ಸಾಲ ನೀಡದ ಸ್ನೇಹಿತನಿಗೆ ಇರಿದು ಕೊಲೆ
ಸಾಲ ನೀಡಿದ ಸ್ನೇಹಿತನನ್ನು ಸಹೋದರರಿಬ್ಬರು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಜೆಜೆ ನಗರದ ಫರೂಕ್ ನಗರದಲ್ಲಿ ಮಂಗಳವಾರ ರಾತ್ರಿ ಸಂಭವಿಸಿದೆ...

ಬೆಂಗಳೂರು: ಸಾಲ ನೀಡಿದ ಸ್ನೇಹಿತನನ್ನು ಸಹೋದರರಿಬ್ಬರು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಜೆಜೆ ನಗರದ ಫರೂಕ್ ನಗರದಲ್ಲಿ ಮಂಗಳವಾರ ರಾತ್ರಿ ಸಂಭವಿಸಿದೆ.
ಫರೂಕ್ ನಗರ ವಾಸಿ ವಾಸೀಂ (20) ಮೃತರು. ಪ್ರಕರಣ ದಾಖಲಿಸಿಕೊಂಡಿರುವ ಜೆಜೆ ನಗರ ಪೊಲೀಸರು ಆರೋಪಿ ಸೋದರರಾದ ಸಲ್ಮಾನ್ (29) ಮತ್ತು ಸುಲ್ತಾನ್(20) ಎಂಬುವರನ್ನು ಬಂಧಿಸಿದ್ದಾರೆ. ಕೊಲೆಯಾದ ವಾಸೀಂ ಮತ್ತು ಸಲ್ಮಾನ್ ಮೆಜೆಸ್ಟಿಕ್‍ನಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಿದ್ದರು. ವ್ಯಾಪಾರದಲ್ಲಿ ನಷ್ಟ ಅನುಭವಿಸಿದ್ದ ಸಲ್ಮಾನ್, ಸ್ನೇಹಿತ ವಾಸೀಂ ಬಳಿ ರು.2 ಲಕ್ಷ ಸಾಲ ಕೇಳಿದ್ದ. ಆದರೆ, ವಾಸೀಂ ಸಾಲ ನೀಡಲು ನಿರಾಕರಿಸಿದ್ದರು.
ಈ ವಿಚಾರವಾಗಿ ಇಬ್ಬರ ನಡುವೆ ಜಗಳವಾಗಿತ್ತು. ಮಂಗಳವಾರ(ಡಿ.1) ಸಲ್ಮಾನ್ ಮತ್ತೊಮ್ಮೆ ವಾಸೀಂ ಬಳಿ ಸಾಲ ಕೇಳಿದ್ದಾನೆ. ಸಾಲ ನೀಡಲು ನಿರಾಕರಿಸಿದ್ದರಿಂದ ಬೇಸರಗೊಂಡ ಸಲ್ಮಾನ್, ರಾತ್ರಿ ತನ್ನ ಸಹೋದರ ಸುಲ್ತಾನ್ ಜತೆ ಮತ್ತೊಮ್ಮೆ ಸಾಲ ಕೇಳಲು ವಾಸೀಂ ಮನೆ ಹತ್ತಿರ ಹೋಗಿದ್ದ. ಮಾತುಕತೆ ವಿಕೋಪಕ್ಕೆ ತಿರುಗಿ ಪರಸ್ಪರ ಹೊಡೆದಾಡಿದ್ದಾರೆ. ಈ ವೇಳೆ ಮದ್ಯದ ಅಮಲಿನಲ್ಲಿದ್ದ ಸಲ್ಮಾನ್ ಹಾಗೂ ಸುಲ್ತಾನ್ ಚಾಕುವಿನಿಂದ ವಾಸೀಂ ಎದೆಗೆ ಇರಿದು ಪರಾರಿಯಾಗಿದ್ದರು. ರಕ್ತದ ಮಡುವಿನಲ್ಲಿದ್ದ ವಾಸೀಂನನ್ನು ಸ್ಥಳೀಯರು ಸಮೀಪದ ಆಸ್ಪತ್ರೆಗೆ ದಾಖಲಿಸಿದರಾದರೂ ಚಿಕಿತ್ಸೆ ಫಲಕಾರಿಯಾಗಿದೆ ಅವರು ಮೃತಪಟ್ಟಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


