ಅಕ್ರಮ ಕಂಡುಬಂದರೆ ಜೈಲು: ಹೈಕೋರ್ಟ್
ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಒಡೆತನದ ಇಟಾಸ್ಕಾ ಸಂಸ್ಥೆಗೆ ಕರ್ನಾಟಕ ಕೈಗಾರಿಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಸ್ವಾಧೀನ ಪಡಿಸಿಕೊಂಡಿರುವ ಭೂಮಿಯಲ್ಲಿ ಅಕ್ರಮ ನಡೆದಿರುವುದು ಕಂಡುಬಂದಲ್ಲಿ ಭೂ ಸ್ವಾಧಿೀನ ಅಧಿಕಾರಿಯನ್ನು ಜೈಲಿಗೆ...

ಬೆಂಗಳೂರು: ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಒಡೆತನದ ಇಟಾಸ್ಕಾ ಸಂಸ್ಥೆಗೆ ಕರ್ನಾಟಕ ಕೈಗಾರಿಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಸ್ವಾಧೀನ ಪಡಿಸಿಕೊಂಡಿರುವ ಭೂಮಿಯಲ್ಲಿ ಅಕ್ರಮ ನಡೆದಿರುವುದು ಕಂಡುಬಂದಲ್ಲಿ ಭೂ ಸ್ವಾಧಿೀನ ಅಧಿಕಾರಿಯನ್ನು ಜೈಲಿಗೆ ಕಳುಹಿಸುವುದಾಗಿ ಹೈಕೋರ್ಟ್ ಎಚ್ಚರಿಸಿದೆ.
ಕಟ್ಟಾ ಸುಬ್ರಹ್ಮಣ್ಯ ನಾಯ್ದು ಮಂತ್ರಿ ಆಗಿದ್ದ ವೇಳೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿನ ಬಂಡಿಕೋಡಿಗೆಹಳ್ಳಿ ಬಳಿ ಕೆಐಎಡಿಬಿ 71 ಎಕರೆ ಸ್ವಾಧೀನ ಪಡಿಸಿಕೊಂಡಿತ್ತು. ಅದರಲ್ಲಿ ಕಟ್ಟಾ ಅವರ ಪತ್ನಿ ಸೌಭಾಗ್ಯ ಅವರಿಗೆ ಸೇರಿದ ಐದು ಎಕರೆ ಜಮೀನೂ ಇತ್ತು. ಕೆಐಎಡಿಬಿ ಪರಿಹಾರ ಹಣ ನೀಡುವಾಗ ಕಟ್ಟಾ ಪತ್ನಿಗೆ ಸೇರಿದ ಜಮೀನಿಗೆ ಎಕರೆಗೆ ರು.40 ಲಕ್ಷ ನೀಡಿ ಉಳಿದವರಿಗೆ ರು.30 ಲಕ್ಷ ನೀಡಿರುವುದಾಗಿ ಆರೋಪಿಸಿ ಬಿ.ಎಂ. ರಂಗಸ್ವಾಮಿ ಎಂಬುವರು ಹೈಕೋರ್ಟ್ ನಲ್ಲಿ ತಕರಾರು ಅರ್ಜಿ ದಾಖಲಿಸಿದ್ದರು.
