ನಿಯಮ ಪಾಲಿಸಿ, ಅವಘಡ ತಪ್ಪಿಸಿ
ಅನಕ್ಷರಸ್ಥ ಅಥವಾ ಕಡಿಮೆ ವ್ಯಾಸಂಗ ಮಾಡಿ ಕ್ಯಾಬ್, ಆಟೋ ಓಡಿಸುವ ಚಾಲಕರಿಗೆ ನೇರವಾಗಿ 8ನೇ ತರಗತಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡುವ ಬಗ್ಗೆ ಶಿಕ್ಷಣ ಇಲಾಖೆ ಜತೆ ಮಾತುಕತೆ ನಡೆಸಲಾಗುವುದು ಎಂದು ರಾಜ್ಯ ಕಾನೂನು ಸೇವೆಗಳ ಪ್ರಾಧೀಕಾರದ...

ಬೆಂಗಳೂರು: ಅನಕ್ಷರಸ್ಥ ಅಥವಾ ಕಡಿಮೆ ವ್ಯಾಸಂಗ ಮಾಡಿ ಕ್ಯಾಬ್, ಆಟೋ ಓಡಿಸುವ ಚಾಲಕರಿಗೆ ನೇರವಾಗಿ 8ನೇ ತರಗತಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡುವ ಬಗ್ಗೆ ಶಿಕ್ಷಣ ಇಲಾಖೆ ಜತೆ ಮಾತುಕತೆ ನಡೆಸಲಾಗುವುದು ಎಂದು ರಾಜ್ಯ ಕಾನೂನು ಸೇವೆಗಳ ಪ್ರಾಧೀಕಾರದ ಸದಸ್ಯ ಕಾರ್ಯದರ್ಶಿ ಅಶೋಕ್ ಜಿ.ನಿಜಗಣ್ಣನವರ್ ಹೇಳಿದರು.
ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧೀಕಾರ ಹಾಗೂ ರಾಜ್ಯ ಪ್ರಾದೇಶಿಕ ಸಾರಿಗೆ ಇಲಾಖೆಯಿಂದ ಬುಧವಾರ ಇಂದಿರಾನಗರದಲ್ಲಿರುವ ಉಪಸಾರಿಗೆ ಆಯುಕ್ತರ ಕಚೇರಿಯಲ್ಲಿ ಜಂಟಿಯಾಗಿ ಆಯೋಜಿಸಿದ್ದ `ರಾಷ್ಟ್ರೀಯ ಸಾರಿಗೆ ಲೋಕ್ ಅದಾಲತ್' ಕಾರ್ಯಕ್ರಮಕ್ಕೆ ಚಾಲನೆ ನೀಡಿ ನಂತರ, ವಾಹನ ಚಾಲಕರ ಪ್ರಶ್ನೆಯೊಂದಕ್ಕೆ ಉತ್ತರಿಸಿ ಅವರು ಮಾತನಾಡಿದರು.
ಅದಾಲತ್‍ನಲ್ಲಿ ಭಾಗವಹಿಸಿದ್ದ ಚಾಲಕ ಕೃಷ್ಣೇಗೌಡ ಎಂಬುವವರು ಮಾತನಾಡಿ, ಮಾ್ಯಕ್ಸಿ ಕ್ಯಾಬ್, ಆಟೋ, ಟ್ಯಾಕ್ಸಿ ಓಡಿಸುವ ಚಾಲಕರು ಸಹ ವಾಹನ ಚಾಲನಾ ಪರವಾನಗಿ ಪಡೆಯಲು 8ನೇ ತರಗತಿ ವ್ಯಾಸಂಗ ಮಾಡಿರಬೇಕು ಎಂಬ ಕಾನೂನಿದೆ. ಎಲ್ಲರೂ ಸುಶಿಕ್ಷಿತರಾಗಿರುವುದಿಲ್ಲ. ಹೀಗಾಗಿ ಈ ನಿಯಮ ಬದಲಿಸಬೇಕು ಎಂದು ಮನವಿ ಮಾಡಿದರು. ಅದಕ್ಕೆ ಪ್ರತಿಕ್ರಿಯಿಸಿದ ಅಶೋಕ್ ಜಿ. ನಿಜಗಣ್ಣನವರ್, ಈಗಿರುವ ಕಾನೂನು ಬದಲಿಸುವುದು ಕಷ್ಟ. ಹಾಗಾಗಿ ವಿದ್ಯಾಭ್ಯಾಸ ಇಲ್ಲದವರಿಗೆ ನೇರವಾಗಿ 8ನೇ ತರಗತಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡುವ ಬಗ್ಗೆ ಶಿಕ್ಷಣ ಇಲಾಖೆ ಜತೆ ಚರ್ಚಿಸಲಾಗುವುದು. ಹಾಗಾದಲ್ಲಿ ಚಾಲನಾ ಪರವಾನಗಿ ಪಡೆಯಲು ಅನುಕೂಲವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಮತ್ತೊಂದೆಡೆ ಸಾರಿಗೇತರ ವಾಹನಗಳ ಚಾಲಕರು ನಿಯಮ ಪಾಲಿಸಬೇಕು. ಸಾಕಷ್ಟು ಚಾಲಕರು ನಿಯಮ ಪಾಲಿಸುವು- ದಿಲ್ಲ. ನಿಯಮ ಪಾಲಿಸುವ ನಿಟ್ಟಿನಲ್ಲಿ ಅವರಲ್ಲಿ ಅರಿವು ಮೂಡಿಸಬೇಕು ಹಾಗೂ ಪಾಠ ಹೇಳಬೇಕು. ಪ್ರತಿಯೊಬ್ಬರೂ ನಿಯಮ ಪಾಲಿಸಿದರೆ ಹೆಚ್ಚುತ್ತಿರುವ ಅಪ ಘಾತ, ಅನಾಹುತ ನಿಯಂತ್ರಿಸಬಹುದು ಎಂದರು.
