ಜಿಲ್ಲಾ ಸುದ್ದಿ

ಸಚಿವೆಗೆ ಪ್ರತಿಭಟನೆಯ ಬಿಸಿ

ಕೆಪಿಟಿಸಿಎಲ್/ಎಸ್ಕಾಂಗಳಲ್ಲಿ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿ ಕೊಂಡಿರುವ ತಮ್ಮನ್ನು, ವಿಶೇಷ ಪ್ರಕರಣವೆಂದು ಪರಿಗಣಿಸಿ ಕಾಯಂ ಗೊಳಿಸುವಂತೆ ಒತ್ತಾಯಿಸಿ ಅಂಗವಿಕಲ ಕಂದಾಯ ಸಹಾಯಕರು ವಿಶ್ವ ಅಂಗವಿಕಲ ದಿನಾಚರಣೆಯಲ್ಲಿ ಪ್ರತಿಭಟಿಸಿದರು...

ಸಚಿವೆಗೆ ಪ್ರತಿಭಟನೆಯ ಬಿಸಿ
ಸಚಿವೆಗೆ ಪ್ರತಿಭಟನೆಯ ಬಿಸಿ (ಫೋಟೋ ಕೃಪೆ: ಕೆಪಿಎನ್)
Published On :

ಬೆಂಗಳೂರು: ಕೆಪಿಟಿಸಿಎಲ್/ಎಸ್ಕಾಂಗಳಲ್ಲಿ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿ ಕೊಂಡಿರುವ ತಮ್ಮನ್ನು, ವಿಶೇಷ ಪ್ರಕರಣವೆಂದು ಪರಿಗಣಿಸಿ ಕಾಯಂ ಗೊಳಿಸುವಂತೆ ಒತ್ತಾಯಿಸಿ ಅಂಗವಿಕಲ ಕಂದಾಯ ಸಹಾಯಕರು ವಿಶ್ವ ಅಂಗವಿಕಲ ದಿನಾಚರಣೆಯಲ್ಲಿ ಪ್ರತಿಭಟಿಸಿದರು.

ಕಾರ್ಯಕ್ರಮ ಆರಂಭವಾಗಿ, ನಾಡಗೀತೆ ಮುಗಿಸಿ ಸ್ವಾಗತ ಕೋರುತ್ತಿದ್ದಂತೆಯೇ ಸಭಿಕರ ನಡುವೆ ಇದ್ದ 50ಕ್ಕೂ ಹೆಚ್ಚು ನೌಕರರು ಎದ್ದು ನಿಂತು ಸರ್ಕಾರದ ವಿರುದ್ಧ ಧಿಕ್ಕಾರ ಮೊಳಗಿಸಿದರು.ಕಾರ್ಯ-ಕ್ರಮ ನಿರೂಪಕರು, ಚುನಾವಣೆ ನೀತಿ ಸಂಹಿತೆ ಇರುವುದರಿಂದ ಇಲ್ಲಿ ಭಾಗವಹಿಸಿರುವ ಸಚಿವರು ಯಾವುದೇ ಭರವಸೆ ನೀಡಲು ಸಾಧ್ಯವಿಲ್ಲ. ನಿಮ್ಮ ಮನವಿಯನ್ನು ಪತ್ರದ ಮುಖೇನ ತಿಳಿಸಿ ಕಾರ್ಯಕ್ರಮ ನಡೆಯಲು ಅನುವು ಮಾಡಿಕೊಡುವಂತೆ ಕೇಳಿಕೊಂಡರು.

ವಿನಂತಿಗೆ ಜಗ್ಗದ ಪ್ರತಿ ಭಟನಾಕಾರರು ವೇದಿಕೆ ಮುಂದೆ ಬಂದು ಸರ್ಕಾರದ ವಿರುದ್ಧ ಘೋಷಣೆ ಕೂಗುವುದನ್ನು ಮುಂದುವರೆಸಿದರು. ಕಾರ್ಯಕ್ರಮದಲ್ಲಿ ಪ್ರತಿಭಟನೆ ನಡೆಸುವ ಮುನ್ಸೂಚನೆ ಇದ್ದರೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಿರಲಿಲ್ಲ. ಇದರಿಂದ ವೇದಿಕೆ ಮುಂದೆ ಜನಜಂಗುಳಿ ಹೆಚ್ಚಾಗಿ ಏನಾಗುತ್ತಿದೆ ಎಂಬುದೇ ಗೊತ್ತಾಗದೇ ಸಭಿಕರು ಗೊಂದಲಗೊಂಡರು.

ಪೊಲೀಸರು ಸಂಧಾನಕ್ಕೆ ಯತ್ನಿಸಿದರೂ ಪ್ರತಿಭಟನೆ ನಿಲ್ಲಲಿಲ್ಲ. ಈ ಗೊಂದಲದ ನಡುವೆಯೇ ಕಾರ್ಯ ಕ್ರಮ ಮುಂದು ವರೆಯಿತು. ಕೊನೆಗೆ ಸಚಿವೆ ಉಮಾಶ್ರೀ ಮನವಿ ಸ್ವೀಕರಿಸಿ, ಇಂಧನ ಸಚಿವರ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.