ವಿಚಾರಣೆ ವೇಳೆ ಕೆಐಎಡಿಬಿ ಪರ ವಕೀಲರು ಈ ಭೂ ವಿವಾದ ಲೋಕಾಯುಕ್ತದಲ್ಲಿ ತನಿಖೆ ನಡೆಯುತ್ತಿರುವುದಾಗಿ ಪೀಠದ ಗಮನಕ್ಕೆ ತಂದರು. ವಾದ ಆಲಿಸಿದ ನ್ಯಾ. ರಾಮ ಮೋಹನ
ರೆಡ್ಡಿ ಅವರಿದ್ದ ಏಕಸದಸ್ಯ ಪೀಠ, ಲೋಕಾಯುಕ್ತದಲ್ಲಿ ದೂರು ದಾಖಲಿಸಲು ಕಾರಣವೇನು? ಸದ್ಯ ಲೋಕಾಯುಕ್ತದಲ್ಲಿ ಬಾಕಿ ಇರುವ ಈ ಪ್ರಕರಣ ಯಾವ ಹಂತದಲ್ಲಿದೆ? ಕೆಐಎಡಿಬಿ ಸ್ವಾಧಿೀನ ಪಡಿಸಿಕೊಂಡಿರುವ ಒಟ್ಟಾರೆ ಜಮೀನು, ಅದಕ್ಕೆ ಸಂಬಂಧಿಸಿದಂತೆ ರಸ್ತೆ ಮಾರ್ಗ, ಸ್ವಾಧೀನ ಪಡಿಸಿಕೊಂಡ ಭೂ ಮಾಲೀಕರಿಗೆ ಕೆಐಎಡಿಬಿ ನೀಡಿರುವ ಒಟ್ಟಾರೆ ಪರಿಹಾರ
ಧನದ ಮಾಹಿತಿ ಒಳಗೊಂಡ ಪ್ರಮಾಣಪತ್ರವನ್ನು ಭೂಸ್ವಾಧೀನ ಅಧಿಕಾರಿ ಮುಂದಿನ ವಿಚಾರಣೆ ವೇಳೆಗೆ ಸಲ್ಲಿಸಬೇಕು ಎಂದು ಕಟ್ಟುನಿಟ್ಟಿನ ಆದೇಶ ಹೊರಡಿಸಿ ವಿಚಾರಣೆ ಸೆ. 3ಕ್ಕೆ
ಮುಂದೂಡಿತು.
ಮಿನಿಸ್ಟರ್ ಹೆಂಡತಿಗೇ ಒಂದು ಸ್ಕೆಚ್!
ವಿಚಾರಣೆ ವೇಳೆ ಜಮೀನಿಗೆ ಸಂಬಂಧ ಪಟ್ಟ `ಸ್ಕೆಚ್'(ನಕ್ಷೆ) ಸಲ್ಲಿಸುವಂತೆ ಪೀಠ ಕೆಐಎಡಿಬಿ ಪರ ವಕೀಲರಿಗೆ ಸೂಚಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ಕೆಐಎಡಿಬಿ ಪರ ವಕೀಲರು `ಸ್ಕೆಚ್'ಅನ್ನು ಅರ್ಜಿದಾರರೇ ಸಲ್ಲಿಸಬೇಕು ಎಂದು ಹೇಳಿದರು. ಈ ಹೇಳಿಕೆಗೆ ಕಿಡಿಕಾರಿದ ಪೀಠ, ಸಂಪೂರ್ಣ ಪ್ರಕರಣವೇ ಸ್ಕೆಚ್! ಮಿನಿಸ್ಟರ್ ಹೆಂಡತಿಗೆ ಒಂದು ಸ್ಕೆಚ್! ಮಿನಿಸ್ಟರ್‍ಗೆ ಗಂಡ, ಹೆಂಡತಿ
ಮಕ್ಕಳು ಅಲ್ಲದವರಿಗೆ ಮತ್ತೊಂದು ಸ್ಕೆಚ್! ಮಿನಿಸ್ಟರ್ ಪತ್ನಿಗಾದರೆ ಪರಿಹಾರ ಧನ ಹೆಚ್ಚು ನೀಡುತ್ತೀರಿ. ಸಾಮಾನ್ಯರಾದರೆ ಅವರಿಗೆ ಪರಿಹಾರ ಧನ ನೀಡುವಲ್ಲಿ ಕಡಿತಗೊಳಿಸುತ್ತೀರಿ. ಇದು ಯಾವ ರೀತಿಯ ನ್ಯಾಯ? ಎಂದು ಕೆಐಎಡಿಬಿ ವಕೀಲರನ್ನು ತರಾಟೆಗೆ ತೆಗೆದುಕೊಂಡಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


