ಬೆಂಝ್ ನಿಂದ ಲ್ಯೂಕ್ಸ್ ಡ್ರೈವ್
ನೂತನ ಕಾರುಗಳ ಚಾಲನಾ ಅನುಭವ ನೀಡುವ ಸಲುವಾಗಿ ಮರ್ಸಿಡಿಸ್ ಬೆಂಝ್ ತನ್ನ ಗ್ರಾಹಕರಿಗೆ ನಗರದಲ್ಲಿ ಶನಿವಾರ ಹಾಗೂ ಭಾನುವಾರ `ಲ್ಯೂಕ್ಸ್ ಡ್ರೈವ್' ಕಾರ್ಯಕ್ರಮ ಹಮ್ಮಿಕೊಂಡಿದೆ...

ಬೆಂಗಳೂರು: ನೂತನ ಕಾರುಗಳ ಚಾಲನಾ ಅನುಭವ ನೀಡುವ ಸಲುವಾಗಿ ಮರ್ಸಿಡಿಸ್ ಬೆಂಝ್ ತನ್ನ ಗ್ರಾಹಕರಿಗೆ ನಗರದಲ್ಲಿ ಶನಿವಾರ ಹಾಗೂ ಭಾನುವಾರ `ಲ್ಯೂಕ್ಸ್ ಡ್ರೈವ್' ಕಾರ್ಯಕ್ರಮ ಹಮ್ಮಿಕೊಂಡಿದೆ.
ಚಂಡೀಘಡ, ಗುರ್‍ಗಾಂವ್, ಜೈಪುರ, ಸೂರತ್ ಹಾಗೂ ಮುಂಬೈನ ಯಶಸ್ಸಿನ ಬಳಿಕ `ಲ್ಯೂಕ್ಸ್ ಡ್ರೈವ್'ನ್ನನು ಬೆಂಗಳೂರಿನ ನೈಸ್ ರಸ್ತೆಯಲ್ಲಿ ಆಯೋಜಿಸಲಾಗಿದೆ. ಖ್ಯಾತ ಮರ್ಸಿಡಿಸ್ ಕಾರುಗಳನ್ನು ಚಲಾಯಿಸುವುದರ ಜತೆಗೆ ವಿಕಾಸ್ ಖನ್ನಾ ಅವರ ರುಚಿಯಾದ ಅಡುಗೆ ಸವಿಯುವ ಅವಕಾಶವು ದೊರೆಯುತ್ತದೆ.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಅತಿಥಿಗಳು ತಮ್ಮ ಮೆಚ್ಚಿನ ಮರ್ಸಿಡಸ್ ಕಾರನ್ನು ಖರೀದಿಸಲು ವಿಶೇಷ ಪ್ರದರ್ಶನವೂ ಇದೆ. ಹಾಗೆಯೇ ಮಕ್ಕಳಿಗಾಗಿ ವಿಶೇಷ ಉಡುಗೊರೆಗಳ ಜತೆಗೆ ವಿಶೇಷ ಆಟದ ಜಾಗವೂ ಇದೆ. ಪ್ರಾಂತ್ಯವಿರುತ್ತದೆ. ಇನ್ನು ಉಪಯೋಗಿಸಲಾದ ಕಾರುಗಳಿಗೆ ಉಚಿತ ಮೌಲ್ಯಮಾಪನ ಮಾಡುವ ವಿಶೇಷ ತಂಡ ಹಾಗೂ ಕಾರು ಖರೀದಿಗೆ ಹಣಕಾಸಿನ ವ್ಯವಸ್ಥೆ ಮಾಡಲಾಗುತ್ತದೆ. ಭಾನುವಾರವೂ ನೈಸ್ ರಸ್ತೆಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಗ್ರಾಹಕರನ್ನು ಸಂಪರ್ಕಿಸಲು ಹಾಗೂ ನೂತನ ಗ್ರಾಹಕರ ಸೃಷ್ಟಿಗೆ ಈ ವೇದಿಕೆಯನ್ನು ಮರ್ಸಿಡಿಸ್ ಬೆಂಝ್ ಸಂಸ್ಥೆ ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


