ಜಿಲ್ಲಾ ಸುದ್ದಿ

ಬಿಜೆಪಿಯಲ್ಲಿ ಹೆಚ್ಚಿದ ತಳಮಳ

ಜೆಡಿಎಸ್‍ನ ನಡೆಯಿಂದ ಬಿಜೆಪಿ ಯಲ್ಲಿ ಸೋಮವಾರ ತಳಮಳ ಇನ್ನಷ್ಟು ಹೆಚ್ಚಾಗಿದೆ. ಒಂದು ವೇಳೆ ಜೆಡಿಎಸ್ ಕೈಕೊಟ್ಟರೆ ಮುಂದೇನು ಮಾಡಬೇಕೆಂಬ ಬಗ್ಗೆ ಗಂಬಿsೀರ ಚರ್ಚೆ ನಡೆದಿದೆ. ಅದೇ ರೀತಿ ಕಾನೂನು ಮೊರೆ ಹೋಗಲು ಇರುವ ಅವಕಾಶಗಳ ಬಗ್ಗೆಯೂ ಸಲಹೆಗಳನ್ನು ಪಡೆದುಕೊಳ್ಳುವ...

ಬಿಜೆಪಿಯಲ್ಲಿ ಹೆಚ್ಚಿದ ತಳಮಳ
(ಸಾಂದರ್ಭಿಕ ಚಿತ್ರ)
Published On :

ಬೆಂಗಳೂರು: ಜೆಡಿಎಸ್‍ನ ನಡೆಯಿಂದ ಬಿಜೆಪಿ ಯಲ್ಲಿ ಸೋಮವಾರ ತಳಮಳ ಇನ್ನಷ್ಟು ಹೆಚ್ಚಾಗಿದೆ. ಒಂದು ವೇಳೆ ಜೆಡಿಎಸ್ ಕೈಕೊಟ್ಟರೆ ಮುಂದೇನು ಮಾಡಬೇಕೆಂಬ ಬಗ್ಗೆ ಗಂಭೀರ ಚರ್ಚೆ ನಡೆದಿದೆ. ಅದೇ ರೀತಿ ಕಾನೂನು ಮೊರೆ ಹೋಗಲು ಇರುವ ಅವಕಾಶಗಳ ಬಗ್ಗೆಯೂ ಸಲಹೆಗಳನ್ನು ಪಡೆದುಕೊಳ್ಳುವ ಬಗ್ಗೆಯೂ ಪ್ರಾಥಮಿಕ ಹಂತದಲ್ಲಿ ಕಾರ್ಯ ಆರಂಭವಾಗಿದೆ.

ಬೆಳಿಗ್ಗೆ ಸುದ್ದಿಗೋಷ್ಠಿ ಹಿನ್ನೆಲೆಯಲ್ಲಿ ಸಂಸದ ಪಿ.ಸಿ. ಮೋಹನ್, ಶಾಸಕರಾ ದ ಸುರೇಶ್ ಕುಮಾರ್, ವಿಜಯಕುಮಾರ್, ಎಂಎಲ್‍ಸಿ ಅಶ್ವತ್ಥನಾರಾಯಣ ಸೇರಿದಂತೆ ಅನೇಕ ಮುಖಂಡರು ಪಕ್ಷದ ಕಚೇರಿಗೆ ಆಗಮಿಸಿದ್ದರು. ಇಷ್ಟರಲ್ಲಾಗಲೇ ಮಾಜಿ ಮೇಯರ್ ಕಟ್ಟೆ ಸತ್ಯನಾರಾಯಣ, ಹರೀಶ್ ನೇತೃತ್ವದ ತಂಡ ಮೇಯರ್ ಆಯ್ಕೆಗೆ ಮತದಾನ ಮಾಡಲು ಯಾರಿಗೆಲ್ಲಾ ಅವಕಾಶ ಇದೆ ಎಂಬುದರ ಬಗ್ಗೆ ಮಾಹಿತಿ ಪಡೆದು ಕಚೇರಿಗೆ ಆಗಮಿಸಿತು.

ಬೀದರ್ ನಗರ ಸಭೆಯಲ್ಲಿ ನಡೆದ ಚುನಾವಣೆಯಲ್ಲಿ ಅಲ್ಲಿನ ಲೋಕಸಭಾ ಸದಸ್ಯ, ಶಾಸಕರು ಮತ ಹಾಕಿದ ಪ್ರಕರಣದಲ್ಲಿ ಕೋರ್ಟ್ ನೀಡಿದ ತೀರ್ಪನ್ನು ಉಲ್ಲೇಖಿಸಿ ಇಲ್ಲೂ ಸಹ ಆ ರೀತಿಯ ಅವಕಾಶಗಳಿವೆ ಎಂಬ ಬಗ್ಗೆಯೂ ಚರ್ಚೆ ನಡೆಯಿತಾದರೂ ಯಾವುದೇ ಸ್ಪಷ್ಟತೆ ಬಾರದೇ ಇರುವ ಕಾರಣ ಕಾನೂನು ತಜ್ಞರ ಸಲಹೆ ಪಡೆದುಕೊಳ್ಳಲು ನಿರ್ಧರಿಸಲಾಯಿತು.

ಗೌಪ್ಯ ಚರ್ಚೆ?

ಚುನಾವಣೆ ಫಲಿತಾಂಶಬಳಿಕ ಎಚ್‍ಡಿ ಕುಮಾರ ಸ್ವಾಮಿಯವರನ್ನು ದೂರ ಮಾಡಿದ್ದ ಆರ್. ಅಶೋಕ್ ಇದೀಗ ಅವರ ಭೇಟಿಗೆ ಇನ್ನಿಲ್ಲದ ಪ್ರಯತ್ನ ನಡೆಸಿದ್ದಾರೆ. ಕಳೆದ ಎರಡು ದಿನಗಳಿಂದ ಅಶೋಕ್ ಕೈಗೆ ಸಿಗದ ಎಚ್‍ಡಿಕೆ ಸಾಕಷ್ಟು ಅಂತರ ಕಾಪಾಡಿಕೊಂಡಿದ್ದರು. ಆದರೆ, ಎಚ್‍ಡಿಕೆ ಮತ್ತು ಅಶೋಕ್ ನಡುವೆ ಗೌಪ್ಯ ಮಾತುಕತೆಗೆ ವೇದಿಕೆ ಸೃಷ್ಟಿಯಾಗಿದ್ದು, ಶೀಘ್ರವೇ ಚರ್ಚೆ ನಡೆಯಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.