ಜಿಲ್ಲಾ ಸುದ್ದಿ

ಪಾಟಾ ಸಮಾವೇಶಕ್ಕೆ ಪ್ರಧಾನಿ ಮೋದಿಗೆ ಆಹ್ವಾನ

: ಪ್ರತಿಷ್ಠಿತ ಫೆಸಿಫಿಕ್ ಏಷಿಯಾ ಟ್ರಾವೆಲ್ ಅಸೋಸಿಯೇಷನ್ (ಪಾಟಾ) ಸಮಾವೇಶ ಬೆಂಗಳೂರಿನಲ್ಲಿ ಸೆ.6 ರಿಂದ ಮೂರು ದಿನ ನಡೆಯಲಿದೆ.

ಪಾಟಾ ಸಮಾವೇಶಕ್ಕೆ ಪ್ರಧಾನಿ ಮೋದಿಗೆ ಆಹ್ವಾನ
ಆರ್.ವಿ ದೇಶಪಾಂಡೆ
Published On :

ನವದೆಹಲಿ/ಬೆಂಗಳೂರು:ಪ್ರತಿಷ್ಠಿತಫೆಸಿಫಿಕ್ ಏಷಿಯಾ ಟ್ರಾವೆಲ್ಅಸೋಸಿಯೇಷನ್ (ಪಾಟಾ)ಸಮಾವೇಶಬೆಂಗಳೂರಿನಲ್ಲಿ ಸೆ.6ರಿಂದ ಮೂರುದಿನ ನಡೆಯಲಿದೆ.ಸಮಾವೇಶಉದ್ಘಾಟನೆಗೆ ಪ್ರಧಾನಿ ನರೇಂದ್ರಮೋದಿ ಅವರನ್ನು ಆಹ್ವಾನಿಸಲಾಗಿದೆಎಂದು ಉನ್ನತ ಶಿಕ್ಷಣ ಸಚಿವ ಆರ್.ವಿದೇಶಪಾಂಡೆ ತಿಳಿಸಿದ್ದಾರೆ.

ಪ್ರಧಾನಮಂತ್ರಿಗಳನ್ನು ಏಪ್ರಿಲ್ 23ರಂದುಭೇಟಿ ಮಾಡಿ ಸಮಾವೇಶಕ್ಕೆ ಆಗಮಿಸುವಂತೆಆಮಂತ್ರಿಸಲಾಗಿದೆ.ಮುಖ್ಯಮಂತ್ರಿಸಿದ್ದರಾಮಯ್ಯ ಅವರು ಸಮಾವೇಶಕ್ಕೆಆಗಮಿಸುವಂತೆ ಕೋರಿ ಮನವಿಕಳುಹಿಸಿದ್ದರು. ಸಮಾವೇಶದಿಂದಕೇವಲ ಕರ್ನಾಟಕ ಪ್ರವಾಸೋದ್ಯಮಕ್ಕೆಮಾತ್ರವಲ್ಲದೇ ಭಾರತದ ಪ್ರವಾಸೋದ್ಯಮಕ್ಕೂಅನುಕೂಲವಾಗಲಿದೆ. ಪ್ರಧಾನಮಂತ್ರಿಗಳು ಸಕಾರಾತ್ಮಕವಾಗಿಸ್ಪಂದಿಸಿದ್ದಾರೆ ಎಂದು ಅವರುಹೇಳಿದ್ದಾರೆ.

ರಾಜ್ಯದಲ್ಲಿಎಎಸ್ಐ  (ಪ್ರಾಚ್ಯವಸ್ತುಸಂಶೋಧನಾ ಇಲಾಖೆ)ವ್ಯಾಪ್ತಿಯಲ್ಲಿರುವಪ್ರವಾಸೋದ್ಯಮ ಕೇಂದ್ರಗಳಲ್ಲಿಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಎಎಸ್ಐನಿಂದ ಅನುಮತಿಪಡೆಯಬೇಕಿದೆ. ಈನಿಟ್ಟಿನಲ್ಲಿ ಎಎಸ್ಐ ನಿಯಮಾವಳಿಸಡಿಲಿಸುವಂತೆ ಪ್ರಧಾನ ಮಂತ್ರಿಗಳಿಗೆ,ಕೇಂದ್ರಪ್ರವಾಸೋದ್ಯಮ ಸಚಿವರು,ಸಂಸ್ಕೃತಿಸಚಿವರು ಹಾಗೂ ಎಎಸ್ಐ ಡಿಜಿಅವರಿಗೆ ಮನವರಿಕೆ ಮಾಡಿಕೊಡಲಾಯಿತು.ಇದಕ್ಕೆ ಪ್ರಧಾನಮಂತ್ರಿಗಳು ಸಕಾರಾತ್ಮಕವಾಗಿಸ್ಪಂದಿಸಿದ್ದಾರೆ ಎಂದು ಅವರುತಿಳಿಸಿದರು.

