ಜಿಲ್ಲಾ ಸುದ್ದಿ

ಮತ್ತೆ ನಾಲ್ವರು ರೈತರ ಆತ್ಮಹತ್ಯೆ

ಸಾಲಬಾಧೆ, ಬೆಳೆ ನಷ್ಟದ ಹಿನ್ನಲೆಯಲ್ಲಿ ಬುಧವಾರ ರಾಜ್ಯದಲ್ಲಿ ನಾಲ್ವರು ರೈತರು ಆತ್ಮಹತ್ಯೆಗೆ...

ಮತ್ತೆ ನಾಲ್ವರು ರೈತರ ಆತ್ಮಹತ್ಯೆ
ಸಂಗ್ರಹ ಚಿತ್ರ
Published On :

ಬೆಂಗಳೂರು: ಸಾಲಬಾಧೆ, ಬೆಳೆ ನಷ್ಟದ ಹಿನ್ನಲೆಯಲ್ಲಿ ಬುಧವಾರ ರಾಜ್ಯದಲ್ಲಿ ನಾಲ್ವರು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ಪಟ್ಟಣದ 15ನೇ ವಾರ್ಡ್‍ನ ಪರಶುರಾಮ್ (24), ಎಚ್.ಡಿ.ಕೋಟೆ ತಾಲೂಕಿನ ಜಿ.ಬಿ. ಸರಗೂರಿ ನ ಸಿದ್ದೇಗೌಡ (35) , ಲಿಂಗಸ್ಗೂರು ತಾಲೂಕಿನ ಕಡದರಗಡ್ಡಿ ಗ್ರಾಮದ ದುರಗಪ್ಪ (45) ಮತ್ತು ಶಹಾಪುರ ತಾಲೂಕಿನ ಹಸನಸಾಬ ಚೌದ್ರಿ (45) ಮೃತ ರೈತರು ಪರಶುರಾಮ್ ರು. 2 ಲಕ್ಷ ಸಾಲ ಹೊಂದಿದ್ದರು.

ಈ ವರ್ಷ ಸರಿಯಾಗಿ ಮಳೆಯಾಗದ ಕಾರಣ ಬೆಳೆಯೂ ಕೈಕೊಟ್ಟಿತ್ತು. ಸಾಲ ತೀರಿಸುವ ಮಾರ್ಗ ಕಾಣದಾದ ರೈತ ನೇಣು ಹಾಕಿಕೊಂಡಿದ್ದಾರೆ. ಸಿದ್ದೇಗೌಡ ಅವರು 2 ಎಕರೆ ಜಮೀನು ಹೊಂದಿದ್ದರು. ಇದರಲ್ಲಿ ಬೆಳೆ ಬೆಳೆಯಲು ರು. 2 ಲಕ್ಷ ಕೈ ಸಾಲ ಮಾಡಿ ಕೊಂಡಿದ್ದರು.

ಆದರೆ ಮಳೆ ಇಲ್ಲದೆ ಬೆಳೆದ ಬೆಳೆ ಒಣಗಲಾರಂ ಭಿಸಿತ್ತು. ಇದರಿಂದ ಮನನೊಂದ ಸಿದ್ದೇಗೌಡ ವಿಷ ಕುಡಿದಿದ್ದರು. ಬುಧವಾರ ಮೃತಪಟ್ಟಿದ್ದಾರೆ. ಇನ್ನು, ದುರಗಪ್ಪ 14 ಎಕರೆ ಜಮೀನಿನಲ್ಲಿ ಹತ್ತಿ, ಬತ್ತ, ಸೂರ್ಯಕಾಂತಿ ಬೆಳೆ ಬೆಳೆಯಲು ಹತ್ತು ಲಕ್ಷ ಸಾಲ ಮಾಡಿಕೊಂಡಿದ್ದರು. ಸಾಲ ಭೀತಿ ಹಿನ್ನೆಲೆಯಲ್ಲಿ ಅವರು ವಿಷ ಕುಡಿದು ಸಾವಿಗೆ ಶರಣಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.