ನಕಲಿ ಪತ್ತೆಗೆ ಕ್ರಮ
ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳ ಬೋಧಕ ಹುದ್ದೆಗಳಿಗೆ 2008-09ನೇ ಸಾಲಿನಲ್ಲಿ ಕೆಪಿಎಸ್ಸಿ ಮುಖಾಂತರ ನಡೆದ ನೇಮಕಾತಿ ಯಲ್ಲಿ ನಕಲಿ ಎಂ.ಫಿಲ್ ಪಡೆದು ಹುದ್ದೆ ಗಿಟ್ಟಿಸಿರುವವರ ಬಗ್ಗೆ ಮಾಹಿತಿ ಕಲೆಹಾಕಲು ಕಾಲೇಜು ಶಿಕ್ಷಣ ಇಲಾಖೆಯೇನೋ ಇದೀಗ ಮುಂದಾಗಿದೆ...

ಬೆಂಗಳೂರು: ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳ ಬೋಧಕ ಹುದ್ದೆಗಳಿಗೆ 2008-09ನೇ ಸಾಲಿನಲ್ಲಿ ಕೆಪಿಎಸ್ಸಿ ಮುಖಾಂತರ ನಡೆದ ನೇಮಕಾತಿ ಯಲ್ಲಿ ನಕಲಿ ಎಂ.ಫಿಲ್ ಪಡೆದು ಹುದ್ದೆ ಗಿಟ್ಟಿಸಿರುವವರ ಬಗ್ಗೆ ಮಾಹಿತಿ ಕಲೆಹಾಕಲು ಕಾಲೇಜು ಶಿಕ್ಷಣ ಇಲಾಖೆಯೇನೋ ಇದೀಗ ಮುಂದಾಗಿದೆ. ಆದರೆ, ಅದು ಅನುಸರಿಸುತ್ತಿರುವ ಮಾರ್ಗ ಮಾತ್ರ ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.
ಈಗಾಗಲೇ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬೋಧಕ ವರ್ಗದವರ ಸಿಂಧುತ್ವದ ಮಾಹಿತಿ ಅರಸಿರುವ ಕಾಲೇಜು ಶಿಕ್ಷಣ ಇಲಾಖೆ ಸೂಕ್ತ ಮಾಹಿತಿ ಕಳುಹಿಸುವಂತೆ ಸೂಕ್ತ ಮಾಹಿತಿ ಕಳುಹಿಸುವಂತೆ ಪ್ರಾಂಶುಪಾಲರು, ಜಂಟಿ ನಿರ್ದೇಶಕರಿಗೆ ಸೂಚಿಸಿದ್ದು, ಸೆ.30ರೊಳಗೆ ಅಗತ್ಯ ಮಾಹಿತಿ ನೀಡುವಂತೆ ತಿಳಿಸಿದೆ. ಜೊತೆಗೆ ಪ್ರಮಾಣ ಪತ್ರಗಳ ಸಿಂಧುತ್ವ ಅಸಿಂಧುಗೊಂಡಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ ವಿವರ ನೀಡುವಂತೆಯೂ ಹೇಳಿದೆ. 2008-09ರಲ್ಲಿ 2550 ಬೋಧಕ ಸಿಬ್ಬಂದಿ ನೇಮಕಾತಿ ವೇಳೆ ಹೊರ ರಾಜ್ಯದ ಅನರ್ಹ ವಿವಿಗಳಿಂದ ದೂರಶಿಕ್ಷಣ ಎಂಫಿಲ್, ಪಿಎಚ್‍ಡಿ ಪಡೆದ 1500ಕ್ಕೂ ಹೆಚ್ಚು ಜನ ಕೆಲಸಗಿಟ್ಟಿಸಿದ್ದರು.
ಇದರಿಂದ ರಾಜ್ಯದಲ್ಲೇ ನಿತ್ಯ ಕಾಲೇಜಿಗೆ ಹೋಗಿ ಈ ಪದವಿ ಪಡೆದವರಿಗೆ ಕೆಲಸ ತಪ್ಪಿತ್ತು. ಅಲ್ಲದೇ, ಅರ್ಜಿ ಹಾಕುವ ದಿನಾಂಕವನ್ನು ಮತ್ತೆ ಐದು ದಿನ ವಿಸ್ತರಿಸಿದ್ದರಿಂದ ಮತ್ತೆ ಸುಮಾರು 9 ಸಾವಿರ ಅರ್ಜಿಗಳು ಬಂದಿದ್ದವು. ಅಲ್ಲದೇ ಹೀಗೆ ಅರ್ಜಿ ಸಲ್ಲಿಸಿದವರು ಮೊದಲು ತಾತ್ಕಾಲಿಕ ಪ್ರಮಾಣ ಪತ್ರ ಸಲ್ಲಿಸಿ ನಂತರ ಅಂತಿಮ ಪ್ರಮಾಣ ಪತ್ರ ನೀಡಿದ್ದರು. ಈ ವೇಳೆ ಸಾಕಷ್ಟು ಗೋಲ್‍ಮಾಲ್ ನಡೆದಿರುವುದು, ಅರ್ಹರಲ್ಲದವರು ಹಣಕ್ಕಾಗಿ ಎಂಫಿಲ್ ಪಡೆದು ಇಲ್ಲಿ ಕೆಲಸ ಪಡೆದಿರುವ ಬಗ್ಗೆ ಸಾಕಷ್ಟು ಚರ್ಚೆಯಾಗಿತ್ತು. ವಿಧಾನಪರಿಷತ್ತಿನಲ್ಲಿ ಸುಮಾರು 14 ಸದಸ್ಯರು
ತನಿಖೆ ನಡೆಸುವಂತೆ ಅಂದಿನ ಉನ್ನತ ಶಿಕ್ಷಣ ಸಚಿವರನ್ನು ಆಗ್ರಹಿಸಿದ್ದರು.
ಇದೀಗ ಕಾಲೇಜು ಶಿಕ್ಷಣ ಇಲಾಖೆಯು ಸುತ್ತೋಲೆ ಹೊರಡಿಸಿ ಕಾಲೇಜುಗಳಿಂದ ಮಾಹಿತಿ ಕೇಳಿದೆ. `ಬೋಧಕ ಹುದ್ದೆಗೆ ನಿಗದಿಪಡಿಸಲಾಗಿರುವ ಪಿಎಚ್‍ಡಿ ಹಾಗೂ ಎಂಪಿsಲ್
ವಿದ್ಯಾರ್ಹತೆಯನ್ನು ಬೋಧಕರು ಹೊಂದಿದ್ದು, ಈ ಪದವಿ ಪ್ರಮಾಣ ಪತ್ರಗಳನ್ನು ಪರಿಶೀಲಿಸಿದಾಗ ಹಲವರು ಹೊರ ರಾಜ್ಯಗಳ ವಿವಿಯಿಂದ ಪ್ರಮಾಣಪತ್ರ ಪಡೆದಿದ್ದಾರೆ.
ಆದರೆ, ಪ್ರಮಾಣ ಪತ್ರಗಳ ನೈಜತೆ ಬಗ್ಗೆ ಕೂಲಂಕಷವಾಗಿ ಸಂಬಂಧಪಟ್ಟ ವಿವಿ, ಪ್ರಾಧಿಕಾರಗಳಿಂದ ದೃಢೀಕರಣ ಪಡೆದು ಪರಿಶೀಲಿಸಿರುವುದು ಕಂಡುಬಂದಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


