ಜಿಲ್ಲಾ ಸುದ್ದಿ

8 ರೈತರು ಆತ್ಮಹತ್ಯೆ

ರಾಜ್ಯದಲ್ಲಿ ಸಾಲಬಾಧೆ ಶುಕ್ರವಾರ ಮತ್ತೆ ಎಂಟು ರೈತರ ಪ್ರಾಣ ಕಸಿದುಕೊಂಡಿದೆ. ಶಿರಹಟ್ಟಿ ತಾಲೂಕು ಲಕ್ಷ್ಮೇಶ್ವರ ಪಟ್ಟಣದ ಹಳ್ಳದ...

8 ರೈತರು ಆತ್ಮಹತ್ಯೆ
ಸಾಂದರ್ಭಿಕ ಚಿತ್ರ
Published On :

ಬೆಂಗಳೂರು: ರಾಜ್ಯದಲ್ಲಿ ಸಾಲಬಾಧೆ ಶುಕ್ರವಾರ ಮತ್ತೆ ಎಂಟು ರೈತರ ಪ್ರಾಣ ಕಸಿದುಕೊಂಡಿದೆ. ಶಿರಹಟ್ಟಿ ತಾಲೂಕು ಲಕ್ಷ್ಮೇಶ್ವರ ಪಟ್ಟಣದ ಹಳ್ಳದ ಕೇರಿಯ ಹನಮಂತಪ್ಪ ನಾವಿ (55), ಹಿರೇಕೆರೂರು ತಾಲೂಕಿನ ಪರ್ವತಸಿದ್ದಿಗೇರಿಯ ರೈತ ರಮೇಶ ನಾಯಕ (60), ಹರಪನಹಳ್ಳಿ ತಾಲೂಕಿನ ಲೋಲೇಶ್ವರದ ಬೈರಾಪುರ ಬಸಪ್ಪ (65),ಇಂಡಿ ತಾಲೂಕಿನ ತಡವಲಗಾ ಗ್ರಾಮದ ಮಳಸಿದ್ದಪ್ಪ ಹತ್ತರಕಿ (58) ಮತ್ತು ಪಡಗಾನೂರ
ಗ್ರಾಮದ ಶಮ್ಮದ ಕರೀಮಸಾಬ ಶೇಖ್ (45), ಸಿಂಧನೂರು ತಾಲೂಕು ಜಾಲಿಹಾಳದ ಗುಡದಪ್ಪ ಶಿವಪ್ಪ (28), ರಾಯಭಾಗ ತಾಲೂಕು ರಾಮಪ್ಪ ಪುಂಡಲಿಕ ನಾಯಿಕ (32) ಬೈಲಹೊಲಂಗಲ ತಾಲೂಕಿನ ಲಿಂಗಪ್ಪ  ಮಲ್ಲಪ್ಪ ಕಳ್ಯಾನಳ್ಳಿ (58) ಮೃತರು. ಹನುಮಂತಪ್ಪ ನಾವಿ  ಗುರುವಾರ ರಾತ್ರಿಯೇ ವಿಷ ಕುಡಿದಿದ್ದಾರೆ. ರು.3 ಲಕ್ಷ ಸಾಲ ಹೊಂದಿದ್ದರು. ರಮೇಶ ನಾಯಕ ಅವರೂ ರು.3 ಲಕ್ಷ ಸಾಲ ಮಾಡಿಕೊಂಡಿದ್ದರು. ಬೈರಾಪುರ ಬಸಪ್ಪ ರು. 70
ಸಾವಿರ ಸಾಲ ಹೊಂದಿದ್ದರು. ಅವರು ವಿಷ ಕುಡಿದು ಪ್ರಾಣ ಬಿಟ್ಟಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.