ಸ್ವದೇಶದರ್ಶನ ಪ್ರಸಾದ ಯೋಜನೆಗಳಡಿಕರ್ನಾಟಕ ಯಾತ್ರಾ ಸ್ಥಳಗಳನ್ನುಆಯ್ಕೆ ಮಾಡಿಕೊಳ್ಳುವಂತೆ ಮನವಿಮಾಡಿದ್ದೇವೆ.ಸ್ವದೇಶ ಯೋಜನೆಯಡಿಕರ್ನಾಟಕವನ್ನು ಹೊರತು ಪಡಿಸಿದೇಶದ ಇತರ 12 ನಗರಆಯ್ಕೆ ಮಾಡಲಾಗಿದೆ ಎಂದರು.

ವಿಕೇಂದೀಕರಣಕ್ಕೆಆಗ್ರಹ

ಪ್ರವಾಸೋದ್ಯಮಅಭಿವೃದ್ಧಿಗಾಗಿ ಕೇಂದ್ರ ಸಾಂಸ್ಕೃತಿಕ ಹಾಗೂ ಪುರಾತತ್ವಶಾಸ್ತ್ರ ಇಲಾಖೆಯ ಅಧಿಕಾರವಿಕೇಂದ್ರೀಕರಣ ಮಾಡಬೇಕೆಂದುಪ್ರಧಾನಿ ಮೋದಿಗೆ ದೇಶಪಾಂಡೆಆಗ್ರಹಿಸಿದ್ದಾರೆ
.
ಮೋದಿ ಸಮರ್ಥನಾಯಕತ್ವದಲ್ಲಿ ಪ್ರವಾಸೋದ್ಯಮಅಭಿವೃದ್ಧಿಯಾಗುವ ಭರವಸೆಯಿದೆ
.
ನಿಮ್ಮ ದೂರದೃಷ್ಟಿಯಕನಸು ಸಾಕಾರಗೊಳ್ಳಲು ಕೆಲವುತುರ್ತು
ಕ್ರಮಗಳನ್ನುಕೈಗೊಳ್ಳಬೇಕಿದೆ
.
ಪ್ರವಾಸೋದ್ಯಮಸ್ಥಳಗಳ ಅಭಿವೃದ್ಧಿಗೆ ತೊಡಕಾಗುತ್ತಿರುವಅಂಶಗಳ ಬಗ್ಗೆ ಕೇಂದ್ರ ಸರ್ಕಾರಗಮನ ಹರಿಸಬೇಕಿದೆ ಎಂದು ಸಚಿವರುತಿಳಿಸಿದ್ದಾರೆ
.

ರಾಜ್ಯದಕರಾವಳಿ ಪ್ರದೇಶ ಹಾಗೂ ಅಲ್ಲಿನಪ್ರವಾಸೋದ್ಯಮದ ಬಗ್ಗೆ ಪ್ರಸ್ತಾಪಿಸಿದಅವರು ಸಿಆರ್ ಝಡ್ ನಿಯಮದಲ್ಲಿ ಸಡಿಲಿಕೆ ಮಾಡದಿದ್ದರೆ ಅಭಿವೃದ್ಧಿಅಸಾಧ್ಯ.ಸ್ವಾಮಿನಾಥನ್ಶಿಫಾರಸ್ಸಿನಂತೆ ನಿಯಮ ರೂಪಿಸುವಅಗತ್ಯವಿದೆ ಹಾಗೂ ಅದರಂತೆರಾಜ್ಯದಲ್ಲಿ 42ಕಡಲತೀರ ಹಾಗೂ 4ದ್ವೀಪಗಳನ್ನುಗುರುತಿಸಿ ಕೇಂದ್ರಕ್ಕೆ ಪ್ರಸ್ತಾವನೆಸಲ್ಲಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.