ಜಿಲ್ಲಾ ಸುದ್ದಿ

ಸಂಕಷ್ಟದಲ್ಲಿರುವ ರಾಜ್ಯ ಪ್ರಶಸ್ತಿ ವಿಜೇತ ರೈತನಿಗೆ ಬೇಕಿದೆ ಸಹಾಯ

ಆರು ವರ್ಷಗಳ ಹಿಂದೆ ಮುಸುಕಿನ ಜೋಳ ಬೆಳೆಗೆ ರಾಜ್ಯಮಟ್ಟದ ಕೃಷಿ ಪ್ರಶಸ್ತಿ ಪಡೆದಿದ್ದ ಕೊಪ್ಪಳ ತಾಲೂಕಿನ ಹ್ಯಾಟಿ ಗ್ರಾಮದ ಸಿದ್ದರೆಡ್ಡಿ ದೇವೇಂದ್ರಪ್ಪ...

ಸಂಕಷ್ಟದಲ್ಲಿರುವ ರಾಜ್ಯ ಪ್ರಶಸ್ತಿ ವಿಜೇತ ರೈತನಿಗೆ ಬೇಕಿದೆ ಸಹಾಯ
ಸಿದ್ದರೆಡ್ಡಿ
Published On :

ಬೆಂಗಳೂರು: ಆರು ವರ್ಷಗಳ ಹಿಂದೆ ಮುಸುಕಿನ ಜೋಳ ಬೆಳೆಗೆ ರಾಜ್ಯಮಟ್ಟದ ಕೃಷಿ ಪ್ರಶಸ್ತಿ ಪಡೆದಿದ್ದ ಕೊಪ್ಪಳ ತಾಲೂಕಿನ ಹ್ಯಾಟಿ ಗ್ರಾಮದ ಸಿದ್ದರೆಡ್ಡಿ ದೇವೇಂದ್ರಪ್ಪ ಯಡ್ರಮ್ಮನಹಳ್ಳಿ ಈಗ ಅಕ್ಷರ ಸಹ ಸಂಕಷ್ಟದಲ್ಲಿದ್ದಾರೆ.

2009ರಲ್ಲಿ ಸಿದ್ದರೆಡ್ಡಿ ಅವರು ಕೇವಲು ಎರಡೂವರೆ ಎಕರೆ ಭೂಮಿಯಲ್ಲಿ 112.7 ಕ್ವಿಂಟಲ್ ಮುಸುಕಿನಜೋಳ ಬೆಳೆದಿದ್ದರು. ಇದಕ್ಕಾಗಿ ಕೃಷಿ ಇಲಾಖೆ ಅವರಿಗೆ ಪ್ರಶಸ್ತಿ ನೀಡ ಗೌರವಿಸಿತ್ತು. ಅಲ್ಲದೆ 2008ರಲ್ಲಿ ಕೇವಲ ಎರಡು ಎಕರೆಯಲ್ಲಿ 102 ಕ್ವಿಂಟಲ್ ಮುಸುಕಿನಜೋಳ ಬೆಳೆದದ್ದಕ್ಕಾಗಿ ಪ್ರಗತಿ ಗ್ರಾಮೀಣ ಬ್ಯಾಂಕ್ ಸಿದ್ದರೆಡ್ಡಿಗೆ ಸನ್ಮಾನ ಮಾಡಿತ್ತು.

ಇಷ್ಟೇಲ್ಲಾ ಪ್ರಶಸ್ತಿ, ಸನ್ಮಾನ ಸ್ವೀಕರಿಸಿದ್ದ 49 ವರ್ಷದ ಸಿದ್ದರೆಡ್ಡಿ ಈಗ ಸಂಕಷ್ಟದಲ್ಲಿದ್ದಾರೆ. 4 ಲಕ್ಷ ಸಾಲ ಬಾಧೆಯಿಂದ ಬಳಲುತ್ತಿದ್ದಾರೆ. ಪಂಪ್ ಮತ್ತು ಕೃಷಿ ಉಪಕರಣಕ್ಕಾಗಿ ಸಾಲ ಮಾಡಿದ್ದಾರೆ. ಆದರೆ ಭಾರಿ ಮಳೆಯಿಂದಾಗಿ ಸಿದ್ದರೆಡ್ಡಿ ಬೆಳೆದ ಬಾಳೆ ಹಾಳಾಗಿ, ಸಾಲ ತೀರಿಸಕ್ಕಾಗದೇ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕಳೆದ ವಾರ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ್ದ ಸಿದ್ದರೆಡ್ಡಿ, ಯಾರಾದರೂ ಸಹಾಯ ಮಾಡುತ್ತೀರಾ ಎಂದು ಕೇಳಿದ್ದರು. ಅಲ್ಲದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ತಮ್ಮ ಕಷ್ಟವನ್ನು ವಿವರಿಸುವುದಾಗಿ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.

ಈ ಸಂಬಂಧ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರನ್ನು ಭೇಟಿ ಮಾಡಿದ್ದು, ಅವರು ನನಗೆ ವಿಶ್ವಾಸ ತುಂಬಿದ್ದಾರೆ ಮತ್ತು 10 ಸಾವಿರ ರುಪಾಯಿ ಸಹಾಯ ಮಾಡಿದ್ದಾರೆ ಎಂದು ಸಿದ್ದರೆಡ್ಡಿ ತಿಳಿಸಿದ್ದಾರೆ.

'ಸಾಲ ತೀರಿಸಲು ಬ್ಯಾಂಕ್ ನನ್ನ ಮೇಲೆ ಒತ್ತಡ ಹೇರುತ್ತಿಲ್ಲ. ಆದರೆ ನನ್ನ ಬಾಳೆ ಬೆಳೆ ಸಂಪೂರ್ಣ ಹಾನಿಯಾಗಿರುವುದು ಈಗ ಸಾಲ ಹೇಗೆ ತೀರಿಸುವುದು ಅಂತ ನನಗೆ ಗೊತ್ತಾಗುತ್ತಿಲ್ಲ' ಎಂದಿದ್ದಾರೆ.

ಸಿದ್ದರೆಡ್ಡಿಯನ್ನು ಸಂಪರ್ಕಿಸಲು 9945549869

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.