ರು.5 ಕೋಟಿ ಮೌಲ್ಯದ ವಸ್ತು ವಶ
ಪ್ರಸಕ್ತ ಸಾಲಿನಲ್ಲಿ 265 ಮಂದಿ ಆರೋಪಿಗಳನ್ನು ಬಂಧಿಸಿರುವ ಕೇಂದ್ರ ವಿಭಾಗದ ಪೊಲೀಸರು 295 ವಿವಿಧ ಪ್ರಕರಣಗಳನ್ನು ಪತ್ತೆ ಮಾಡಿದ್ದಾರೆ. ಬಂಧಿತ ಆರೋಪಿಗಳಿಂದ ರು.5,42,85,487 ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ...

ಬೆಂಗಳೂರು: ಪ್ರಸಕ್ತ ಸಾಲಿನಲ್ಲಿ 265 ಮಂದಿ ಆರೋಪಿಗಳನ್ನು ಬಂಧಿಸಿರುವ ಕೇಂದ್ರ ವಿಭಾಗದ ಪೊಲೀಸರು 295 ವಿವಿಧ ಪ್ರಕರಣಗಳನ್ನು ಪತ್ತೆ ಮಾಡಿದ್ದಾರೆ. ಬಂಧಿತ ಆರೋಪಿಗಳಿಂದ ರು.5,42,85,487 ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಪ್ರಸಕ್ತ ಸಾಲಿನಲ್ಲಿ ಕೇಂದ್ರ ವಿಭಾಗ ಸೇರಿದಂತೆ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ವಿವಿಧ ಪ್ರಕರಣಗಳಲ್ಲಿ ರು.6,84,37,806 ಮೌಲ್ಯದ ವಸ್ತುಗಳು ಕಳವಾಗಿ
ದ್ದವು. ಈ ಪೈಕಿ 7 ಕೆ.ಜಿ. 147 ಗ್ರಾಂ ಚಿನ್ನ, 47 ಕೆ.ಜಿ. 743 ಗ್ರಾಂ ಬೆಳ್ಳಿ, 7.99 ಸೆಂಟ್ ವಜ್ರ, 22 ನಾಲ್ಕು ಚಕ್ರದ ವಾಹನ, 132 ದ್ವಿಚಕ್ರ ವಾಹನ, 132 ಮೊಬೈಲ್ ಫೋನ್, 19 ಲ್ಯಾಪ್‍ಟಾಪ್, ಕಬ್ಬಿಣ, ಕೇಬಲ್ ವೈರ್, ಎಲ್‍ಸಿಡಿ, ಟಿವಿ ಸೇರಿದಂತೆ ಒಟ್ಟು ರು.5,42,85,487 ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ವಿಭಾಗದ ಪೊಲೀಸ್ ಠಾಣೆಗಳಲ್ಲಿ 6 ಸರ ಅಪಹರಣ, 29 ದರೋಡೆ, 61 ಕನ್ನ, 390 ವಾಹನ ಕಳವು ಪ್ರಕರಣ ವರದಿಯಾಗಿದ್ದು, 19 ಸರ ಅಪಹರಣ, 37 ದರೋಡೆ, 40 ಕನ್ನ, 164 ವಾಹನ ಕಳವು ಪ್ರಕರಣ ಪತ್ತೆ ಮಾಡಿದ್ದಾರೆ. ಸಾರ್ವಜನಿಕರ ಸಹಕಾರ ಅಗತ್ಯ: ಅಪರಾಧ ತಡೆ ಮಾಸಾಚರಣೆ ಅಂಗವಾಗಿ ಬುಧವಾರ ಅಶೋಕನಗರ ಪೊಲೀಸ್ ಠಾಣೆ ಸಮೀಪದ ಸುಲಾಮನ್ ಹಾಕಿ ಮೈದಾನದಲ್ಲಿ ಕೇಂದ್ರ ವಿಭಾಗದ ಪೊಲೀಸರು ಜಪ್ತಿ ಮಾಡಿರುವ ವಸ್ತುಗಳ ಪ್ರದರ್ಶನ ಹಾಗೂ ವಾರಸುದಾರರಿಗೆ ವಸ್ತುಗಳ ಸಾಂಕೇತಿಕ ವಿತರಣೆ ಕಾರ್ಯಕ್ರಮ ನಡೆಯಿತು.
