ಉಪನ್ಯಾಸಕರ ವರ್ಗಾವಣೆ ಕೌನ್ಸೆಲಿಂಗ್ ಮುಂದೂಡಿಕೆ
ಬೆಂಗಳೂರಿನ ಖಾಲಿ ಹುದ್ದೆ ತೋರಿಸದೇ ವರ್ಗಾವಣೆ ಕೌನ್ಸೆಲಿಂಗ್ ನಡೆಸಲು ಮುಂದಾದ ಕಾಲೇಜು ಶಿಕ್ಷಣ ಇಲಾಖೆ ವಿರುದ್ಧ ಉಪನ್ಯಾಸಕರು ತಿರುಗಿಬಿದಿದ್ದು, ಕೊನೆಗೆ ವರ್ಗಾವಣೆ...

ಬೆಂಗಳೂರು: ಬೆಂಗಳೂರಿನ ಖಾಲಿ ಹುದ್ದೆ ತೋರಿಸದೇ ವರ್ಗಾವಣೆ ಕೌನ್ಸೆಲಿಂಗ್ ನಡೆಸಲು ಮುಂದಾದ ಕಾಲೇಜು ಶಿಕ್ಷಣ ಇಲಾಖೆ ವಿರುದ್ಧ ಉಪನ್ಯಾಸಕರು ತಿರುಗಿಬಿದಿದ್ದು, ಕೊನೆಗೆ ವರ್ಗಾವಣೆ ಪ್ರಕ್ರಿಯೆಯನ್ನೇ ಮುಂದೂಡಿದ ಬೆಳವಣಿಗೆ ಗುರುವಾರ ನಡೆಯಿತು.
ಇಲ್ಲಿನ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಹೈದ್ರಾಬಾದ್- ಕರ್ನಾಟಕದ ಉಪನ್ಯಾಸಕರ ವರ್ಗಾವಣೆ ಕೌನ್ಸೆಲಿಂಗ್‍ಗೆ ಆನಿಸಲಾಗಿತ್ತು. ವರ್ಗಾವಣೆ ಬಯಸಿ ಅರ್ಜಿ ಸಲ್ಲಿಸಿದ್ದ 258 ಉಪನ್ಯಾಸಕರು ಹಾಜರಿದ್ದರು. ಪ್ರಕ್ರಿಯೆಯಂತೆ ಕಾಲೇಜು ಶಿಕ್ಷಣ ಇಲಾಖೆ ಅಧಿಕಾರಿಗಳು ಮೊದಲು ದಾಖಲೆ ಪರಿಶೀಲನೆ ಮುಂದಾದಾಗ ಖಾಲಿ ಹುದ್ದೆಗಳನ್ನು ತೋರಿಸದೆ ಎಲ್ಲಿಗೆ ವರ್ಗಾವಣೆ ಮಾಡುತ್ತೀರಿ ಎಂದು ಅಭ್ಯರ್ಥಿಗಳು ಪ್ರಶ್ನಿಸಿದರು. ಈ ವೇಳೆ ಉಂಟಾದ ಗೊಂದಲ, ಮಾತಿನ ಚಕಮಕಿಯಿಂದಾಗಿ ವರ್ಗಾವಣೆ ಪ್ರಕ್ರಿಯೆಯನ್ನೇ ಮುಂದೂಡುವಂತಾಯಿತು.
ಬಿಬಿಎಂಪಿ ವ್ಯಾಪ್ತಿಯ ಖಾಲಿ ಹುದ್ದೆಗಳನ್ನು ಪ್ರಕಟಿಸದೆ ಇದ್ದಿದ್ದು ಉಪನ್ಯಾಸಕರ ಆಕ್ರೋಶಕ್ಕೆ ಕಾರಣವಾಗಿತ್ತು. ಪದವಿ ಕಾಲೇಜುಗಳ ಉಪ ನ್ಯಾಸಕರ ಕೋರಿಕೆ ವರ್ಗಾವಣೆಗಾಗಿ ಏಪ್ರಿಲ್ ನಲ್ಲಿ ಅರ್ಜಿ ಆಹ್ವಾನಿಸಲಾಗಿತ್ತು. ಹೈದ್ರಾಬಾದ್- ಕರ್ನಾಟಕ ಭಾಗದ ಉಪನ್ಯಾಸಕರಿಗೆ 371 (ಜೆ) ಮೀಸಲು ಪ್ರಕಾರ ಬಿಬಿಎಂಪಿ ವ್ಯಾಪ್ತಿಯಲ್ಲಿ ಶೇ.8ರಷ್ಟು ಹುದ್ದೆಗಳನ್ನು ಮೀಸಲಿರಿಸಿ ಹೈ-ಕ ಭಾಗದ ಉಪನ್ಯಾಕರಿಗೆ ಅವಕಾಶ ನೀಡದೇ ಇದ್ದಿದ್ದರಿಂದ, ಕೆಲವು ಉಪನ್ಯಾಸಕರು ಸರ್ಕಾರದ ನಿಲುವು ಪ್ರಶ್ನಿಸಿ ಕೆಎಟಿ ಮೊರೆ ಹೋಗಿದ್ದರು. ಹೀಗಾಗಿ ವರ್ಗಾವಣೆಗೆ ತಡೆ ಬಿದ್ದಿತ್ತು. ಉಳಿದಂತೆ ಇತರೆ ಜಿಲ್ಲೆಗಳ ವರ್ಗಾವಣೆ ನಡೆದಿತ್ತು. ಬಿಬಿಎಂಪಿ ವ್ಯಾಪ್ತಿಯಲ್ಲಿ ನೀಡಬೇಕಾದ ಶೇ.8 ರಷ್ಟು ಹುದ್ದೆಗಳು ಎಲ್ಲೆಲ್ಲಿ ಖಾಲಿ ಇವೆ ಎಂಬುದನ್ನು ಕೌನ್ಸೆಲಿಂಗ್ ವೇಳೆ ಪ್ರಕಟಿಸಿದೇ ಇದ್ದಿದ್ದೇ ಆಕ್ರೋಶಕ್ಕೆ ಕಾರಣವಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


