ಜಿಲ್ಲಾ ಸುದ್ದಿ

ವಿಜಯ್ ಅಂತ್ಯ ಸಂಸ್ಕಾರ ಇಂದು

ಮೆದುಳು ನಿಷ್ಕ್ರಿಯಗೊಂಡಿದ್ದ ಪೇಂಟರ್ ವಿಜಯ್ ದೇಹದಿಂದ ಕಣ್ಣು, ಲಿವರ್ ಮತ್ತು ಹೃದಯದ ರಕ್ಷಣಾ ಕವಾಟವನ್ನು ವೈದ್ಯರು ದಾನವಾಗಿ ಪಡೆದಿದ್ದಾರೆ...

ವಿಜಯ್ ಅಂತ್ಯ ಸಂಸ್ಕಾರ ಇಂದು
ಅಂಗಾಂಗ ದಾನಮಾಡಿದ ವಿಜಯ್
Published On :

ಬೆಂಗಳೂರು: ಮೆದುಳು ನಿಷ್ಕ್ರಿಯಗೊಂಡಿದ್ದ ಪೇಂಟರ್ ವಿಜಯ್ ದೇಹದಿಂದ ಕಣ್ಣು, ಲಿವರ್ ಮತ್ತು ಹೃದಯದ ರಕ್ಷಣಾ ಕವಾಟವನ್ನು ವೈದ್ಯರು ದಾನವಾಗಿ ಪಡೆದಿದ್ದಾರೆ.

ವಿಜಯ್ ಹೃದಯ ಮತ್ತು ಕಿಡ್ನಿ ಆರೋಗ್ಯವಾಗಿ ಇಲ್ಲದ ಕಾರಣಕ್ಕೆ ಅವುಗಳನ್ನು ಪಡೆದಿಲ್ಲ. ಲಿವರ್ ಭಾಗವನ್ನು ಮತ್ತೊಬ್ಬರಿಗೆ ಕಸಿ ಮಾಡುವ ಶಸ್ತ್ರ ಚಿಕಿತ್ಸೆ ನಡೆಯುತ್ತಿದ್ದು, ಕಣ್ಣುಗಳನ್ನು ನಾರಾಯಣ ನೇತ್ರಾಲಯಕ್ಕೆ ರವಾನಿಸಲಾಗಿದೆ. ಅದೇ ರೀತಿ ಹೃದಯ ಕವಾಟವನ್ನು ನಾರಾಯಣ ಹೃದಯಾಲಯಕ್ಕೆ ಒಪ್ಪಿಸಲಾಗಿದ್ದು, ಅಲ್ಲಿನ ವೈದ್ಯರ ನಿರ್ಧರದಂತೆ ಕಸಿ ಮಾಡುವ ಪ್ರಕ್ರಿಯೆ ನಡೆಯುತ್ತದೆ ಎಂದು ಬಿಜಿಎಸ್ ಗ್ಲೋಬಲ್ ಆಸ್ಪತ್ರೆ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಬಿಜಿಎಸ್ ಗ್ಲೋಬಲ್ ಆಸ್ಪತ್ರೆ ವೈದ್ಯರು ಅಂಗಾಂಗ ಪಡೆದು ಬುಧವಾರ ಮಧ್ಯಾಹ್ನ 3 ಗಂಟೆಗೆ ವಿಜಯ್ ಮೃತ ದೇಹವನ್ನು ಪಾಲಕರಿಗೆ ಒಪ್ಪಿಸಿದರು. ಗುರುವಾರ ಮಧ್ಯಾಹ್ನ 2 ಗಂಟೆಗೆ ಹಳೆಗುಡ್ಡದಹಳ್ಳಿ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ಮಾಡಲಾಗುವುದು ಎಂದು ಕುಟುಂಬ ಸದಸ್ಯರು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.