ನಗರ ಪೊಲೀಸ್ ಆಯುಕ್ತ ಎನ್.ಎಸ್. ಮೇಘರಿಕ್ ಅವರು ಕೆಲ ವಾರಸುದಾರರಿಗೆ ಸಾಂಕೇತಿಕವಾಗಿ ವಸ್ತುಗಳನ್ನು ಹಸ್ತಾಂತರಿಸಿ ರು. ಬಳಿಕ ಮಾತನಾಡಿದ ಅವರು, ಪೊಲೀಸರಿಗೆ ಯಾವುದೇ ಪ್ರಕರಣ ಪತ್ತೆ ಮಾಡುವುದು ಸವಾಲಿನ ಕೆಲಸ. ಆದರೂ ಪೊಲೀಸರು ಬಹಳ ಶ್ರಮಪಟ್ಟು ಕೆಲ ಪ್ರಕರಣಗಳನ್ನು ಪತ್ತೆ ಹಚ್ಚಿದ್ದಾರೆ. ಸಮಾಜವನ್ನು ಶೇ.100ರಷ್ಟು ಅಪರಾಧ ಮುಕ್ತ ಮಾಡಲು ಸಾಧ್ಯವಿಲ್ಲ. ಆದರೆ, ಸಾರ್ವಜ ನಿಕರು ಪೊಲೀಸರೊಂದಿಗೆ ಕೈ ಜೋಡಿಸಿದರೆ ಅಪರಾಧ ಪ್ರಕರಣಗಳ ಪ್ರಮಾಣವನ್ನು ಕಡಿಮೆ ಮಾಡಬಹುದೆಂದು ಹೇಳಿದರು.
ಹೆಚ್ಚುವರಿ ಪೊಲೀಸ್ ಆಯುಕ್ತ ಪ್ರತಾಪ ರೆಡ್ಡಿ ಮಾತನಾಡಿ, ಕೇಂದ್ರ ವಿಭಾಗದ ಪೊಲೀಸರು ಉತ್ತಮ ಕೆಲಸ ಮಾಡಿದ್ದಾರೆ. ಫಿರ್ಯಾದಿಗಳು ತಮ್ಮ ವಸ್ತುಗಳು ಸಿಕ್ಕಿದ್ದಕ್ಕೆ ತೃಪ್ತರಾಗಬಾರದು. ಆರೋಪಿಗಳಿಗೆ ಶಿಕ್ಷೆ ಆಗಬೇಕಾದರೆ ಕೋರ್ಟ್‍ಗೆ ಬಂದು ಸಾಕ್ಷಿ ಹೇಳಬೇಕು. ಸೂಕ್ತ ಸಂದರ್ಭದಲ್ಲಿ ಸಾಕ್ಷಿ ಹೇಳದಿದ್ದರೆ ಆರೋಪಿಗಳು ಶಿಕ್ಷೆಯಿಂದ ತಪ್ಪಿಸಿಕೊಳ್ಳುತ್ತಾರೆ. ಇದರಿಂದ ಸಮಾಜದಲ್ಲಿ ಅಪರಾಧಗಳು ಮತ್ತೆ ಮುಂದುವರಿಯುತ್ತವೆ. ಇದಕ್ಕೆ ಫಿರ್ಯಾದಿಗಳು ಅವಕಾಶ ನೀಡಬಾರದೆಂದು ಹೇಳಿದರು. ಕಾರ್ಯಕ್ರಮದಲ್ಲಿ ಕೇಂದ್ರ ವಿಭಾಗದ ಡಿಸಿಪಿ ಸಂದೀಪ್ ಪಾಟೀಲ್, ಜಂಟಿ ಪೊಲೀಸ್ ಆಯುಕ್ತ ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು. ಪ್ರಶಂಸನಾ ಪತ್ರ: ವಿವಿಧ ಪ್ರಕರಣಗಳನ್ನು ಭೇದಿಸುವಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿ ದ ಕೇಂದ್ರ ವಿಭಾಗದ ಕೆಲ ಇನ್ಸ್‍ಪೆಕ್ಟರ್ ಗಳು, ತಾಂತ್ರಿಕ ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿಗೆ ನಗರ ಪೊಲೀಸ್ ಆಯುಕ್ತರು ಪ್ರಶಂಸನಾ ಪತ್ರ ವಿತರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


