ಲಾಲ್ ಬಾಗ್ ನಲ್ಲಿ ಜೇನು ಕಚ್ಚಿ ಬಾಲಕಿ ಸಾವು
ಲಾಲ್‍ಬಾಗ್‍ನಲ್ಲಿ ಫಲಪುಷ್ಪ ಪ್ರದರ್ಶನ ವೀಕ್ಷಿಸಲು ಹೋಗಿದ್ದಾಗ ಜೇನು ಹುಳು ಕಡಿತದಿಂದ ಗಂಭೀರವಾಗಿ ಗಾಯಗೊಂಡಿದ್ದ 7 ವರ್ಷದ ಬಾಲಕಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ...

ಬೆಂಗಳೂರು: ಲಾಲ್‍ಬಾಗ್‍ನಲ್ಲಿ ಫಲಪುಷ್ಪ ಪ್ರದರ್ಶನ ವೀಕ್ಷಿಸಲು ಹೋಗಿದ್ದಾಗ ಜೇನು ಹುಳು ಕಡಿತದಿಂದ ಗಂಭೀರವಾಗಿ ಗಾಯಗೊಂಡಿದ್ದ 7 ವರ್ಷದ ಬಾಲಕಿ ಚಿಕಿತ್ಸೆ ಫಲಿಸದೆ
ಮೃತಪಟ್ಟಿದ್ದಾಳೆ.
ಪದ್ಮನಾಭನಗರ ಗುರುಪ್ರಸಾದ್ ಹಾಗೂ ಸುಗುಣ ದಂಪತಿ ಪುತ್ರಿ ವೈಷ್ಣವಿ ಮೃತ ಬಾಲಕಿ. ಆ.15ರಂದು ಪಾಲಕರೊಂದಿಗೆ ಲಾಲ್‍ಬಾಗ್‍ಗೆ ಆಗಮಿಸಿದ್ದಾಗ ಜೇನು ಹುಳುಗಳು ಕಚ್ಚಿದ್ದವು.
ತಂದೆ ತಾಯಿ ಜತೆ ಲಾಲ್‍ಬಾಗ್ ಫಲಪುಷ್ಪ ವೀಕ್ಷಣೆಗೆ ತೆರಳಿದ್ದಳು. ಮಧ್ಯಾಹ್ನ 12 ಕ್ಕೆ ತಂದೆ ಜತೆ ಕಡಿಮೆ ಜನ ದಟ್ಟಣೆ ಇರುವ ಕೆಂಪೇಗೌಡ ಟವರ್ ಬಳಿ ತೆರಳಿದ್ದಳು. ಮರದ ಬಳಿ ಆಟವಾಡುತ್ತಿ ದ್ದಾಗ ಏಕಾಏಕಿ ಜೋರಾಗಿ ಕಿರುಚಲು ಆರಂಬಿsಸಿದ್ದಳು. ಏನಾಯಿತು ಎಂದು ತಂದೆ ಗುರುಪ್ರಸಾದ್ ನೋಡಿದಾಗ ಗುಂಪಾಗಿ ಹೆಜ್ಜೇನುಗಳು ವೈಷ್ಣವಿ ಮೇಲೆ ದಾಳಿ ನಡೆಸಿದ್ದವು.
ಜೇನು ದಾಳಿಯಿಂದ ರಕ್ಷಿಸಲು ಯತ್ನಿಸಿದಾಗ ಗುರುಪ್ರಸಾದ್ ಅವರ ಮೇಲೂ ಜೇನು ಹುಳುಗಳು ದಾಳಿ ಮಾಡಿವೆ. ಸ್ವಲ್ಪ ದೂರದಲ್ಲಿದ್ದ ಪತ್ನಿ ಸುಗುಣ ಸಹಾಯಕ್ಕೆ ಸಾರ್ವಜನಿಕರ ಬಳಿ ಮೊರೆ ಇಟ್ಟಿದ್ದಾರೆ. ಈ ವೇಳೆ ನೆರವಿಗೆ ಧಾವಿಸಿದ ಸ್ಥಳೀಯರು ಜೇನು ಹುಳುಗಳನ್ನು ಓಡಿಸಿದರು. ಬಳಿಕ ಗಾಯಗೊಂಡಿದ್ದ ಇಬ್ಬರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದರು. ಆದರೆ, ಜೇನು ಕಚ್ಚಿದ್ದರಿಂದ ಗಂಭೀರ ಗಾಯವಾಗಿದ್ದ ವೈಷ್ಣವಿಯನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿತ್ತು. ಅದೇ ದಿನವೇ ಹೆಚ್ಚು ಹುಳುಗಳು ಕಚ್ಚಿದ್ದ ಕಾರಣ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಿದ್ದರು. ಚಿಕಿತ್ಸೆ ಫಲಿಸದೆ ಗುರುವಾರ ಸಂಜೆ ವೈಷ್ಣವಿ ಮೃತಪಟ್ಟಿದ್ದಾಳೆ ಎಂದು ಸಿದ್ದಾಪುರ ಪೊಲೀಸರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


