ಲೋಕ ಹಗರಣ: 9ನೇ ಆರೋಪಿ ಬಂಧನ
ಲೋಕಾಯುಕ್ತ ಸಂಸ್ಥೆ ಭ್ರಷ್ಟಾಚಾರ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ವಿಶೇಷತನಿಖಾ ದಳದ (ಎಸ್‍ಐಟಿ) ಅಧಿಕಾರಿಗಳು ಮತ್ತೊಬ್ಬ...

ಬೆಂಗಳೂರು: ಲೋಕಾಯುಕ್ತ ಸಂಸ್ಥೆ ಭ್ರಷ್ಟಾಚಾರ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ವಿಶೇಷತನಿಖಾ ದಳದ (ಎಸ್‍ಐಟಿ) ಅಧಿಕಾರಿಗಳು ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ.ಆಂತರಿಕ ಭದ್ರತಾ ದಳದಲ್ಲಿ ಪ್ರಥಮದರ್ಜೆ ನೌಕರನಾಗಿ ಕೆಲಸ ಮಾಡುತ್ತಿದ್ದ ನರಸಿಂಹಮೂರ್ತಿ ಬಂಧಿತ ಆರೋಪಿ. ಮಂಗಳವಾರ ಬೆಂಗಳೂರಿನಲ್ಲಿ ನರಸಿಂಹಮೂರ್ತಿಯನ್ನು ಬಂಧಿಸಿದ ಎಸ್ ಐಟಿ ಅಧಿಕಾರಿಗಳು ಬುಧವಾರ ಲೋಕಾಯುಕ್ತ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಲೋಕೋಪಯೋಗಿಇಲಾಖೆ ಎಂಜಿನಿಯರ್ ಡಿ.ಉದಯ್ ಶಂಕರ್ ನೀಡಿದ ದೂರಿನ ಆಧಾರದ ಮೇಲೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ನ್ಯಾಯಾಲಯಕ್ಕೆ ತನಿಖಾಧಿಕಾರಿ ಸೈಮನ್ತಿಳಿಸಿದರು. ಆರೋಪಿಯನ್ನು ವಿಚಾರಣೆನಡೆಸಬೇಕಿರುವುದರಿಂದ 7 ದಿನ ವಶಕ್ಕೆ ನೀಡುವಂತೆ ಕೋರಿದರು. ವಿಚಾರಣೆನಡೆಸಿದ ನ್ಯಾಯಾಲಯ ಆ.25ರವರೆಗೆ ವಶಕ್ಕೆ ನೀಡಿದ ಆದೇಶಿಸಿದರು. ಮಾಗಡಿ ಉಪ ವಿಭಾಗ ಲೋಕೋಪಯೋಗಿ ಇಲಾಖೆ ಕಾಮಗಾರಿಗಳ ಭ್ರಷ್ಟಾಚಾರಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪ ಎದುರಿಸುತ್ತಿರುವ ಉದಯ್ ಶಂಕರ್ ಅವರನ್ನು ಪ್ರಕರಣದಿಂದ ಕೈ ಬಿಡಲು ವಿ.ಭಾಸ್ಕರ್ ಹಾಗೂ ನರಸಿಂಹಮೂರ್ತಿ ಮೂಲಕ ನ್ಯಾ.ವೈ.ಭಾಸ್ಕರ್‍ರಾವ್ ಅವರ ಪುತ್ರ ಅಶ್ವಿನ್‍ರಾವ್ ರು.5 ಲಕ್ಷ ಹಣ ನೀಡುವಂತೆ ಬೆದರಿಕೆ ಹಾಕಿದ್ದರು. ಈ ಸಂಬಂಧ ಉದಯ್ ಭಾಸ್ಕರ್ ಅವರು ಎಸ್ ಐಟಿಗೆ ಮಂಗಳವಾರ ದೂರು ಸಲ್ಲಿಸಿದ್ದರು. ಉದಯ್ ಶಂಕರ್ ಸೇರಿದಂತೆ 30ಕ್ಕೂಹೆಚ್ಚು ಅಧಿಕಾರಿಗಳ ವಿರುದ್ಧ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿದ್ದು ನ್ಯಾಯಾಲಯಕ್ಕೆ ಆರೋಪಪಟ್ಟಿಯು ಸಲ್ಲಿಕೆಯಾಗಿದೆ. ಈ ಪ್ರಕರಣದಿಂದ ಪಾರು ಮಾಡುವುದಾಗಿ ಹೇಳಿ ರು.5 ಲಕ್ಷ ಹಣ ಕೇಳಿದ್ದರು ಎಂದು ಉದಯ್ ಶಂಕರ್ ಆರೋಪಿಸಿದ್ದಾರೆ.
ನನ್ನದೇನು ತಪ್ಪಿಲ್ಲ: ನರಸಿಂಹಮೂರ್ತಿ
ಆರೋಪಿ ನರಸಿಂಹಮೂರ್ತಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ ನಂತರ ಕಾರಿಡಾರ್‍ನ ಕುರ್ಚಿ ಮೇಲೆ ಕುಳಿತುಕೊಳ್ಳಲು ಹೇಳಲಾಗಿತ್ತು. ಈ ವೇಳೆ ತನಿಖಾಧಿಕಾರಿ ಸೈಮನ್ ಅವರು ನ್ಯಾಯಾಲಯದ ಒಳಗೆ ಹೋಗಿದ್ದರು. ಆಗ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಆರೋಪಿ ನರಸಿಂಹಮೂರ್ತಿ, ನನ್ನದೇನು ತಪ್ಪಿಲ್ಲ. ಪಿಸ್ತೂಲ್ ಲೈಸನ್ಸ್ ವಿಚಾರವಾಗಿ ಅಶ್ವಿನ್‍ರಾವ್ ಅವರ ಭೇಟಿಯಾಗಿತ್ತು. ಅದನ್ನು ಹೊರತುಪಡಿಸಿದರೆ ನನಗೂ ಅವರಿಗೂ ಯಾವುದೇ ಸ್ನೇಹ, ನಂಟು ಇಲ್ಲ. ಲಂಚ ಹಗರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


