ಪೊಲೀಸ್ ಮೇಲೆ ಉದ್ಯಮಿ ಹಲ್ಲೆ
ಮದ್ಯವ್ಯಸನಿಗಳಿಂದ ಪೊಲೀಸರ ಮೇಲಿನ ಹಲ್ಲೆ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿವೆ. ಈಗ ಮತ್ತೆ ಅಂತಹದ್ದೇ ಘಟನೆಯೊಂದು ಮಂಗಳವಾರ ತಡರಾತ್ರಿ ನಗರದಲ್ಲಿ ನಡೆದಿದೆ...

ಬೆಂಗಳೂರು: ಮದ್ಯವ್ಯಸನಿಗಳಿಂದ ಪೊಲೀಸರ ಮೇಲಿನ ಹಲ್ಲೆ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿವೆ. ಈಗ ಮತ್ತೆ ಅಂತಹದ್ದೇ ಘಟನೆಯೊಂದು ಮಂಗಳವಾರ ತಡರಾತ್ರಿ ನಗರದಲ್ಲಿ ನಡೆದಿದೆ.
ಮದ್ಯಪಾನ ಮಾಡಿದ್ದ ಉದ್ಯಮಿಯೊಬ್ಬ ಕರ್ತವ್ಯ ನಿರತ ಪೊಲೀಸ್ ಅಧಿಕಾರಿ ಮೇಲೆ ಹಲ್ಲೆ ಮಾಡಿರುವ ಘಟನೆ ನಡೆದಿದೆ. ಈ ಸಂಬಂಧ ಉಲ್ಲಾಳದ ನಿವಾಸಿ ಉದ್ಯಮಿ ಹರಿಪ್ರಸಾದ್
ಅವರನ್ನು ಬಂಧಿಸಲಾಗಿದೆ. ರಾಜಾಜಿನಗರ ಸಂಚಾರಿ ಠಾಣೆ ಇನ್ಸ್‍ಪೆಕ್ಟರ್ ಕೆ.ವಿ.ಶ್ರೀಧರ್ ಹಲ್ಲೆಗೆ ಒಳಗಾದವರು. ಶ್ರೀಧರ್ ಅವರು ಮಂಗಳವಾರ ಎಂದಿನಂತೆ ರಾಜಾಜಿನಗರ
ಎಂಟ್ರೆನ್ಸ್‍ನಲ್ಲಿ ಕುಡಿದು ವಾಹನ ಚಾಲನೆ ಮಾಡುವವರ ತಪಾಸಣೆ ಮಾಡುತ್ತಿದ್ದರು. ಆ ವೇಳೆ ಹರಿಪ್ರಸಾದ್ ಕಾರಿನಲ್ಲಿ ಬಂದಿದ್ದಾರೆ. ಇವರನ್ನು ಅಡ್ಡಗಟ್ಟಿದ ಪೊಲೀಸರು, ಮದ್ಯಸೇವನೆಯ ಬಗ್ಗೆ ಖಾತ್ರಿಪಡಿಸಿಕೊಳ್ಳಲು ಆಲ್ಕೋಹಾಲ್ ಟೆಸ್ಟಿಂಗ್ ಮಷಿನ್ ಅನ್ನು ಅವರ ಬಾಯಿ ಬಳಿ ಇಟ್ಟಿದ್ದಾರೆ.
ಇದಕ್ಕೆ ವಿರೋಧ ವ್ಯಕ್ತಪಡಿಸಿದ ಹರಿಪ್ರಸಾದ್, ಇನ್ಸ್‍ಪೆಕ್ಟರ್ ಶ್ರೀಧರ್ ಜೊತೆ ವಾಗ್ವಾದ ನಡೆಸಿದ್ದಾರೆ. ಅಲ್ಲದೇ ಠಾಣೆಗೆ ಬರುವಂತೆ ಸೂಚಿಸಿದಾಗ ಇನ್ಸ್‍ಪೆಕ್ಟರ್ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಕೊನೆಗೆ ಹರಿಪ್ರಸಾದ್‍ರನ್ನು ಬಂಧಿಸಿದ ರಾಜಾಜಿನಗರ ಪೊಲೀಸರು ಕರ್ತವ್ಯಕ್ಕೆ ಅಡ್ಡಿ ಹಾಗೂ ಮದ್ಯಪಾನ ಮಾಡಿ ವಾಹನ ಚಾಲನೆ ಆರೋಪದಡಿ ಪ್ರಕರಣ ದಾಖಲಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


