ಸಿಎ ನಿವೇಶನ ಮಾರಾಟ ಬಿಡಿಎಗೆ ಹೈ ನೋಟಿಸ್
ನಾಗರಿಕರ ಸೌಲಭ್ಯಕ್ಕೆ(ಸಿಎ) ಮೀಸಲಿಟ್ಟ ನಿವೇಶನವನ್ನು ಖಾಸಗಿ ಬಿಲ್ಡರ್ ಗೆ ಮಾರಾಟ ಮಾಡಿರುವುದಕ್ಕೆ ಸಂಬಂಧಿಸಿದಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಡಿಎ) ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ...

ಬೆಂಗಳೂರು: ನಾಗರಿಕರ ಸೌಲಭ್ಯಕ್ಕೆ(ಸಿಎ) ಮೀಸಲಿಟ್ಟ ನಿವೇಶನವನ್ನು ಖಾಸಗಿ ಬಿಲ್ಡರ್ ಗೆ ಮಾರಾಟ ಮಾಡಿರುವುದಕ್ಕೆ ಸಂಬಂಧಿಸಿದಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಡಿಎ) ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ನಗರದ ಕೋರಮಂಗಲದ ಸಮೀಪದ ಜಕ್ಕಸಂದ್ರದ ಬಳಿ ಇರುವ ಸಿಎ ನಿವೇಶನವನ್ನು ಶ್ರೀಧರ್ ಮೂರ್ತಿ ಎಂಬುವವರಿಗೆ ಹಂಚಲಾಗಿತ್ತು. ನಂತರ ಅವರು ಅದನ್ನು ಕಯಾಲ್‍ತೀರ್ಮಾ ಎಂಬ ಬಿಲ್ಡರ್‍ಗೆ ಮಾರಿದ್ದರು. ಇದನ್ನು ಪ್ರಶ್ನಿಸಿ ರಂಜಲ್ ರಘುರಾಮ್ ಶೆಣೈ ಸೇರಿದಂತೆ 12 ಮಂದಿ ಹೈಕೋರ್ಟ್‍ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದರು. ವಿಚಾರಣೆ ನಡೆಸಿದ ಹಿರಿಯ ನ್ಯಾ. ಎಸ್.ಕೆ.ಮುಖರ್ಜಿ ಮತ್ತು ನ್ಯಾ.ಬಿ.ವಿ. ನಾಗರತ್ನ ಅವರಿದ್ದ ವಿಭಾಗೀಯ ಪೀಠ, ಬಿಡಿಎ, ಬಿಬಿಎಂಪಿ ಹಾಗೂ ಬಿಲ್ಡರ್‍ಗಳಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆ ಮುಂದೂಡಿದೆ.
ಸಿಎ ನಿವೇಶನವನ್ನ ಖಾಸಗಿ ಬಿಲ್ಡರ್‍ಗೆ ಮಾರಿರುವುದು ಬಿಡಿಎ ಕಾಯ್ದೆ ಸೆಕ್ಷನ್ 38(ಎ)ನ ಪ್ರಕಾರ ಉಲ್ಲಂಘನೆಯಾಗಿದೆ. ಅಲ್ಲದೇ ಇದಕ್ಕೆ ಸಂಬಂಧಿಸಿದಂತೆ 2014ರ ಆ.1ರಂದು ಬಿಲ್ಡರ್‍ಗೆ ಮಾರಾಟ ಪತ್ರವನ್ನೂ ನೀಡಲಾಗಿದೆ. ಸಿಎ ನಿವೇಶ ನಕ್ಕೆಂದು ಮೀಸಲಿಟ್ಟ ಜಾಗ ಸಾರ್ವಜನಿಕರಿಗೆ ಉಪಯೋಗವಾಗುವ ರೀತಿಯಲ್ಲಿ ಬಳಸಬೇಕು. ಆದರೆ, ಖಾಸಗಿ ವ್ಯಕ್ತಿಗಳಿಗೆ ಪ್ರತಿವಾದಿ ಶ್ರೀಧರ್‍ಮೂರ್ತಿ ಮಾರಿದ್ದಾರೆ. ಅದಕ್ಕೆ ಬಿಡಿಎ ಕೂಡ ಸಹಕರಿಸಿದ್ದು, ಕಾನೂನು ಉಲ್ಲಂಘಿಸಿದಂತಾಗಿದೆ. ಆದ್ದರಿಂದ ಮಮಾರಾಟ ಪ್ರಮಾಣ ಪತ್ರ ರದ್ದುಗೊಳಿಸಿ ಸದುದ್ದೇಶಕ್ಕೆ ಆ ಜಾಗ ಬಳಸುವಂತೆ ಬಿಡಿಎಗೆ ನಿರ್ದೇಶಿಸಬೇಕೆಂದು ಅರ್ಜಿಯಲ್ಲಿ ಕೋರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


