ಚಿಕಿತ್ಸೆ ಫಲಿಸದೆ ತಾಯಿ ಸಾವು
ತುಮಕೂರು ರಸ್ತೆಯ ಎಸ್ ಆರ್‍ಎಸ್ ಜಂಕ್ಷನ್ ಬಳಿ ಕಳೆದ ಭಾನುವಾರ ದ್ವಿಚಕ್ರ ವಾಹನಕ್ಕೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಬಾಲಕ ಮೃತಪಟ್ಟು ಗಂಭೀರವಾಗಿ ಗಾಯಗೊಂಡಿದ್ದ ಆತನ ತಾಯಿ...

ಬೆಂಗಳೂರು: ತುಮಕೂರು ರಸ್ತೆಯ ಎಸ್ ಆರ್‍ಎಸ್ ಜಂಕ್ಷನ್ ಬಳಿ ಕಳೆದ ಭಾನುವಾರ ದ್ವಿಚಕ್ರ ವಾಹನಕ್ಕೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಬಾಲಕ ಮೃತಪಟ್ಟು ಗಂಭೀರವಾಗಿ ಗಾಯಗೊಂಡಿದ್ದ ಆತನ ತಾಯಿ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಗಾಯತ್ರಿ ನಗರ ನಿವಾಸಿ ಸುನಿತಾ ಮೃತ ದುರ್ದೈವಿ. ಭಾನುವಾರ ಬೆಳಗ್ಗೆ ನಡೆದ ಅಪಘಾತದಲ್ಲಿ ಇವರ ಪುತ್ರ ಲಿಖಿತ್‍ಗೌಡ ಸ್ಥಳದಲ್ಲೇ ಮೃತಪಟ್ಟಿದ್ದರು. ಘಟನೆ ಸಂಬಂಧ ಖಾಸಗಿ ಬಸ್ ಚಾಲಕ ಮಧುಗಿರಿ ಮೂಲದ ತಿಮ್ಮರಾಜು (33) ಎಂಬಾತನನ್ನು ಪೀಣ್ಯ ಪೊಲೀಸರು ಬಂಧಿಸಿ ಬಸ್ ವಶಪಡಿಸಿಕೊಂಡಿದ್ದರು. ಪೂಜೆಗೆ ಹೋಗುವಾಗ ಅಪಘಾತ: ಚಿಕ್ಕಬಾಣಾವರದಲ್ಲಿರುವ ಸಹೋದರನ ಮನೆಯಲ್ಲಿ ಭಾನುವಾರ ಸತ್ಯನಾರಾಯಣ ಪೂಜೆ ಇದ್ದ ಕಾರಣ ಸುನೀತಾ ಅವರು ಮಗನನ್ನು ಕರೆದುಕೊಂಡು ಬೆಳಿಗ್ಗೆ 8.45ರ ಸುಮಾರಿಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದರು.
ತುಮಕೂರು ರಸ್ತೆ ಎಸ್ ಆರ್‍ಎಸ್ ಜಂಕ್ಷನ್ ಬಳಿ ಬಂದಾಗ ದಿಢೀರ್ ಎಂದು ಕಾಣಿಸಿಕೊಂಡ ಗುಂಡಿಯಲ್ಲಿ ಸ್ಕೂಟರ್ ಇಳಿಸುವುದನ್ನು ತಪ್ಪಿಸುವ ಯತ್ನದಲ್ಲಿ ಸುನೀತಾ ಅವರು ಸ್ಕೂಟರನ್ನು ಬಲಕ್ಕೆ ತೆಗೆದುಕೊಂಡರು. ಅದೇ ಸಮಯದಲ್ಲಿ ನೆಲಮಂಗಲ ಕಡೆಗೆ ಹೋಗುತ್ತಿದ್ದ ಖಾಸಗಿ ಬಸ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿತ್ತು.
ಹಿಂದೆ ಕುಳಿತಿದ್ದ ಲಿಖಿತ್, ಬಸ್‍ನ ಮುಂಭಾಗಕ್ಕೆ ಬಿದ್ದಾಗ ಆತನ ತಲೆ ಮೇಲೆ ಬಸ್‍ನ ಚಕ್ರ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದ. ಸುನೀತಾ ಅವರ ಬಲಗೈ ಹಾಗೂ ತಲೆಗೆ ಪೆಟ್ಟಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೆ ಶುಕ್ರವಾರ ನಸುಕಿನಲ್ಲಿ ಮೃತಪಟ್ಟಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


