ಪತ್ನಿ ಕೊಂದು ಆತ್ಮಹತ್ಯೆಗೆ ಶರಣಾದ
ಅನಾರೋಗ್ಯ ಹಾಗೂ ಕೌಟುಂಬಿಕ ಕಲಹದಿಂದ ಬೇಸತ್ತ ನಿವೃತ್ತ ಸರ್ಕಾರಿ ನೌಕರರೊಬ್ಬರು ಪತ್ನಿಯನ್ನು ಸಲಾಕೆಯಿಂದ ಹೊಡೆದು ಕೊಲೆ ಮಾಡಿ ಬಳಿಕ ತಾನೂ...

ಬೆಂಗಳೂರು: ಅನಾರೋಗ್ಯ ಹಾಗೂ ಕೌಟುಂಬಿಕ ಕಲಹದಿಂದ ಬೇಸತ್ತ ನಿವೃತ್ತ ಸರ್ಕಾರಿ ನೌಕರರೊಬ್ಬರು ಪತ್ನಿಯನ್ನು ಸಲಾಕೆಯಿಂದ ಹೊಡೆದು ಕೊಲೆ ಮಾಡಿ ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೂಡಲಪಾಳ್ಯ ಸಮೀಪದ ಸರಸ್ವತಿ ನಗರ ನಿವಾಸಿ ಗೌರಮ್ಮ (60) ಕೊಲೆಯಾದವರು. ಇವರ ಪತಿ ಗಿರೀಶ್ (64) ಎಂಬುವರೆ ಕೊಲೆ ಮಾಡಿ ಬಳಿಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಂಗಳವಾರ ರಾತ್ರಿ ದಂಪತಿ ನಡುವೆ ಜಗಳ ಆರಂಭವಾಗಿದ್ದು, ವಿಕೋಪಕ್ಕೆ ತಿರುಗಿದಾಗ ಕಬ್ಬಿಣದ ಸಲಾಕೆಯಿಂದ ಪತ್ನಿ ಗೌರಮ್ಮರ ಮೇಲೆ ಗಿರೀಶ್ ಹಲ್ಲೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡಿ ದ್ದ ಗೌರಮ್ಮನನ್ನು ಪುತ್ರ ದೀಪು ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಿಸದೆ ತಡರಾತ್ರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮತ್ತೊಂದೆಡೆ ಪತ್ನಿ ಹಲ್ಲೆ ಮಾಡಿದ ಬಳಿಕ ಭೀತಿಗೊಂಡ ಗಿರೀಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿವರ: ಸರಸ್ವತಿ ನಗರದಲ್ಲಿ ನಿವೃತ್ತಿ ಜೀವನ ಸಾಗಿಸುತ್ತಿದ್ದ ಗಿರೀಶ್ ಮತ್ತು ಗೌರಮ್ಮ ದಂಪತಿಗೆ ಮೂವರು ಮಕ್ಕಳು. ಹಿರಿಯ ಮಗ ದಿಲೀಪ್ ಚೆನ್ನೈನಲ್ಲಿ ವಾಯು ಸೇನೆ ವಿಂಗ್ ಕಮಾಂಡರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮತ್ತಿಬ್ಬರು ಮಕ್ಕಳು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಪಾಲಕರ ಜತೆ ವಾಸವಿದ್ದರು. 6 ತಿಂಗಳ ಹಿಂದೆ ಗಿರೀಶ್ ಅವರು ದೆಹಲಿ ಪ್ರವಾಸಕ್ಕೆ ಹೋಗಿದ್ದರು. ಈ ವೇಳೆ ಅವರಿಗೆ ಅನಾರೋಗ್ಯ ಉಂಟಾಗಿ ಬೆನ್ನಿನಲ್ಲಿ ತೀವ್ರ ಸಮಸ್ಯೆ ಕಾಣಿಸಿಕೊಂಡಿತ್ತು. ಬೆಂಗಳೂರಿಗೆ ಬಂದ ಗಿರೀಶ್ ಮಾನಸಿಕ ಸ್ಥಿಮಿತ ಕಳೆದುಕೊಂಡವರಂತೆ ವರ್ತಿಸುತ್ತಿದ್ದರು. ಪದೇ ಪದೇ ಜೀವನ ಸಾಕಾಗಿ ಹೋಗಿದೆ. ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎನ್ನುತ್ತಿದ್ದರು. ಅಲ್ಲದೇ, ಕ್ಷುಲಕ ಕಾರಣಗಳಿಗೆ ಪತ್ನಿ ಜತೆ ಜಗಳ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಮಂಗಳವಾರ ಸಂಜೆ ಕೂಡ ದಂಪತಿ ನಡುವೆ ಜಗಳವಾಗಿದೆ. ಅದು ವಿಕೋಪಕ್ಕೆ ತಿರುಗಿ ಕಬ್ಬಿಣದ ಸಲಾಕೆಯಿಂದ ಗೌರಮ್ಮ ಮೇಲೆ ಗಿರೀಶ್ ಮಾರಣಾಂತಿಕ ಹಲ್ಲೆನಡೆಸಿದ್ದರು. ಕೂಗಾಟ ಕೇಳಿದ ನೆರೆಹೊರೆಯವರು ಏನಾಗಿದೆ ಎಂದು ನೋಡಲು ಮನೆಗೆ ಧಾವಿಸಿದ್ದರು. ವಾಯುವಿಹಾರಕ್ಕೆ ತೆರಳಿದ್ದ ಮಗ ದೀಪು ಅದೇ ಸಮಯಕ್ಕೆ ವಾಪಸ್ಸಾಗಿದ್ದರು. ತಾಯಿ ರಕ್ತದ ಮಡುವಿನಲ್ಲಿರುವುದನ್ನು ಗಮನಿಸಿದ ಆತ, ನೆರೆಹೊರೆಯವರ ಸಹಾಯದಿಂದ ತಾಯಿಯನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಪತ್ನಿ ಮೇಲೆ ಹಲ್ಲೆಯಿಂದ ಭೀತಿಗೊಂಡ ಗಿರೀಶ್ ಆತ್ಮಹತ್ಯೆ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ವಿಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


