ಸರಣಿ ರಜೆ: ಪ್ರಯಾಣಿಕರ ಜೇಬಿಗೆ ಕತ್ತರಿ
ಸಾರಿಗೆ ಮುಷ್ಕರ, ಕಾರ್ಮಿಕರ ದಿನಾಚರಣೆ ಸೇರಿದಂತೆ ಈ ವಾರಾಂತ್ಯದಲ್ಲಿರುವ ಸರಣಿ ರಜೆಗಳು ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕಲಿವೆ..

ಬೆಂಗಳೂರು: ಸಾರಿಗೆ ಮುಷ್ಕರ, ಕಾರ್ಮಿಕರ ದಿನಾಚರಣೆ ಸೇರಿದಂತೆ ಈ ವಾರಾಂತ್ಯದಲ್ಲಿರುವ ಸರಣಿ ರಜೆಗಳು ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕಲಿವೆ.
ಗುರುವಾರ ಸಾರಿಗೆ ಮುಷ್ಕರ, ಶುಕ್ರವಾರ ಕಾರ್ಮಿಕರ ದಿನಾಚರಣೆ. ಹೀಗಾಗಿ ವಾರಾಂತ್ಯದ ಸರಣಿ ರಜೆಗಳಲ್ಲಿ ಬೆಂಗಳೂರಿನಿಂದ ಹೊರ ಊರಿಗೆ ಪ್ರಯಾಣಿಸುವವರ ಜೇಬಿಗೆ ಕತ್ತರಿ ಬೀಳಲಿದೆ.
ವಾರಾಂತ್ಯದ ಸರಣಿ ರಜೆಗಳ ಲಾಭ ಪಡೆಯುವ ಉದ್ದೇಶದಿಂದ ಖಾಸಗಿ ಬಸ್ ಮಾಲೀಕರು ಟಿಕೆಟ್ ದರಗಳನ್ನು ಹೆಚ್ಚಿಸಿದ್ದಾರೆ. ಬೆಂಗಳೂರಿನಿಂದ ಹುಬ್ಬಳ್ಳಿ, ಮಂಗಳೂರು, ವಿಜಯಪುರ, ಕಲಬುರಗಿ, ಬೀದರ್ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಗೆ ಸಾಗುವ ಸ್ಲೀಪರ್, ಸೆಮಿ ಸ್ಲೀಪರ್, ವೊಲ್ವೋ ಸೇರಿದಂತೆ ವಿವಿಧ ಬಸ್ಸುಗಳ ಪ್ರಯಾಣ ದರದಲ್ಲಿ ಹೆಚ್ಚಳವಾಗಿದೆ.
ಖಾಸಗಿ ಬಸ್ಸುಗಳಲ್ಲಿನ ಪ್ರಯಾಣ ದರ ಶೇ.10ರಿಂದ 12ರಷ್ಟು ಹೆಚ್ಚಳವಾಗಿದ್ದು, 700 ರುಗಳ ಟಿಕೆಟ್ ದರ 900 ರೂ.ಗೆ ಏರಿಕೆಯಾಗಿದೆ. 1,200 ರೂ. ಇರುವ ದರ 1,600 ರೂ. ವರೆಗೆ ಏರಿಕೆಯಾಗಿದ್ದು, ಜನರು ಹೆಚ್ಚಿನ ಹಣ ಪಾವತಿ ಮಾಡಿ ಪ್ರಯಾಣ ಮಾಡುವುದು ಅನಿವಾರ್ಯವಾಗಿದೆ. ಬುಧವಾರದಿಂದಲೇ ಮುಂಗಡ ಟಿಕೆಟ್ ಬುಕ್ಕಿಂಗ್ ಆರಂಭವಾಗಿದ್ದು, ದುಬಾರಿ ಹಣ ನೀಡಿಯೇ ಪ್ರಯಾಣಿಕರು ತಮ್ಮ-ತಮ್ಮ ಟಿಕೆಟ್ ಗಳನ್ನು ಕಾಯ್ದಿರಿಸುತ್ತಿದ್ದಾರೆ.
ಟಿಕೆಟ್ ದರ ಏರಿಕೆಯಾದರೂ ಪ್ರಯಾಣ ಅನಿವಾರ್ಯ, ಹೀಗಾಗಿ ದುಬಾರಿ ಹಣ ನೀಡಿ ಊರಿಗೆ ತೆರಳುತ್ತಿದ್ದೇವೆ ಎಂದು ಪ್ರಯಾಣಿಕರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


