ಜಿಲ್ಲಾ ಸುದ್ದಿ

ಬಿಬಿಎಂಪಿ: ಶನಿವಾರವಿಡೀ ನಿರಂತರ ಪ್ರಯತ್ನ

ಬಿಬಿಎಂಪಿ ಫಲಿತಾಂಶ ಪ್ರಕಟಣೆಗೆ ಮುನ್ನ ಜೆಡಿಎಸ್‍ನೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ಬಿಜೆಪಿ ನಾಯಕರು ಫಲಿತಾಂಶ ಪ್ರಕಟವಾದ ನಂತರ ಜೆಡಿಎಸ್‍ನೊಂದಿಗೆ ಸಂಪರ್ಕ ಕಡಿಕೊಂಡಿದ್ದರು. ನಂತರ ನಡೆದ ಬೆಳವಣಿಗೆಯಲ್ಲಿ ಪಕ್ಷೇತರ ಸದಸ್ಯರು ಕಾಂಗ್ರೆಸ್ ಕಬ್ಜಗೊಳ್ಳುತ್ತಿದ್ದಂತೆ ಜೆಡಿಎಸ್...

ಬಿಬಿಎಂಪಿ: ಶನಿವಾರವಿಡೀ ನಿರಂತರ ಪ್ರಯತ್ನ
ಕೇಂದ್ರ ಕಾನೂನು ಸಚಿವ ಸದಾನಂದಗೌಡ (ಸಂಗ್ರಹ ಚಿತ್ರ)
Published On :

ಬೆಂಗಳೂರು: ಬಿಬಿಎಂಪಿ ಫಲಿತಾಂಶ ಪ್ರಕಟಣೆಗೆ ಮುನ್ನ ಜೆಡಿಎಸ್‍ನೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ಬಿಜೆಪಿ ನಾಯಕರು ಫಲಿತಾಂಶ ಪ್ರಕಟವಾದ ನಂತರ ಜೆಡಿಎಸ್‍ನೊಂದಿಗೆ ಸಂಪರ್ಕ ಕಡಿಕೊಂಡಿದ್ದರು. ನಂತರ ನಡೆದ ಬೆಳವಣಿಗೆಯಲ್ಲಿ ಪಕ್ಷೇತರ ಸದಸ್ಯರು ಕಾಂಗ್ರೆಸ್ ಕಬ್ಜಗೊಳ್ಳುತ್ತಿದ್ದಂತೆ ಜೆಡಿಎಸ್ ನೊಂದಿಗೆ ಸಖ್ಯಬೆಳೆಸಲು ಮುಂದಾದರು.

ಆರ್.ಅಶೋಕ್ ಖುದ್ದು ಎಚ್.ಡಿ.ಕುಮಾರಸ್ವಾಮಿಯವರಿಗೆ ಕರೆ ಮಾಡಿ ಮನವೊಲಿಸಲು ಯತ್ನ ನಡೆಸಿದ್ದರು. ಎರಡನೇ ಪ್ರಯತ್ನವಾಗಿ ಕೇಂದ್ರ ಸಚಿವ ಸದಾನಂದಗೌಡರು ಎಚ್.ಡಿ.ದೇವೇಗೌಡರನ್ನು ಭೇಟಿ ಮಾಡಿ ಮನವೊಲಿಸುವ ಪ್ರಯತ್ನ ಮಾಡಿದರೂ. ಈ ಪ್ರಯತ್ನದಲ್ಲಿ ಪೂರ್ಣ ಯಶಸ್ಸು ಸಿಗಲಿಲ್ಲ. ಪರಿಸ್ಥಿತಿ ಕೈಮೀರುತ್ತಿದೆ ಎಂದರಿತ ಬಿಜೆಪಿ ನಾಯಕರು ಮೊರೆ ಹೋಗಿದ್ದ ರಾಷ್ಟ್ರೀಯ ನಾಯಕರನ್ನು. ಹೀಗಾಗಿ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ನೇರವಾಗಿ ದೇವೇಗೌಡರಿಗೆ ಕರೆ ಮಾಡಿ ಮನವೊಲಿಸಿದ್ದಾರೆ.

ಈ ಹಂತದಲ್ಲಾದರೂ ಜೆಡಿಎಸ್‍ಕಡೆಯಿಂದ ಧನಾತ್ಮಕ ಪ್ರತಿಕ್ರಿಯೆ ಬರುತ್ತದೆಂದು ನಿರೀಕ್ಷಿಸಿದ್ದರು. ಆದರೂ ಜೆಡಿಎಸ್ ತನ್ನ ಕಾರ್ಪೊರೇಟರ್‍ಗಳನ್ನು ರೆಸಾರ್ಟ್‍ಗೆ ಕರೆದೊಯ್ದಿರುವ  ಹಿನ್ನೆಲೆಯಲ್ಲಿ ಆ ಪ್ರಯತ್ನ ಕೂಡ ಯಶಸ್ಸು ಸಿಗದೇ ಹೋಯಿತು. ಅಂತಿಮವಾಗಿ ಪ್ರಧಾನಿ ನರೇಂದ್ರ ಮೋದಿಯವರೇ ದೇವೇಗೌಡರೊಂದಿಗೆ ಚರ್ಚಿಸುವ ಸಾದ್ಯತೆ ಇದೆ ಎಂಬುದು
ಖಚಿತವಾಗಿದ್ದು, ಬಿಜೆಪಿ ಪಾಳಯದಲ್ಲಿ ಈ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲವಾದರೂ ಜೆಡಿಎಸ್ ಪಾಳಯದಲ್ಲಿ ಮಾತ್ರ ಶನಿವಾರ ಮೋದಿಯವರ ಕರೆ ನಿರೀಕ್ಷೆ ಇತ್ತು. ಪ್ರಧಾನಿ ನರೇಂದ್ರ ಮೋದಿಯವರು ಮತ್ತು ಎಚ್.ಡಿ.ದೇವೇಗೌಡರ ನಡುವೆ ಸಂಬಂಧ ಚೆನ್ನಾಗಿರುವುದು ಗುಟ್ಟಾಗಿ ಉಳಿದಿರುವ ವಿಚಾರವೇನಲ್ಲ.

ಮೋದಿಯವರು ದೇವೇಗೌಡರ ವಿಚಾರದಲ್ಲಿ ಅನುಸರಿಸುವ ಧೋರಣೆಗಳು ಮತ್ತು ದೇವೇಗೌಡರೂ ಸಹ ಮೋದಿಯವರ ವಿಚಾರದಲ್ಲಿ ಅನುಸರಿಸುವ ನಡೆ ಕೂಡ ಗಮನಾರ್ಹ. ಪ್ರಧಾನಿಯವರನ್ನು ಟೀಕೆ ಮಾಡುವ ಸಂದರ್ಭದಲ್ಲಿ ಸಲಹಾ ರೂಪದಲ್ಲಿ ದೇವೇಗೌಡರು ಮಾತನಾಡುವುದು ಸಹ ಬಹಿರಂಗ ವಿಚಾರ. ಹೀಗಾಗಿ ಮೋದಿಯವರು ದೇವೇಗೌಡರೊಂ ದಿಗೆ ಮಾತನಾಡಿದರೆ ಪರಿಸ್ಥಿತಿಯೇ ಬೇರೆಯಾಗಬಹುದೇನೋ ಎಂದು ಜೆಡಿಎಸ್ ಮುಖಂಡರೂ ಸಹ ಅಭಿಪ್ರಾಯ ಪಡುತ್ತಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.