ಜಿಲ್ಲಾ ಸುದ್ದಿ

ವ್ಯತ್ಯಾಸ, ವೈರುಧ್ಯಗಳ ಮರೆತರೆ ಮಾತ್ರ ಶಾಂತಿ: ದಲೈಲಾಮ

ನಂಬಿಕೆ, ಧರ್ಮ, ವಯಸ್ಸು , ಶಿಕ್ಷಣ, ಸಾಮಾಜಿಕವಾಗಿ ಮನುಷ್ಯರಲ್ಲಿ ಸಾಕಷ್ಟು ವ್ಯತ್ಯಾಸಗಳಿರುವುದರಿಂದಲೇ ಹೆಚ್ಚಿನ ಸಮಸ್ಯೆಗಳು ಉದ್ಭವಿಸುತ್ತಿವೆ. ಜನರು ಈ ವ್ಯತ್ಯಾಸಗಳ ಬಗ್ಗೆ ಯೋಚಿಸುವುದನ್ನು ನಿಲ್ಲಿಸಬೇಕು. ಇಲ್ಲಿ ಎಲ್ಲರೂ ಸಮಾನರು. ಪ್ರತಿಯೊಬ್ಬರು...

ವ್ಯತ್ಯಾಸ, ವೈರುಧ್ಯಗಳ ಮರೆತರೆ ಮಾತ್ರ ಶಾಂತಿ: ದಲೈಲಾಮ
ಬೌದ್ಧ ಗುರು ದಲೈಲಾಮಾ (ಸಂಗ್ರಹ ಚಿತ್ರ)
Published On :

ಬೆಂಗಳೂರು: ನಂಬಿಕೆ, ಧರ್ಮ, ವಯಸ್ಸು , ಶಿಕ್ಷಣ, ಸಾಮಾಜಿಕವಾಗಿ ಮನುಷ್ಯರಲ್ಲಿ ಸಾಕಷ್ಟು ವ್ಯತ್ಯಾಸಗಳಿರುವುದರಿಂದಲೇ ಹೆಚ್ಚಿನ ಸಮಸ್ಯೆಗಳು ಉದ್ಭವಿಸುತ್ತಿವೆ. ಜನರು ಈ ವ್ಯತ್ಯಾಸಗಳ ಬಗ್ಗೆ ಯೋಚಿಸುವುದನ್ನು ನಿಲ್ಲಿಸಬೇಕು. ಇಲ್ಲಿ ಎಲ್ಲರೂ ಸಮಾನರು. ಪ್ರತಿಯೊಬ್ಬರು ತಾಯಿ ಎದೆಹಾಲು ಕುಡಿದು ಬೆಳೆದಿ ದ್ದಾರೆ ಎಂದು ಶಾಂತಿದೂತ ಬೌದ್ಧ ಗುರು ದಲೈಲಾಮಾ ಹೇಳಿದರು.

ಬೆಂಗಳೂರಿನಲ್ಲಿ ಏಷ್ಯನ್ ಆರಬ್ ಚೇಂಬರ್ ಆಫ್ ಕಾಮರ್ಸ್' ಹಮ್ಮಿಕೊಂಡಿದ್ದ `ಜಾಗತಿಕ ಶಾಂತಿ ಆರ್ಥಿಕ ಸಮ್ಮೇಳನ'ದಲ್ಲಿ ಮಾತನಾಡಿದ ಅವರು, ``ದೇಶ, ಧಾರ್ಮಿಕ ಆಸಕ್ತಿ ಮೊದಲು, ನಂತರ ಜಾಗತಿಕ ಆಸಕ್ತಿ ಬೆಳೆಸಿಕೊಳ್ಳ ಬೇಕು. ಇದು ಶಾಂತಿಯ ಮೂಲ ಮಂತ್ರ. ಒಂದು ದೇಶದಲ್ಲಿ ವಿವಿಧ ರೀತಿಯ ಜನಾಂಗದವರನ್ನು ಮತ್ತು ಒಂದೇ ಭಾಷೆಯಲ್ಲಿ ಹಲವು ಮುಖಗಳನ್ನು ನಾವು ಕಾಣಬಹುದು. ಆದರೆ ಜಗತ್ತಿನ ಯಾವುದೇ ಮೂಲೆಗೆ ಹೋದರೂ ಶಾಂತಿಯ ಸ್ವರೂಪ ಒಂದೇ ಎಂದು ದಲೈಲಾಮಾ ಪ್ರತಿಪಾದಿಸಿದರು.

ಇಂದಿನ ಶಿಕ್ಷಣ ಮಾನವಿಯ ಮೌಲ್ಯ ತಿಳಿಸುವ ಶಿಕ್ಷಣ ವ್ಯವಸ್ಥೆಯಾಗಿ ಉಳಿದಿಲ್ಲ . ನೈಜ ಸಂಬಂಧ ಬೆಳೆಸುವ ಶಿಕ್ಷಣ ವ್ಯವಸ್ಥೆ ಯುವ ಪೀಳಿಗೆಗೆ ಅವಶ್ಯವಿದೆ ಎಂದು ಹೇಳಿದರು.
ಏಷ್ಯನ್-ಅರಬ್ ಚೇಂಬರ್ ಆಫ್ ಕಾಮರ್ಸ್ ಕಾರ್ಯ ನಿರ್ವಾಹಕ ನಿರ್ದೇಶಕ ಆಸಿಫ್ ಇಕ್ಬಾಲ್, ``ವಿಶ್ವವೇ ಇಂದು ಭಯೋತ್ಪಾದಕರ ಮುಷ್ಟಿಯಲ್ಲಿ ದ್ದು ಈ ಹಿಡಿತದಿಂದ ಹೊರಬರ
ಬೇಕಾದ ಅನಿವಾರ್ಯತೆ ಇದೆ. ಸಾಮಾನ್ಯ ಮುಸ್ಲಿಮರನ್ನು ಶಿಕ್ಷಿತರನ್ನಾಗಿಸುವುದು ಮತ್ತು ಮುಸ್ಲಿಂ ಹಾಗೂ ಮುಸ್ಲಿಮೇತರ ಸಮು ದಾಯದಲ್ಲಿ ಉಗ್ರಗಾಮಿತ್ವಉತ್ತೆ ೀಜಿಸುವ ಪ್ರವೃತ್ತಿಗೆ ಕಡಿವಾಣ ಹಾಕುವುದು ಮುಖ್ಯೆ ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.