ಜಿಲ್ಲಾ ಸುದ್ದಿ

ಎಂಟು ರೈತರು ಆತ್ಮಹತ್ಯೆಗೆ ಶರಣು

ಮೈಸೂರಿನ ಮೂವರು ಸೇರಿದಂತೆ ರಾಜ್ಯದಲ್ಲಿ ಶನಿವಾರ ಒಟ್ಟು ಎಂಟು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ....

ಎಂಟು ರೈತರು ಆತ್ಮಹತ್ಯೆಗೆ ಶರಣು
ಸಾಂದರ್ಭಿಕ ಚಿತ್ರ
Published On :

ಬೆಂಗಳೂರು: ಮೈಸೂರಿನ ಮೂವರು ಸೇರಿದಂತೆ ರಾಜ್ಯದಲ್ಲಿ ಶನಿವಾರ ಒಟ್ಟು ಎಂಟು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಮಂಟೀಕೊಪ್ಪಲು ಗ್ರಾಮದ ಬಾಲು ಜಗದೀಶ್ (42), ಅರೇನಹಳ್ಳಿಯ ಮಹದೇವ್ (54) ಮತ್ತು ಹುಣಸೂರು ತಾಲೂಕಿನ ಬೀಚನಹಳ್ಳಿಯ ಪೊಲೇಗೌಡ (50) ಆತ್ಮಹತ್ಯೆಗೆ ಶರಣಾಗಿದ್ದಾರೆ. ಜಗದೀಶ್ ಅವರು ಬೆಳೆದಿದ್ದ ಶುಂಠಿಗೆ ಸೂಕ್ತ ಬೆಲೆ ಸಿಕ್ಕಿರಲಿಲ್ಲ. ಇನ್ನು ಮಹದೇವ್ ಅವರು ತಂಬಾಕು ಬೆಳೆದಿದ್ದರಾದರೂ, ಇಳುವರಿ ಕುಂಠಿತವಾಗಿತ್ತು. ಪೊಲೇಗೌಡ ಅವರಿಗೆ 4ಲಕ್ಷ ಬ್ಯಾಂಕ್ ಸಾಲ ಮತ್ತು ಕೈಸಾಲವಿತ್ತು.

ಮಂಡ್ಯ ತಾಲೂಕಿನ ದುದ್ದ ಹೋಬಳಿಯ ಮಾಚಹಳ್ಳಿಯ ಸಿದ್ದರಾಜು (42) 3 ಲಕ್ಷ ಸಾಲವಿತ್ತು. ಅರಸೀಕೆರೆ ತಾಲೂಕಿನ ಹಬ್ಬನಘಟ್ಟ ಗುತ್ತಿನಕೆರೆ ಗ್ರಾಮದ ಕಾಂತರಾಜು (35) ಅವರು ಕೊಳವೆ ಬಾವಿ  ವಿಫಲಗೊಂಡ ಹಿನ್ನೆಲೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಅವರಿಗೆ ರೂ.2 ಲಕ್ಷ ಸಾಲವಿತ್ತು. ಅಫ್ಜಲ್ಪುರ ತಾಲೂಕಿನ ಅವರಳ್ಳಿಯ ತೊಗರಿ ಬೆಳೆಗಾರ ಪ್ರಶಾಂತ ಕೆ.ಪಾಟೀಲ್(34) ನೇಣು ಹಾಕಿ ಕೊಂಡಿದ್ದಾರೆ. ಹತ್ತು ಎಕರೆ ಜಮೀನು ಹೊಂದಿದ್ದ ಪಾಟೀಲ್, 5 ಲಕ್ಷ ಸಾಲ ಹೊಂದಿದ್ದರು.

ಹಿರೇಕೆರೂರು ತಾಲೂ ಕಿನ ಮೇದೂರ ಗ್ರಾಮದ ಭರಮಪ್ಪ ಚಿಕ್ಕ ಮತ್ತೂರ (65) ಬೆಳೆ ವೈಫಲ್ಯ ಮತ್ತು ರೂ. 3ಲಕ್ಷ ಸಾಲಕ್ಕೆ ಹೆದರಿ ನೇಣು ಬಿಗಿದು ಕೊಂಡಿದ್ದಾರೆ. ಗದಗ ಜಿಲ್ಲೆ ಲಕ್ಷ್ಮೇಶ್ವರದ ಸುವರ್ಣಗಿರಿ ತಾಂಡಾದ ಶಂಕ್ರಪ್ಪ ನರಸಿಂಗಪ್ಪ ಲಮಾಣಿ (55) ಸಾಲಬಾಧೆಯಿಂದ ನೇಣಿಗೆ ಶರಣಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.