ಲಾರಿ ಡಿಕ್ಕಿಗೆ ತಂದೆ-ಮಗ ಸಾವು
ಅತಿವೇಗವಾಗಿ ಬಂದ ಲಾರಿ, ತಿರುವು ಪಡೆಯುವಾಗ ಎದುರಿಗೆ ಬಂದ ಟಿವಿಎಸ್ ಬೈಕ್‍ಗೆ ಡಿಕ್ಕಿ ಹೊಡೆದ ಪರಿಣಾಮ ತಂದೆ, ಮಗ ಸಾವನ್ನಪ್ಪಿರುವ ಘಟನೆ ಶನಿವಾರ ತಡರಾತ್ರಿ ಚೊಕ್ಕಸಂದ್ರ ಜಂಕ್ಷನ್ ಬಳಿ ನಡೆದಿದೆ...

ಬೆಂಗಳೂರು: ಅತಿವೇಗವಾಗಿ ಬಂದ ಲಾರಿ, ತಿರುವು ಪಡೆಯುವಾಗ ಎದುರಿಗೆ ಬಂದ ಟಿವಿಎಸ್ ಬೈಕ್‍ಗೆ ಡಿಕ್ಕಿ ಹೊಡೆದ ಪರಿಣಾಮ ತಂದೆ, ಮಗ ಸಾವನ್ನಪ್ಪಿರುವ ಘಟನೆ ಶನಿವಾರ ತಡರಾತ್ರಿ ಚೊಕ್ಕಸಂದ್ರ ಜಂಕ್ಷನ್ ಬಳಿ ನಡೆದಿದೆ.
ಮಲ್ಲಸಂದ್ರ ನಿವಾಸಿಗಳಾದ ನಾಗರಾಜ್ (55), ಇವರ ಪುತ್ರ ಮಂಜುನಾಥ್ (30) ಮೃತಪಟ್ಟವರು. ಕಂಠೀರವ ಸ್ಟುಡಿಯೋ ಬಳಿ ಮೊಬೈಲ್ ಕ್ಯಾಂಟೀನ್ ನಡೆಸುತ್ತಿದ್ದ ಇವರು ರಾತ್ರಿ ವ್ಯಾಪಾರ ಮುಗಿಸಿ ಟಿವಿಎಸ್‍ನಲ್ಲಿ ಮನೆಗೆ ಹೋಗುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಮಹಾರಾಷ್ಟ್ರ ನೋಂದಣಿಯ ಲಾರಿ ಇವರಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಟಿವಿಎಸ್ ಚಾಲನೆ ಮಾಡುತ್ತಿದ್ದ ಮಗ ಮಂಜುನಾಥ್ ಸ್ಥಳದಲ್ಲೇ ಮೃತಪಟ್ಟರೆ, ತೀವ್ರವಾಗಿ ಗಾಯಗೊಂಡಿದ್ದ ತಂದೆ ನಾಗರಾಜ್ ಅವರನ್ನು ನಿಮಾ್ಹನ್ಸ್‍ಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಬೆಳಗಿನ ಜಾವ ಮೃತಪಟ್ಟಿದ್ದಾರೆ.
ಅಪಘಾತವೆಸಗಿ ಲಾರಿ ಚಾಲಕ ವಾಹನ ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದಾಗ ಇದನ್ನು ಕಂಡ ಸ್ಥಳೀಯರು ಕೂಗಿಕೊಂಡಿ ದ್ದರಿಂದ ಲಾರಿ ಬಿಟ್ಟು ಪರಾರಿಯಾಗಿದ್ದಾನೆ. ಲಾರಿಗೆ ಇಬ್ಬರು ಚಾಲಕರಿದ್ದರು. ಅಪಘಾತದ ವೇಳೆ ಲಾರಿ ಚಾಲನೆ ಮಾಡುತ್ತಿದ್ದ ಚಾಲಕ ಪರಾರಿಯಾಗಿದ್ದು, ಮತ್ತೊಬ್ಬ ಚಾಲಕ ಸಿಕ್ಕಿದ್ದಾನೆ. ಆತನನ್ನು ವಿಚಾರಣೆ ಮಾಡಲಾಗಿದೆ. ಆ ಚಾಲಕನನ್ನು ಕರೆಸಲು ಎಲ್ಲ ಪ್ರಯತ್ನ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಪೀಣ್ಯ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


