ಜಿಲ್ಲಾ ಸುದ್ದಿ

ಕಸ ವಿಲೇವಾರಿ ಮಾಡದ ಹೋಟೆಲ್‍ಗೆ ರು.2 ಲಕ್ಷ ದಂಡ

ಕಸ ಬೇರ್ಪಡಿಸದ ಹೋಟೆಲ್ ಮಾಲೀಕರ ಬೊಕ್ಕಸಕ್ಕೆ ಬಿಬಿಎಂಪಿ ಕೈ ಹಾಕಿದೆ. ಸಮರ್ಪಕವಾಗಿ ಸಗಟು ಕಸ ವಿಲೇವಾರಿ ಮಾಡದ ಐಷಾರಾಮಿ...

ಕಸ ವಿಲೇವಾರಿ ಮಾಡದ ಹೋಟೆಲ್‍ಗೆ ರು.2 ಲಕ್ಷ ದಂಡ
ಸಾಂದರ್ಭಿಕ ಚಿತ್ರ
Published On :

ಬೆಂಗಳೂರು: ಕಸ ಬೇರ್ಪಡಿಸದ ಹೋಟೆಲ್ ಮಾಲೀಕರ ಬೊಕ್ಕಸಕ್ಕೆ ಬಿಬಿಎಂಪಿ ಕೈ ಹಾಕಿದೆ. ಸಮರ್ಪಕವಾಗಿ ಸಗಟು ಕಸ ವಿಲೇವಾರಿ ಮಾಡದ ಐಷಾರಾಮಿ ಹೋಟೆಲ್‍ಗಳ ಮೇಲೆ ಗುರುವಾರ ದಾಳಿ ನಡೆಸಿದ ಆರೋಗ್ಯಾಧಿಕಾರಿಗಳ ತಂಡ, ಚಾನ್ಸರಿ ಹೋಟೆಲ್‍ಗೆ ರು2 ಲಕ್ಷ ದಂಡ ವಿಧಿಸಿದೆ.

ಬೆಳಗ್ಗೆ ಪೂರ್ವ ವಲಯದ ಆರೋಗ್ಯಾಧಿಕಾರಿ ಡಾ.ಸವಿತಾ ನೇತೃತ್ವದ 10 ಅಧಿಕಾರಿಗಳ ತಂಡ ನಗರದ ಪ್ರಮುಖ ಹೋಟೆಲ್ ಗಳ ಮೇಲೆ ದಾಳಿ ನಡೆಸಿತು. ಘನ ತ್ಯಾಜ್ಯ ನಿರ್ವಹಣೆ ನಿಯಮದನ್ವಯ ಬೃಹತ್ ಕಸ ಉತ್ಪಾದಿಸುವ ಘಟಕಗಳು ಸ್ವಂತ ವ್ಯವಸ್ಥೆಯಡಿ ವಿಲೇವಾರಿ ವ್ಯವಸ್ಥೆ ಮಾಡಿಕೊಳ್ಳಬೇಕು. ಆದರೆ, ಈ ನಿಯಮವನ್ನು ಅನುಸರಿಸದ ಹೋಟೆಲ್‍ಗಳ ಮೇಲೆ ಕ್ರಮ ತೆಗೆದುಕೊಳ್ಳಲು ಮುಂದಾಗಿರುವ ಬಿಬಿಎಂಪಿ ಆಡಳಿತಾಧಿಕಾರಿ ವಿಜಯ್ ಭಾಸ್ಕರ್ ನಗರದ ಹೋಲೆಲ್ ಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸುವಂತೆ ಆದೇಶಿಸಿದ್ದಾರೆ.

ಲ್ಯಾವೇಲಿ ರಸ್ತೆಯ ಚಾನ್ಸರಿ, ಕೆ.ಸಿ.ದಾಸ್, ಚರ್ಚ್‍ಸ್ಟ್ರೀಟ್‍ನ ಎಂಪೈರ್ ಹೋಟೆಲ್, ಸೇಂಟ್ ಮಾಕ್ರ್ಸ್ ರಸ್ತೆಯ ಕೋಶಿಶ್ ಹೋಟೆಲ್‍ಗಳಿಗೆ ಭೇಟಿ ನೀಡಿದ ಅಧಿಕಾರಿಗಳ ತಂಡ, ಘನ ತ್ಯಾಜ್ಯವನ್ನು ಪರಿಶೀಲಿಸಿದೆ. ಈ ವೇಳೆ ಹಸಿ ಹಾಗೂ ಒಣ ತ್ಯಾಜ್ಯವನ್ನು ವಿಂಗಡಿಸದೇ ಒಂದೆಡೆ ಶೇಖರಣೆ ಮಾಡುತ್ತಿದ್ದ ಹೋಟೆಲ್ ಚಾನ್ಸರಿ ವ್ಯವಸ್ಥೆ ಬಗ್ಗೆ ತಂಡ ಆಕ್ರೋಶಗೊಂಡಿದೆ. ಅಲ್ಲದೆ, ಈಗಾಗಲೇ ಹಲವು ಬಾರಿ ನೋಟಿಸ್ ನೀಡಿದ್ದರೂ ಕ್ರಮ ಕೈಗೊಳ್ಳದೇ ಇರುವುದಕ್ಕಾಗಿ ರು.2 ಲಕ್ಷ ದಂಡ ವಿಧಿಸಿದ್ದಾಗಿ ಡಾ. ಸವಿತಾ ತಿಳಿಸಿದ್ದಾರೆ.

ಉಳಿದ ನಾಲ್ಕು ಹೋಟೆಲ್‍ಗಳು ನಿಯಮಾನುಸಾರ ಕ್ರಮ ಕೈಗೊಂಡಿರುವ ಹಿನ್ನೆಲೆಯಲ್ಲಿ ತಂಡ ವಾಪಸಾಗಿದೆ. ಇನ್ನು 1 ವಾರ ದಾಳಿ ನಡೆಸಿ ಪರಿಶೀಲನೆ ನಡೆಸಲಾಗುವುದು. ಶಾಂತಿನಗರ ಆರೋಗ್ಯಾಧಿಕಾರಿ ಡಾ. ಸುನಿತಾ, ಸಿ.ವಿ. ರಾಮನ್ ನಗರದ ಆರೋಗ್ಯ ವೈದ್ಯಾ„ಕಾರಿ ಡಾ. ವೇದಾವತಿ, ಗಂಗಾಧರ್ ಸೇರಿದಂತೆ 10 ಮಂದಿ ತಂಡ ಕಾರ್ಯಾಚರಣೆ ನಡೆಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.