ಭಿಕ್ಷಾಟನೆಯಲ್ಲಿದ್ದ 194 ಮಕ್ಕಳ ರಕ್ಷಣೆ
ಮುಗ್ದ ಕಂದಮ್ಮಗಳನ್ನು ಕಂಕುಳಲ್ಲಿ ಹೊತ್ತುಕೊಂಡು ಬಿಸಿಲು, ಚಳಿ, ಮಳೆಯಲ್ಲಿ ಅವುಗಳ ಮುಖ ತೋರಿಸಿ ಸಾರ್ವಜನಿಕರಿಗೆ ಕರುಣೆ ಬರುವಂತೆ ಮಾಡಿ ....

ಬೆಂಗಳೂರು: ಮುಗ್ದ ಕಂದಮ್ಮಗಳನ್ನು ಕಂಕುಳಲ್ಲಿ ಹೊತ್ತುಕೊಂಡು ಬಿಸಿಲು, ಚಳಿ, ಮಳೆಯಲ್ಲಿ ಅವುಗಳ ಮುಖ ತೋರಿಸಿ ಸಾರ್ವಜನಿಕರಿಗೆ ಕರುಣೆ ಬರುವಂತೆ ಮಾಡಿ ಭಿಕ್ಷಾಟನೆ ಮಾಡುವ ಜಾಲಕ್ಕೆ ಕಡಿವಾಣ ಹಾಕಲು ಮುಂದಾಗಿರುವ ನಗರ ಪೊಲೀಸ್ `ಅಪರೇಷನ್ ಸ್ಮೈಲ್' ಹೆಸರಿನಲ್ಲಿ ಗುರುವಾರ ವಿಶೇಷ ಕಾರ್ಯಾಚರಣೆ ನಡೆಸಿದರು. ಗುರುವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಯೆವರೆಗೂ ವಗರದ ಪ್ರಮುಖ ಪ್ರದೇಶಗಳಲ್ಲಿ ಈ ಕಾರ್ಯಾಚರಣೆ ನಡೆಸಿ 194ಕ್ಕೂ ಅಧಿಕ ಮಕ್ಕಳನ್ನು ರಕ್ಷಿಸಲಾಗಿದೆ. ಈ 25 ಹಸುಗೂಸುಗಳು ಇವೆ. ಉಳಿದಂತೆ 65 ಹೆಂಗಸರು ಹಾಗೂ 8 ಗಂಡಸರು ಸೇರಿ 284 ಜನರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಕಾರ್ಯಾಚರಣೆ ವೇಳೆ ಭಿಕ್ಷುಕರನ್ನು ತೀವ್ರ
ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಮಕ್ಕಳ ಪಾಲಕರು ಅವರೇ ಎಂಬದನ್ನು ಖಚಿತ ಪಡಿಸಿಕೊಳ್ಳಲು ಡಿಎನ್‍ಎ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ.
ಕೆಲ ತಿಂಗಳುಗಳ ಹಿಂದೆ ಗೃಹ ಸಚಿವ ಕೆ.ಜೆ. ಜಾರ್ಜ್ ಅವರು ಭಿಕ್ಷಾಟನೆ ಬಗ್ಗೆ ಕ್ರಮ ಕೈಗೊಳ್ಳುವಂತೆ ನಗರ ಪೊಲೀಸ್ ಆಯುಕ್ತರಿಗೆ ಸೂಚಿಸಿದ್ದರು. ಅದರಲ್ಲೂ ಎಳೆ ಕಂದಮ್ಮಗಳನ್ನು ಹೊತ್ತು ಭಿಕ್ಷೆ ಬೇಡುವ ಅಮಾನವೀಯ ಪದಟಛಿತಿಗೆ ಕಡಿವಾಣ ಹಾಕಬೇಕು ಎಂದಿದ್ದರು. ಈ ಹಿಂದೆ ಸಾಕಷ್ಟು ಬಾರಿ ಭಿಕ್ಷಾಟನೆ ವಿರುದ್ಧ ಕಾರ್ಯಾಚರಣೆ ನಡೆದಿದೆ. ಆದರೆ, ಸಮನ್ವಯ ಕೊರತೆಯಿಂದ ಅದು ಸಮರ್ಪಕವಾಗಿ ಆಗಿರಲಿಲ್ಲ
ಸರ್ಕಾರೇತರ ಸಂಸ್ಥೆಗಳ (ಎನ್‍ಜಿಒ) ನೆರವಿನೊಂದಿಗೆ ಪೊಲೀಸರ ತಂಡದಲ್ಲಿ, ವೈದ್ಯರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಹೀಗೆ ವಿವಿಧ ಇಲಾಖೆಗಳ ಸಿಬ್ಬಂದಿ ಒಳಗೊಂಡ 10 ಮಂದಿ ಇರುವ 7 ತಂಡಗಳನ್ನು ರಚಿಸಲಾಗಿತ್ತು.ರಕ್ಷಣೆ ವೇಳೆ ಮಕ್ಕಳು ಅಥವಾ ಭಿಕ್ಷಾಟನೆಯಲ್ಲಿ ತೊಡಗಿದವರು ಗಾಬರಿ ಬೀಳಬಾರದೆಂದು ಪೊಲೀಸರು ಮಫ್ತಿಯಲ್ಲಿ ತೆರಳಿದ್ದರು. ಮಕ್ಕಳನ್ನು ರಕ್ಷಿಸಿ ಅವರನ್ನು ಸರ್ಕಾರದ ಬಾಲಮಂದಿರಗಳಲ್ಲಿ ಆಶ್ರಯ ನೀಡಲು ಖಾಸಗಿ ವಾಹನಗಳನ್ನು ಬಳಸಿಕೊಳ್ಳಲಾಗಿತ್ತು. ಪೊಲೀಸ್ ವಾಹನಗಳಲ್ಲಿ ಕರೆದೊಯ್ದರೆ ಭೀತಿಗೆ ಒಳಗಾಗು ತ್ತಾರೆಂದು ಖಾಸಗಿ ವಾಹನ ಬಳಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಹರಿಶೇಖರನ್ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


