ಬಿಬಿಎಂಪಿ ಚುನಾವಣೆ: ಬೆಂಗಳೂರಿನಾದ್ಯಂತ ಬಿಗಿ ಬಂದೋಬಸ್ತ್
ಶನಿವಾರ ಮುಕ್ತ ಹಾಗೂ ಶಾಂತಿಯುತ ಬಿಬಿಎಂಪಿ ಮತದಾನಕ್ಕೆ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ, ಭದ್ರತೆಗಾಗಿ ಹೊರ ಜಿಲ್ಲೆಗಳಿಂದ ಹೆಚ್ಚಿನ ಪೊಲೀಸ್ ಸಿಬ್ಬಂದಿ ಕರೆಸಲಾಗಿದೆ...

ಬೆಂಗಳೂರು: ಶನಿವಾರ ಮುಕ್ತ ಹಾಗೂ ಶಾಂತಿಯುತ ಬಿಬಿಎಂಪಿ ಮತದಾನಕ್ಕೆ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ, ಭದ್ರತೆಗಾಗಿ ಹೊರ ಜಿಲ್ಲೆಗಳಿಂದ ಹೆಚ್ಚಿನ
ಪೊಲೀಸ್ ಸಿಬ್ಬಂದಿ ಕರೆಸಲಾಗಿದೆ. ಗುರುವಾರ ಸುದ್ದಿಗೋಷ್ಠಿಯಲ್ಲಿ ಪೊಲೀಸ್ ಆಯುಕ್ತ ಎನ್.ಎಸ್. ಮೇಘರಿಕ್ ಈ ವಿಷಯ ತಿಳಿಸಿದರು.
ಶಾಂತಿಯುತ ಮತ ದಾನಕ್ಕೆ ಸಕಲ ಸಿದಟಛಿತೆ ಮಾಡಲಾಗಿದೆ. ಅತಿ ಸೂಕ್ಷ್ಮಮತಗಟ್ಟೆಗಳಿಗೆ ಮುಖ್ಯ ಪೊಲೀಸ್ ಪೇದೆ, ಪೇದೆ, ಹೋಂ ಗಾರ್ಡ್(ಒಟ್ಟು 3); ಸೂಕ್ಷ್ಮ ಮತಗಟ್ಟೆಗೆ ಮುಖ್ಯಪೇದೆ/ಪೇದೆ, ಹೋಂಗಾರ್ಡ್(ಒಟ್ಟು 2) ಹಾಗೂ ಸಾಮಾನ್ಯ ಮತಗಟ್ಟೆಗೆ ಒಬ್ಬ ಪೇದೆಯನ್ನು ನಿಯೋಜಿಸಲಾಗುವುದು ಎಂದು ಹೇಳಿದರು.
ಚುನಾವಣೆ ವೇಳೆ ರಾಜಕೀಯ ಗುಂಪುಗಳ ನಡುವೆ ಪರಸ್ಪರ ಘರ್ಷಣೆ ನಡೆದಾಗ ದೂರು ದಾಖಲಿಸಿಕೊಳ್ಳಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ ಹಾಗೂ ಪೊಲೀಸರೇ ಹಣ
ಹಂಚಲು ಸಹಕರಿಸುತ್ತಿದ್ದಾರೆ ಎಂಬ ದೂರುಗಳು ಹಿಂದೆಲ್ಲ ಕೇಳಿಬಂದಿವೆ. ಈ ಬಗ್ಗೆ ಸೂಕ್ತ ಕ್ರಮಕ್ಕೆ ಸಂಬಂಧಪಟ್ಟ ಡಿಸಿಪಿಗಳಿಗೆ ಸೂಚಿಸಲಾಗಿದೆ ಎಂದು ಆಯುಕ್ತರು ಸ್ಪಷ್ಟಪಡಿಸಿದರು. ಹಿರಿಯ ಪೊಲೀಸ್ ಅಧಿಕಾರಿಗಳಾದ ಡಾ. ಎಂ.ಎ.ಸಲೀಂ, ಬಿ. ಎನ್.ಎಸ್. ರೆಡ್ಡಿ, ಚಂದ್ರಶೇಖರ್, ರೂಪಾ ಇತರರು ಇದ್ದರು.
ಪಿಕೆಟಿಂಗ್: ಬಂದೂಬಸ್ತ್‍ಗಾಗಿ 751 ಸಂಚಾರ ದಳ ನಿಯೋಜಿಸಲಾಗಿದೆ. ಇದರ ಉಸ್ತುವಾರಿಗೆ 44 ಡಿಸಿಪಿ/ಎಸಿಪಿ ದರ್ಜೆಯ ಅ„ಕಾರಿಗಳನ್ನು ನೇಮಿಸಲಾಗಿದೆ. ಪ್ರತಿ
ಠಾಣೆಗೆ 3 ಪಿಕೆಟಿಂಗ್‍ನಂತೆ ನಗರದಲ್ಲಿ 309 ಪಿಕೆಟಿಂಗ್‍ಗಳ ವ್ಯವಸ್ಥೆ ಮಾಡಲಾಗಿದೆ.
ಸಮಾಜಘಾತುಕ ಶಕ್ತಿಗಳಿಗೆ ಎಚ್ಚರಿಕೆ: ಮತದಾನದ ಹಿನ್ನೆಲೆಯಲ್ಲಿ 1,336 ಸಮಾಜಘಾತುಕ ಶಕ್ತಿಗಳಿಗೆ ಎಚ್ಚರಿಕೆ ನೀಡಲಾಗಿದೆ. ಸಿಆರ್‍ಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ಶಾಂತಿ ಸುವ್ಯವಸ್ಥೆ ಕಾಪಾಡಲು ಮುಚ್ಚಳಿಕೆ ಪಡೆಯಲಾಗಿದೆ. ನ್ಯಾಯಾಲಯದಲ್ಲಿರುವ 1,794 ವಾರೆಂಟ್ ಗಳನ್ನು ಬಜಾವಣೆ (ಹೊರಡಿಸುವುದು) ಮಾಡಲಾಗಿದ್ದು, ವಾರೆಂಟ್ ಇರುವವರನ್ನು ಬಂ„ಸುವಂತೆ ಸೂಚಿಸಲಾಗಿದೆ. ನಗರಾದ್ಯಂತ ಒಟ್ಟು 5,268 ಆಯುಧಗಳನ್ನು ಪೊಲೀಸ್ ಸುಪರ್ದಿಗೆ ಪಡೆಯಲಾಗಿದೆ.
ನಿಷೇಧಾಜ್ಞೆ: ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡಲು ಗುರುವಾರ ಸಂಜೆಯಿಂದ ಮತದಾನ ಮುಕ್ತಾಯವಾಗುವವರೆಗೆ (ಆ.22ರ ರಾತ್ರಿ) ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಮದ್ಯ ಮಾರಾಟ ನಿಷೇಧಿಸಲಾಗಿದೆ. ಈ ವೇಳೆ ಗುಂಪು ಸೇರುವುದು, ಸ್ಫೋಟಕ ವಸ್ತುಗಳನ್ನು ಸಿಡಿಸುವುದು, ಬಹಿರಂಗ ಸಭೆ ಸಮಾರಂಭಗಳಿಗೆ ಅವಕಾಶ ಇರುವುದಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


