ಪರಿಸರ ಸ್ನೇಹಿ ಗಣಪ ಜಾಗೃತಿಗೆ ಮ್ಯಾಜಿಕ್ ಷೋ
ಗಣೇಶ ಚತುರ್ಥಿ ಹತ್ತಿರವಾಗುತ್ತಿರುವುದರಿಂದ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ....

ಬೆಂಗಳೂರು: ಗಣೇಶ ಚತುರ್ಥಿ ಹತ್ತಿರವಾಗುತ್ತಿರುವುದರಿಂದ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಇದರ ಅಂಗವಾಗಿ ಪರಿಸರ ಸ್ನೇಹಿ ಗಣಪನನ್ನು ಮಾತ್ರ ಖರೀದಿಸುವಂತೆ ಜನರಲ್ಲಿ ಜಾಗೃತಿ ಮೂಡಿಸಲು ಕಬ್ಬನ್ ಉದ್ಯಾನದಲ್ಲಿ ಭಾನುವಾರ ಮ್ಯಾಜಿಕ್ ಷೋ ನಡೆಸಿತು. ಕೇವಲ ಒಂದು ಬಾರಿಯಲ್ಲದೆ ಬೆಳಗ್ಗೆ 7.45ಕ್ಕೆ ಹಾಗೂ ಬೆಳಗ್ಗೆ 10ಕ್ಕೆ ಒಟ್ಟು ಎರಡು ಬಾರಿ ಮ್ಯಾಜಿಕ್ ಷೋ ನಡೆಯಿತು. ಪ್ಲಾಸ್ಟರ್ ಆಫ್ ಪ್ಯಾರೀಸ್ ಉಪಯೋಗಿಸುವುದರಿಂದ ಆಗುವ ಹಾನಿ ಹಾಗೂ ಪರಿಸರಸ್ನೇಹಿ ಗಣಪನನ್ನು ಖರೀದಿಸುವುದರಿಂದ ಆಗುವ ಲಾಭ ಕುರಿತು ಜಾಗೃತಿ ಮೂಡಿಸಿದ ಪ್ರಯತ್ನ ವಿಶೇಷವಾಗಿತ್ತು.
ಜತೆಗೆ ನೆರೆದಿದ್ದ ಮಕ್ಕಳಿಂದ ಮಣ್ಣಿನ ಗಣಪತಿ ಖರೀದಿಸುವುದಾಗಿ ಪ್ರತಿಜ್ಞೆ ಮಾಡಲಾಯಿತು. ಇಷ್ಟೇ ಅಲ್ಲದೆ ಕೆಲವು ಖಾಸಗಿ ಕಂಪನಿಗಳ ಉದ್ಯೋಗಿಗಳು ಉದ್ಯಾನದಲ್ಲಿ ಶ್ರಮದಾನ ಕಾರ್ಯಕ್ರಮ ನಡೆಸಿದರು, ಉದ್ಯಾನವನ್ನು ಸ್ವಚ್ಛ ಮಾಡುವುದು, ಗೋಡೆಗಳಿಗೆ ಬಣ್ಣ ಹಚ್ಚುವುದು ಸೇರಿದಂತೆ ಅನೇಕ ಕಾರ್ಯಗಳನ್ನು ನಡೆಸಿದರು. ಸಹಾಯ ಹೋಲಿಸ್ಟಿಕ್ ಇಂಟಿಗ್ರೇ ಟೆಡ್ ಆಸ್ಪತ್ರೆಯಿಂದ ಆಯುರ್ವೇದ, ನ್ಯಾಚುರೋಪತಿ, ಹೋಮಿಯೋಪತಿ ಮತ್ತು ಉಪಯೋಗ ವಿಧಾನಗಳಿಂದ ಉತ್ತಮ ಆರೋಗ್ಯ ಕಾಪಾಡಿ ಕೊಳ್ಳುವ ಕುರಿತು ಉಪನ್ಯಾಸ ನಡೆಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


