ಜಿಲ್ಲಾ ಸುದ್ದಿ

ಮದ್ಯದಂಗಡಿ ಸುಡಲು ಯತ್ನ

ಮದ್ಯದಂಗಡಿ ತೆರವಿಗೆ ಒತ್ತಾಯಿಸಿ ಮದ್ಯಮಾರಾಟ ಮಳಿಗೆಗೆ ಬೀಗ ಜಡಿದು ಬೆಂಕಿಹಚ್ಚಲು ಗ್ರಾಮಸ್ಥರು ಮುಂದಾದ ವೇಳೆಯೇ ಮಹಿಳೆಯೊಬ್ಬರು ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆಯೂ ಗುತ್ತೂರು ಗ್ರಾಮದಲ್ಲಿ ಶುಕ್ರವಾರ ನಡೆಯಿತು...

ಮದ್ಯದಂಗಡಿ ಸುಡಲು ಯತ್ನ
(ಸಾಂದರ್ಭಿಕ ಚಿತ್ರ)
Published On :

ಹರಿಹರ: ಮದ್ಯದಂಗಡಿ ತೆರವಿಗೆ ಒತ್ತಾಯಿಸಿ ಮದ್ಯಮಾರಾಟ ಮಳಿಗೆಗೆ ಬೀಗ ಜಡಿದು ಬೆಂಕಿಹಚ್ಚಲು ಗ್ರಾಮಸ್ಥರು ಮುಂದಾದ ವೇಳೆಯೇ ಮಹಿಳೆಯೊಬ್ಬರು ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆಯೂ ಗುತ್ತೂರು ಗ್ರಾಮದಲ್ಲಿ ಶುಕ್ರವಾರ ನಡೆಯಿತು.

ಗ್ರಾಮದಲ್ಲಿ ಮದ್ಯದಂಗಡಿ ತೆರವುಗೊಳಿಸಲು ಈಗಾಗಲೇ ಸಾಕಷ್ಟು ಹೋರಾಟ ನಡೆದಿದ್ದವು. ಆದರೆ, ಮದ್ಯ ದಂಗಡಿ ತೆರವಿಗೆ ಅಧಿಕಾರಿಗಳು ಮುಂದಾಗದ್ದರಿಂದ ಗ್ರಾಮಸ್ಥರು ಆಕ್ರೋಶಗೊಂಡು ಹೋರಾಟ ನಡೆಸಿದರು. ಇದೇ ಸಂದರ್ಭದಲ್ಲೇ ಮಂಜಮ್ಮ ವೆಂಕಟೇಶಪ್ಪ ಎಂಬವರು ಮೈ ಮೇಲೆ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದರು.

ಪೊಲೀಸರು ಅದನ್ನು ತಡೆದರು. ನಂತರ ಗುತ್ತೂರು ಗ್ರಾಪಂ ಕಚೇರಿಗೆ ವಿವಿಧ ಸ್ತ್ರೀಶಕ್ತಿ ಸಂಘಗಳ ನೇತೃತ್ವದಲ್ಲಿ ಮಹಿಳೆಯರು ಮುತ್ತಿಗೆ ಹಾಕಿ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಹರಿಹರ ಸಿಪಿಐ ಜಯಣ್ಣ ಎಸ್.ನ್ಯಾಮೇ ಗೌಡ್ರು, ಎಸ್‍ಐ ಎಸ್.ನ್ಯಾಮೇಗೌಡ್ರು, ಹಿರಿಯರು ಇನ್ನು 23 ದಿನಗಳಲ್ಲೇ ತಹಸೀಲ್ದಾರ್ ಅಬಕಾರಿ ಅಧಿಕಾರಿಗಳೊಂದಿಗೆ ಚರ್ಚಿಸಿ, ಸಮಸ್ಯೆ ಪರಿಹರಿಸಲು ಸೋಮವಾರದವರೆಗೆ ಕಾಲಾವಕಾಶ ಕೋರಿದ್ದರು. ಬಳಿಕ ಪರಿಸ್ಥಿತಿ ತಿಳಿಯಾಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.