಳೂರು: ಐಟಿ-ಬಿಟಿ ಊರು, ಉದ್ಯಾನನಗರಿ ಎಂಬಿತ್ಯಾದಿ ಹೆಸರುಗಳಿಂದ ಪರಿಚಿತವಾಗಿದ್ದ ಬೆಂಗಳೂರು ನಗರ ವರ್ಷದಿಂದೀಚೆಗೆ ಕಸದಿಂದಲೇ ಹೆಸರುವಾಸಿಯಾಗುತ್ತಿದೆ. ಈ ಹಣೆಪಟ್ಟಿಯಿಂದ ಹೊರತರಲು ಪ್ರಯತ್ನಿಸುತ್ತಿರುವ ಬಿಬಿಎಂಪಿ, ನಾಗರಿಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಸದ ಸಮಸ್ಯೆ ನೀಗಿಸಲು ಪ್ರಯತ್ನಿಸುತ್ತಿದೆ.
ಇದರ ಮೊದಲ ಹಂತವಾಗಿ ಮನೆಯ ಹಸಿ ಮತ್ತು ಒಣ ಕಸವನ್ನು ಬೇರ್ಪಡಿಸುವಂತೆ ನಗರದಾದ್ಯಂತ ಅರಿವು ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಪ್ರತಿ ಬೀದಿಗೂ ತೆರಳಿ ಕಸದ ನಿರ್ವಹಣೆಯನ್ನು ಹೇಗೆ ಮಾಡಬೇಕು ಎಂಬುದನ್ನು ತಿಳಿಸುತ್ತಿದೆ. ಆಕಸ್ಮಾತ್ ಬಿಬಿಎಂಪಿ ಕರೆಗೆ ಓಗೋಡದಿದ್ದರೆ ಮುಂದಿನ ಹಂತವಾಗಿ ನ್ಯಾಯಾಲಯದ ಆದೇಶದಂತೆ ಬಿಬಿಎಂಪಿ ಎಂಜಿನಿರ್ ಗಳನ್ನು ಮನೆಗಳಿಗೆ ಕಳುಹಿಸಿ ಸಲಹೆ ಕೊಡಿಸಲಿದೆ. ಅದನ್ನೂ ನೀವು ನಿರ್ಲಕ್ಷಿಸಿದರೆ ಅಂತಿಮವಾಗಿ ದಂಡ ವಿಧಿಸುವ ಹಂತಕ್ಕೆ ಹೋಗುವುದು ನಿಶ್ಚಿತ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಿದೆ.
ಮೂಲದಲ್ಲೇ ಕಸ ವಿಂಗಡಿಸುವ ನೀತಿಯನ್ನು ಉಲ್ಲಂಘಿಘಿಸುವುದನ್ನು ತಡೆಯಲು ಬಿಬಿಎಂಪಿ ತನ್ನ ಎಲ್ಲ ಎಂಜಿನಿಯರುಗಳಿಗೂ ಏನು ಮಾಡಬೇಕೆಂದು ಸೂಚನೆ ನೀಡಿದೆ. ಜೊತೆಗೆ ಘನ ತ್ಯಾಜ್ಯದ ನಿರ್ವಹಣೆಗೆ ಕಾನೂನು ರೀತಿ ಹಕ್ಕು ಚಲಾಯಿಸಲು ಎಲ್ಲ ಅಧಿಕಾರವನ್ನು ನೀಡಿದೆ. ಅಕ್ರಮವಾಗಿ ಕಸವನ್ನು ಹಾಕಲಾಗುತ್ತಿರುವ ಜಾಗಗಳನ್ನು ಗಮನಿಸಿ, ಅಲ್ಲಿ ಕಸವನ್ನು ಹಾಕದಂತೆ ಎಂಜಿನಿಯರುಗಳು ಗಮನ ವಹಿಸಲಿದ್ದಾರೆ. ಒಂದು ವೇಳೆ ಇವರ ಮಾತಿಗೆ ತಪ್ಪಿ ನಡೆದರೆ ತಪ್ಪಿತಸ್ಥರಿಗೆ ರು.500 ದಂಡ ಬೀಳುವುದು ಖಚಿತವಾಗಿದೆ!
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