ಪ್ರತಿಯೊಬ್ಬರು ಸಂಚಾರ ನಿಯಮ ಪಾಲಿಸಬೇಕು. ನಗರದಲ್ಲಿ ವಾಹನಗಳ ಸಂಖ್ಯೆ ಹೆಚ್ಚಿದ್ದು, ಅಪಘಾತ ಪ್ರಕರಣಗಳೂ ಹೆಚ್ಚುತ್ತಿವೆ. ಚಾಲಕರು ನಿಯಮ ಪಾಲಿಸುವುದರಿಂದ ಅಪಘಾತ ನಿಯಂತ್ರಣ ಸಾಧ್ಯ ಎಂದ ಅವರು, ಅಪಘಾತ ಹೆಚ್ಚಾಗಿ ನೀವು ನಂತರ ನೋವು ಪಡುವ ಮುನ್ನ ನೀವೂ ಎಚ್ಚೆತ್ತುಕೊಂಡು, ನಿಯಮ ಪಾಲಿಸುವ ಬಗ್ಗೆ ಕುಟುಂಬದವರಿಗೂ ಸಲಹೆ ನೀಡಿ ಎಂದರು. ಸಾರಿಗೆ ಇಲಾಖೆ ಆಯುಕ್ತ ರಾಮೇಗೌಡ ಮಾತನಾಡಿ, ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದೆ. ರಾಜ್ಯದಲ್ಲಿ 1.47 ಕೋಟಿ ವಾಹನಗಳಿವೆ. ಬೆಂಗಳೂರಿನಲ್ಲೇ 57 ಲಕ್ಷ ವಾಹನಗಳಿವೆ. ನಗರದಲ್ಲಿ ಪ್ರತಿ ನಿತ್ಯ 3 ಸಾವಿರ ವಾಹನಗಳು ನೋಂದಣಿ ಆಗುತ್ತಿವೆ. ಇಲಾಖೆಯಲ್ಲಿ ರಾಜ್ಯಾದ್ಯಂತ 1750 ಸಿಬ್ಬಂದಿ ಇದ್ದಾರೆ. ಇರುವ ಸಿಬ್ಬಂದಿ ಸಾಲುತ್ತಿಲ್ಲ. ಸಿಬ್ಬಂದಿ ನೇಮಕದ ಬಗ್ಗೆ ಕೆಪಿಎಸ್‍ಸಿಗೆ ಮನವಿ ಮಾಡಲಾಗಿದ್ದು, ಶೀಘ್ರ ಸಿಬ್ಬಂದಿ ನೇಮಕ ಮಾಡುವ ಭರವಸೆ ನೀಡಿದ್ದಾರೆ ಎಂದರು.
ಸುಮಾರು 50ಕ್ಕೂ ಹೆಚ್ಚು ದೂರು ಗಳನ್ನು ಸ್ವೀಕರಿಸಿದ ಇಲಾಖೆ ಅಧೀಕಾರಿಗಳು ಶೀಘ್ರದಲ್ಲಿ ಬಗೆಹರಿಸುವ ಭರವಸೆ ನೀಡಿದರು. ನೂರಾರು ಮಂದಿ ವಾಹನ ಚಾಲಕರು ಅದಾಲತ್‍ನಲ್ಲಿ ಭಾಗವಹಿಸಿ, ಕುಂದು ಕೊರತೆ ವಿವರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


