ಜಿಲ್ಲಾ ಸುದ್ದಿ

ವಿದ್ಯಾರ್ಥಿ ಸಾವು: ಆಸ್ಪತ್ರೆಗೆ ಬೆಂಕಿ

ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೆ ವಿದ್ಯಾರ್ಥಿಯೊಬ್ಬ ಮೃತಪಟ್ಟ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಸ್ಥಳೀಯರು ಆರೋಗ್ಯ ಕೇಂದ್ರಕ್ಕೆ ಬೆಂಕಿ ಇಟ್ಟು ಭಸ್ಮಗೊಳಿಸಿರುವ ಘಟನೆ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಪ್ರೋತ್ನಾಳದಲ್ಲಿ ಶುಕ್ರವಾರ ನಡೆದಿದೆ...

ವಿದ್ಯಾರ್ಥಿ ಸಾವು: ಆಸ್ಪತ್ರೆಗೆ ಬೆಂಕಿ
ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಪ್ರೋತ್ನಾಳದಲ್ಲಿ ಉದ್ರಿಕ್ತರು ಆರೋಗ್ಯ ಕೇಂದ್ರದ ಪೀಠೋಪಕರಣಗಳಿಗೆ ಬೆಂಕಿ ಇಟ್ಟರು.
Published On :

ಮಾನ್ವಿ: ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೆ ವಿದ್ಯಾರ್ಥಿಯೊಬ್ಬ ಮೃತಪಟ್ಟ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಸ್ಥಳೀಯರು ಆರೋಗ್ಯ ಕೇಂದ್ರಕ್ಕೆ ಬೆಂಕಿ ಇಟ್ಟು ಭಸ್ಮಗೊಳಿಸಿರುವ ಘಟನೆ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಪ್ರೋತ್ನಾಳದಲ್ಲಿ ಶುಕ್ರವಾರ ನಡೆದಿದೆ.

ಸಾರ್ವಜನಿಕರ ಆಕ್ರೋಶಕ್ಕೆ ಆಸ್ಪತ್ರೆ ಕಟ್ಟಡ ಮತ್ತು ಪರಿಕರಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ನರ್ಸ್ ಮನೆಯಲ್ಲಿದ್ದ ವಸ್ತುಗಳು ಹಾಗೂ ಕೇಂದ್ರದ ಎದುರು ನಿಲ್ಲಿಸಿದ್ದ ವಾಹನಗಳೂ ಸಾರ್ವಜನಿಕರ ಆಕ್ರೋಶಕ್ಕೆ ಸುಟ್ಟುಭಸ್ಮವಾಗಿವೆ. ಈ ವೇಳೆ ಪೊಲೀಸರು ಪ್ರತಿಭಟನಾಕಾರರನ್ನು ನಿಯಂತ್ರಿಸಲು ಎರಡು ಬಾರಿ ಅಶ್ರುವಾಯು ಪ್ರಯೋಗಿಸಿದ ಘಟನೆಯೂ ನಡೆಯಿತು.

ಆಗಿದ್ದೇನು?: ವೀರೇಶ ಅಮರಾವತಿ(16) ಪ್ರೊತ್ನಾಳದ ಬಿಸಿಎಂ ಹಾಸ್ಟೆಲ್‍ನಲ್ಲಿದ್ದುಕೊಂಡು ಎಸ್‍ಎಸ್‍ಎಲ್‍ಸಿ ಓದುತ್ತಿದ್ದ. ಶಿಕ್ಷಕರೊಬ್ಬರು ಬೋರ್‍ವೆಲ್ ಚಾಲು ಮಾಡಲು ವೀರೇಶನನ್ನು
ಕಳುಹಿಸಿದ್ದರು ಎನ್ನಲಾಗಿದೆ. ಆಗ ವಿರೇಶ್‍ನಿಗೆ ವಿದ್ಯುತ್ ಶಾಕ್ ಹೊಡೆದಿದೆ. ತಕ್ಷಣ ವಾರ್ಡನ್ ವೀರೇಶ್‍ನನ್ನು ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ. ಆದರೆ
ಅಲ್ಲಿ ವೈದ್ಯರೇ ಇರಲಿಲ್ಲ. ವೈದ್ಯಾಧಿಕಾರಿ ಶೇಖ್ ಮತಿನ್ ಕರೆ ಮಾಡಿದರೆ ಅವರು ಸ್ವೀಕರಿಸಲೇ ಇಲ್ಲ. ಕೊನೆಗೆ 108 ಆಂಬ್ಯುಲೆನ್ಸ್ ಕಳುಹಿಸಿ ಎಂದು ಪರಿಚಾರಕನಿಗೆ ವಿನಂತಿಸಿದಾಗ ಆತ ಡೀಸೆಲ್ ಇಲ್ಲ ಎಂದು ಹಾರಿಕೆ ಉತ್ತರ ನೀಡಿದ್ದಾನೆ.

ಇಷ್ಟೆಲ್ಲ ಆಗುವುದರೊಳಗೆ ವಿದ್ಯಾರ್ಥಿ ಅಸುನೀಗಿದ್ದ. ಇದರಿಂದ ರೊಚ್ಚಿಗೆದ್ದ ಸಾರ್ವಜನಿಕರು ಹೆದ್ದಾರಿಯಲ್ಲಿ ಬಾಲಕನ ಶವಇಟ್ಟು ರಸ್ತೆ ನಡೆಸಿದರು. ಟೈರ್ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು. ಬೆಳಗ್ಗೆ 10ರಿಂದ ಸಂಜೆ 5 ಗಂಟೆವರೆಗೆ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತಗೊಂಡಿತ್ತು. ಈ ನಡುವೆ ಕೆಲವರು ಆರೋಗ್ಯ ಕೇಂದ್ರಕ್ಕೆ ನುಗ್ಗಿ ಬೆಂಕಿ ಇಟ್ಟಿದ್ದರಿಂದ ಇಡೀ ಆಸ್ಪತ್ರೆ ಹೊತ್ತಿ ಉರಿಯತೊಡಗಿತು. ಪರಿಸ್ಥಿತಿ ನಿಯಂತ್ರಿಸಲು ಬಂದ ಪೊಲೀಸರತ್ತಲೂ ಕಲ್ಲು ತೂರಲಾಯಿತು. ನಂತರ ಪಕ್ಕದಲ್ಲೇ ಇದ್ದ ಆಸ್ಪತ್ರೆಯ ನರ್ಸ್ ಶಾಂತಮ್ಮಳ ಮನೆಗೂ ನುಗ್ಗಿದ ಆಕ್ರೋಶಿತರು ಅಲ್ಲಿನ ವಸ್ತುಗಳನ್ನೆಲ್ಲಾ ಹೊರತಂದು ಸುಟ್ಟು ಹಾಕಿದರು. ಸಿಬ್ಬಂದಿ ಬೈಕ್, ಸೈಕಲ್ ಇತರೆ ವಸ್ತುಗಳು ಸಹ ಬೆಂಕಿಗಾಹುತಿಯಾಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.