ಭೂಸ್ವಾಧೀನ ವಿರೋಧಿಸಿ 28ಕ್ಕೆ ಎಡಪಕ್ಷಗಳ ರ್ಯಾಲಿ
ಕೇಂದ್ರ ಸರ್ಕಾರದ ಭೂ ಸ್ವಾಧೀನ ಸುಗ್ರೀವಾಜ್ಞೆ ವಿರುದ್ಧ ಏ.28ರಂದು ನಗರದಲ್ಲಿ ರೈತರ ಮತ್ತು ಕಾರ್ಮಿಕರ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಲು ಎಡಪಕ್ಷಗಳು ತೀರ್ಮಾನಿಸಿವೆ...

ಬೆಂಗಳೂರು: ಕೇಂದ್ರ ಸರ್ಕಾರದ ಭೂ ಸ್ವಾಧೀನ ಸುಗ್ರೀವಾಜ್ಞೆ ವಿರುದ್ಧ ಏ.28ರಂದು ನಗರದಲ್ಲಿ ರೈತರ ಮತ್ತು ಕಾರ್ಮಿಕರ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಲು ಎಡಪಕ್ಷಗಳು ತೀರ್ಮಾನಿಸಿವೆ.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಎಡಪಕ್ಷಗಳ ಮುಖಂಡರಾದ ಜಿ.ವಿ.ಶ್ರೀರಾಮರೆಡ್ಡಿ ,ಪಿ.ವಿ.ಲೋಕೇಶ್, ಜಿ.ಆರ್.ಶಿವಶಂಕರ್ ಮಾತನಾಡಿ, `ಕೇಂದ್ರ ಕೈಗೊಂಡಿರುವ ಭೂಸ್ವಾಧೀನ ನಿರ್ಧಾರಿಂದ ರೈತರು ಬೀದಿ ಪಾಲಾಗುತ್ತಾರೆ. ಅವರನ್ನು ರಕ್ಷಿಸಲು ಈಗಾಗಲೇ ಹೋರಾಟ ರೂಪಿಸಲಾಗಿದ್ದು, ಅದರ ಪ್ರಮುಖ ಹಂತವಾಗಿ ಬೆಂಗಳೂರಿನಲ್ಲಿ ರ್ಯಾಲಿ ನಡೆಸಲಾಗುವುದು' ಎಂದರು.
ರಾಜ್ಯದಲ್ಲಿ ಸುಮಾರು 30ಲಕ್ಷಕ್ಕೂ ಹೆಚ್ಚಿನ ರೈತರು ಬಗರ್ ಹುಕುಂ ಜಮೀನುಗಳಲ್ಲಿ ಸಾಗುವಳಿ ಮಾಡುತ್ತಿದ್ದಾರೆ. ಇಂಥ ಅರ್ಜಿಗಳು ಇನ್ನೂ ವಿಚಾರಣೆ ಹಂತದಲ್ಲಿದೆ. ಆದರೆ, ಕೇಂದ್ರ ಸರ್ಕಾರ ಭೂಸ್ವಾದೀನ ಸುಗ್ರೀವಾಜ್ಞೆ ಮೂಲಕ ಈ ರೈತರ ಜಮೀನು ಕಸಿದುಕೊಳ್ಳಲು ಯತ್ನಿಸುತ್ತಿದೆ. ಇಂಥ ಕರಾಳ ಶಾಸವನ್ನು ಜಾರಿಗೊಳಿಸಲು ಸರ್ಕಾರ ಅಕ್ರಮ ದಾರಿ ಹಿಡಿದಿದೆ. ಕೇಂದ್ರ ಸರ್ಕಾರ ಭೂ ಸ್ವಾಧೀನಕ್ಕೆ ಸಂಬಂಧಿಸಿದ ಕಾಯ್ದೆಯನ್ನು ನಿಯಮದಂತೆ ಚರ್ಚೆಸಿ ಜಾರಿಗೊಳಿಸದೆ ಸುಗ್ರೀವಾಜ್ಞೆ ಮೂಲಕ ಅನುಷ್ಟಾನ ಮಾಡುತ್ತಿದೆ. ಈ ಮೂಲಕ ಕೇಂದ್ರ ಸರ್ಕಾರ ಬಹುರಾಷ್ಟ್ರೀಯ ಕಂಪನಿಗಳಿಗೆ ಅನುಕೂಲ ಮಾಡಿಕೊಡುತ್ತಿದೆ.
ಈ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಸರ್ಕಾರವನ್ನು ಎಚ್ಚರಿಸಲು ರ್ಯಾಲಿ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು. ಕೇಂದ್ರದ ಮಾದರಿಯಲ್ಲೇ ರಾಜ್ಯ ಸರ್ಕಾರ ಕೂಡ ಡಾ.ಬಾಲಸುಬ್ರಮಣ್ಯನ್ ವರದಿ ನೆಪದಲ್ಲಿ ಕ್ರಮಕೈಗೊಳ್ಳುತ್ತೇನೆಂದು ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿದೆ. ಇದರಿಂದ ರೈತರು, ಕೂಲಿ ಕಾರ್ಮಿಕರು ಬೀದಿಗೆ ಬರುವಂತಾಗಿದೆ. ಇದನ್ನು ಕೂಡ ವಿರೋ„ಸಲು ಹೋರಾಟ ರೂಪಿಸಲಾಗಿದ್ದು, ಒಂದು ತಂಡ ಈಗಾಗಲೇ ನರಗುಂದದಿಂದ ಪಾದಯಾತ್ರೆ ಆರಂಭಿಸಿದೆ. ಅಂತಿಮವಾಗಿ 28ರಂದು ರೈತರು, ಕೂಲಿ ಕಾರ್ಮಿಕರು, ಎಲ್ಲಾ ದಲಿತ ಸಂಘಟನೆಗಳ ಕಾರ್ಯಕರ್ತರೂ ಸೇರಿ ಬೃಹತ್ ಪ್ರತಿಭಟನೆ ನಡೆಸುತ್ತಾರೆ ಎಂದು ಶ್ರೀರಾಮ ರೆಡ್ಡಿ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


