ಲಂಚ ಪಡೆದ ಎಎಸ್ಸೈ ಸಸ್ಪೆಂಡ್
ಸಂಚಾರ ನಿಯಮ ಉಲ್ಲಂಘಿಸುವ ವಾಹನ ಸವಾರರಿಂದ ಲಂಚ ಪಡೆದ ಆರೋಪದ ಮೇಲೆ ಚಿಕ್ಕಪೇಟೆ ಸಂಚಾರ ಪೊಲೀಸ್ ಠಾಣೆ ...

ಬೆಂಗಳೂರು: ಸಂಚಾರ ನಿಯಮ ಉಲ್ಲಂಘಿಸುವ ವಾಹನ ಸವಾರರಿಂದ ಲಂಚ ಪಡೆದ ಆರೋಪದ ಮೇಲೆ ಚಿಕ್ಕಪೇಟೆ ಸಂಚಾರ ಪೊಲೀಸ್ ಠಾಣೆ ಸಹಾಯಕ ಸಬ್ ಇನ್ಸ್ ಪೆಕ್ಟರ್(ಎಎಸ್ಸೈ) ಶ್ರೀನಿವಾಸ ಎಂಬುವರನ್ನು ಅಮಾನತುಗೊಳಿಸಲಾಗಿದೆ.
ನೋ ಪಾರ್ಕಿಂಗ್ ಸ್ಥಳದಿಂದ ಸಾಗಿಸಿರುವ ವಾಹನವನ್ನು ಬಿಡುಗಡೆ ಮಾಡಲು ಹಣ ಪಡೆಯುತ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದರು. ಶ್ರೀನಿವಾಸ ಅವರಿಗೆ ಟೈಗರ್ ವಾಹನದ ಉಸ್ತುವಾರಿ ನೀಡಲಾಗಿತ್ತು. ವಾಹನದ ಜತೆಗೆ ನೇಮಿಸಿರುವ ವ್ಯಕ್ತಿಗೆ ವಾಹನವನ್ನು ಟೋ ಮಾಡುವ ಪ್ರಕ್ರಿಯೆಯನ್ನು ಚಿತ್ರಿಕರಿಸುವಂತೆ ಹೇಳಲಾಗಿತ್ತು.
ಅದರಲ್ಲಿ ಶ್ರೀನಿವಾಸ ಅವರು ಲಂಚ ಪಡೆಯುತ್ತಿರುವುದು ದಾಖಲಾಗಿತ್ತು. ವಿಡಿಯೋ ಪರಿಶೀಲಿಸಿ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ ಬಳಿಕ ಅವರನ್ನು ಅಮಾನತು ಮಾಡಲಾಗಿದೆ ಎಂದು ಅಧಿಕಾರಿ ಹೇಳಿದರು.
ನೋ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿರುವ ವಾಹನಗಳನ್ನು ಶ್ರೀನಿವಾಸ್ ಟೋ ಮಾಡುತ್ತಿದ್ದರು. ಬಳಿಕ ವಾಹನ ಮಾಲೀಕರಿಂದ ದಂಡ ಪಡೆದು ರಸೀದಿ ನೀಡುವ ಬದಲು ಸ್ವಲ್ಪ ಹಣ ಪಡೆದು ವಾಹನ ಬಿಡುತ್ತಿದ್ದರು. ಈ ಹಣದಲ್ಲಿ ಸ್ವಲ್ಪ ಮೊತ್ತವನ್ನು ಟೈಗರ್ ವಾಹನದ ಜತೆ ಕೆಲಸ ಮಾಡುವವರಿಗೂ ಹಂಚುತ್ತಿದ್ದರು. ಈ ಬಗ್ಗೆ ಹಲವಾರು ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಶ್ರೀನಿವಾಸ ಅವರನ್ನು ಲಂಚ ಪಡೆಯುವಾಗ ಹಿಡಿದು ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


