ನಗರಕ್ಕೆ ಬಂದ 15 ಸಾವಿರ ಚೆನ್ನೈ ಜನ
ಚೆನ್ನೈನಿಂದ ಬೆಂಗಳೂರಿಗೆಆಗಮಿಸುತ್ತಿರುವ ರೈಲು ಹಾಗೂ ಕೆಎಸ್‍ಆರ್‍ಟಿಸಿ ಬಸ್‍ಗಳು ಫುಲ್ ರಶ್. ಕಳೆದ ಹತ್ತು ದಿನಗಳಲ್ಲಿ ಸುಮಾರು 15 ಸಾವಿರ ಜನ ತಮಿಳುನಾಡಿನಿಂದ ಬೆಂಗಳೂರಿಗೆ ಆಗಮಿಸಿದ್ದಾರೆ. ಅಷ್ಟೇ ಅಲ್ಲ, ಮುಂದಿನ ದಿನಗಳಲ್ಲಿ ತಮಿಳುನಾಡು ನಿರಾಶ್ರಿತರ...

ಬೆಂಗಳೂರು: ಚೆನ್ನೈನಿಂದ ಬೆಂಗಳೂರಿಗೆಆಗಮಿಸುತ್ತಿರುವ ರೈಲು ಹಾಗೂ ಕೆಎಸ್‍ಆರ್‍ಟಿಸಿ ಬಸ್‍ಗಳು ಫುಲ್ ರಶ್. ಕಳೆದ ಹತ್ತು ದಿನಗಳಲ್ಲಿ ಸುಮಾರು 15 ಸಾವಿರ ಜನ ತಮಿಳುನಾಡಿನಿಂದ ಬೆಂಗಳೂರಿಗೆ ಆಗಮಿಸಿದ್ದಾರೆ. ಅಷ್ಟೇ ಅಲ್ಲ, ಮುಂದಿನ ದಿನಗಳಲ್ಲಿ ತಮಿಳುನಾಡು ನಿರಾಶ್ರಿತರ ಸಂಖ್ಯೆ ಆಗಮನ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯೂ ಇದೆ.
ಚೆನ್ನೈನಿಂದ ಪ್ರತಿನಿತ್ಯ ಬೆಂಗಳೂರಿಗೆ ಬರುವ ಬಸ್ ಹಾಗೂ ರೈಲನ್ನು ಗಮನಿಸಿದರೆ ಬಸ್‍ನಲ್ಲಿ ಈ ಹಿಂದಿಗಿಂತ ಪ್ರಯಾಣಿಕರ ಸಂಖ್ಯೆ ಹೆಚ್ಚಿದೆ. ಕೆಎಸ್ ಆರ್‍ಟಿಸಿ ಸೇವೆ ಉಚಿತವಾಗಿ ಒದಗಿಸಿರುವುದರಿಂದ ಅವುಗಳಲ್ಲೂ ಸಾಕಷ್ಟು ಮಂದಿ ಆಗಮಿಸುತ್ತಿದ್ದಾರೆ. ರೈಲಿನಲ್ಲಿ ಆಗಮಿಸುವ ಪ್ರಯಾಣಿಕರ ಸಂಖ್ಯೆ ಹೆಚ್ಚಿದೆ. ಈ ಹಿಂದಿನ ದಿನಗಳಿಗೆ ಹೋಲಿಸಿದರೆ ಕೊಂಚ
ಹೆಚ್ಚಿದೆ. ಅವರೆಲ್ಲ ತಮಿಳುನಾಡಿನವರೇ, ತಮಿಳರೇ ಎಂಬ ಬಗ್ಗೆ ನಿಖರ ಮಾಹಿತಿ ಇಲ್ಲ ಎನ್ನುತ್ತಾರೆ ರೈಲ್ವೆ ಇಲಾಖೆ ಅಧೀಕಾರಿಗಳು.
ಈ ಬಗ್ಗೆ ಮಾತನಾಡಿರುವ ಕೆಎಸ್‍ಆರ್‍ಟಿಸಿ ವ್ಯವ-ಸ್ಥಾಪಕ ನಿರ್ದೇಶಕ ರಾಜೇಂದ್ರ ಕುಮಾರ್ ಕಠಾರಿಯಾ, ಪ್ರತಿನಿತ್ಯ 50ರಿಂದ 60 ಉಚಿತ ಸಾರಿಗೆ ಬಸ್ ಸೇವೆ ಕಲ್ಪಿಸಿದ್ದು, ಅಲ್ಲಿಂದ ಸುಮಾರು 10 ಸಾವಿರ ಜನ ಆಗಮಿಸಿದ್ದಾರೆ. ಅವರೆಲ್ಲಪ್ರವಾಹದಿಂದ ಮುಖಮಾಡುತ್ತಿರುವುದು ಸಿಬ್ಬಂದಿ ಜತೆ ಮಾತುಕತೆ ನಡೆಸಿದಾಗ ಖಚಿತವಾಗಿದೆ. ಬಸ್ ರೈಲು ಮಾತ್ರವಲ್ಲದೆ ಖಾಸಗಿ ವಾಹನಗಳಲ್ಲೂ ತಮಿಳುನಾಡಿನಿಂದ ನೂರಾರು ಸಂಖ್ಯೆಯಲ್ಲಿ ಜನ ನಗರದತ್ತ ಧಾವಿಸಿದ್ದಾರೆ. ಇದು ಇನ್ನೂ ಕೆಲ ದಿನ ಮುಂದುವರಿಯಲಿದೆ. ಅಗತ್ಯಬಿದ್ದಲ್ಲಿ ಉಚಿತ ಬಸ್ ಸೇವೆ ಮುಂದುವರೆಸುವ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


